ಬೆಂಗಳೂರು:ರಥಸಪ್ತಮಿ ಪ್ರಯುಕ್ತ ಭಾನುವಾರ (ಫೆ. 2) ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ ಯೋಗ ಗಂಗೋತ್ರಿ ವತಿಯಿಂದ ಸತತ ನಾಲ್ಕನೇ ಬಾರಿ ಯೋಗ ಮತ್ತು ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ‘ಆರೋಗ್ಯ ಮತ್ತು ಸಾಮರಸ್ಯ ಕ್ಕಾಗಿ ಯೋಗ’ ಶೀರ್ಷಿಕೆಯಲ್ಲಿ ಯೋಗ ಗಂಗೋತ್ರಿ ಅಧ್ಯಕ್ಷ ಆರಾಧ್ಯ ಗುರೂಜಿ ನೇತೃತ್ವದಲ್ಲಿ ‘ರಥಸಪ್ತಮಿ ಯೋಗ ಉತ್ಸವ 2020’ ನಡೆಯಲಿದೆ.
ಬೆಳಗ್ಗೆ 6.30 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ 108 ಸುತ್ತು ಸೂರ್ಯ ನಮಸ್ಕಾರ, ಮಕ್ಕಳು ಹಾಗೂ ದೊಡ್ಡವರಿಂದ ವಿಶೇಷ ಯೋಗ ಪ್ರದರ್ಶನ, ಸತ್ಸಂಗ, ಮಲ್ಲಕಂಬ ಯೋಗ ಪ್ರದರ್ಶನ, ವಿಶೇಷವಾಗಿ ಆರಾಧ್ಯ ಗುರೂಜಿ ಅವರಿಂದ ಭಾವಶುದ್ಧಿ ಧ್ಯಾನ ನಡೆಯಲಿದೆ. ಬೆಂಗಳೂರು ಮಾತ್ರವಲ್ಲದೇ ಬಳ್ಳಾರಿ, ಬೆಳಗಾವಿ ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಜನ ಆಗಮಿಸಲಿದ್ದಾರೆ. ಭಾಗವಹಿಸುವ ಯೋಗ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತದೆ. ಎಸ್. ವ್ಯಾಸ ವಿವಿ ಕುಲಪತಿ ಡಾ. ಎಚ್.ಆರ್. ನಾಗೇಂದ್ರ, ಮೇಯರ್ ಗೌತಮ್ ಕುಮಾರ್, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಶಾಸಕ ರವಿಸುಬ್ರಹ್ಮಣ್ಯ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಮತ್ತಿತರರು ಉಪಸ್ಥಿತರಿರುವರು.
ಉಚಿತ ಪಾಸ್
ಚಾಮರಾಜಪೇಟೆಯ 5ನೇ ಮುಖ್ಯ ರಸ್ತೆಯಲ್ಲಿರುವ ವಿಜಯವಾಣಿ ಕಚೇರಿ ಹಾಗೂ ಜೆ.ಪಿ. ನಗರದಲ್ಲಿರುವ ಯೋಗ ಗಂಗೋತ್ರಿ ಕಚೇರಿಯಲ್ಲಿ ಉಚಿತ ಪಾಸ್ ಲಭ್ಯವಿರುತ್ತವೆ. ಹೆಚ್ಚಿನ ಮಾಹಿತಿಗೆ ಡಾ. ಎನ್. ಆರಾಧ್ಯ (ಮೊ: 8884646108) ಅವರನ್ನು ಸಂರ್ಪಸಬಹುದು.
ಮಕ್ಕಳಿಗೆ ಯೋಗ ಹಾಸು ವಿತರಣೆ
ಶನಿವಾರ (ಫೆ.1) ಬೆಳಗ್ಗೆ 9.30ಕ್ಕೆ ಥಣಿಸಂದ್ರ, ಹೆಗ್ಡೆ ನಗರದ ರಾಷ್ಟ್ರೆೊತ್ಥಾನ ವಿದ್ಯಾಕೇಂದ್ರದಲ್ಲಿ ರಥಸಪ್ತಮಿ ಕಾರ್ಯಕ್ರಮ ಆಯೋಜಿಸಲಾಗಿದೆ. 8 ಸಾವಿರ ಸರ್ಕಾರಿ ಶಾಲಾ ಮಕ್ಕಳಿಗೆ ಯೋಗ ಮ್ಯಾಟ್ ವಿತರಿಸಲು ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ 3 ಸಾವಿರ ಮಕ್ಕಳಿಗೆ ಯೋಗ ಹಾಸುಗಳನ್ನು ವಿತರಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 3 =
Remember me
