ಬೆಂಗಳೂರು:ಇತ್ತೀಚೆಗೆ ಕೇರಳದಲ್ಲಿ ಟೊಮ್ಯಾಟೊ ಜ್ವರ ಕಾಣಿಸಿಕೊಂಡಿದ್ದು, ಪತ್ತೆಯಾಗಿರುವ ಹೊಸ ರೋಗದಿಂದ ಮತ್ತೆ ಆತಂಕಕ್ಕೀಡಾಗುವಂತೆ ಮಾಡಿದೆ. ಇನ್ನು ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ರೋಗ ಭಾರೀ ಆತಂಕ ಸೃಷ್ಟಿಸಿದೆ.
ಟೊಮ್ಯಾಟೊ ಜ್ವರ ನಮ್ಮ ರಾಜ್ಯಕ್ಕೂ ಹರಡುವ ಭೀತಿಯಿಂದಾಗಿ ಕೇರಳ-ಕರ್ನಾಟಕ ಗಡಿಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೇರಳದಲ್ಲಿ ಈಗಾಗಲೇ 64ಕ್ಕೂ ಹೆಚ್ಚು ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಿದೆಯಂತೆ. ಹಾಗಾಗಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಸೂಕ್ತ. ಇನ್ನೂ ಈ ಬಗ್ಗೆ ಸಚಿವರು ಮಾತ್ರ ಹೀಗೆ ಹೇಳುತ್ತಾರೆ.
ಈ ರೋಗ ಟೊಮ್ಯಾಟೊದಿಂದಲೇ ಬರುತ್ತಿದೆಯೇ ಎಂಬುದು ಸದ್ಯಕ್ಕೆ ಹೇಳಲು ಸಾಧ್ಯವಾಗುತ್ತಿಲ್ಲ, ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಇದರ ಸ್ಪಷ್ಟ ಮಾಹಿತಿ ಕೊಡುವಂತೆ ತಜ್ಞರಿಗೆ ಸೂಚಿಸಲಾಗಿದೆ. ಶೀಘ್ರದಲ್ಲೇ ಈ ರೋಗ ಯಾವುದರಿಂದ ಬರಲಿದೆ ಎಂಬುದು ತಿಳಿಯಲಿದೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.
ಇನ್ನು ಸದ್ಯಕ್ಕೆ ಟೊಮ್ಯಾಟೊ ಬಿಸಾಕ್ಬೇಡಿ, ಇನ್ನೂ ಸ್ಪಷ್ಟ ಮಾಹಿತಿ ಗೊತ್ತಿಲ್ಲ ಈ ರೋಗ ಯಾವುದರಿಂದ ಬರುತ್ತಿದೆ ಎಂದಿದ್ದಾರೆ.
ದೇಹದ ಮೇಲೆ ಕೆಂಪು ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳಲಿದ್ದು, ಹೆಚ್ಚು ಜ್ವರ ಹಾಗೂ ವಾಂತಿಯಾಗುವುದು ಈ ಜ್ವರದ ಲಕ್ಷಣವಾಗಿದ್ದು, ಇದರಿಂದ ಎಚ್ಚರವಹಿಸುವಂತೆ ಆರೋಗ್ಯ ತಜ್ಱರು ಸೂಚಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಡೆತ್​ ಟ್ರೈನ್​​ ವಿಡಿಯೋ ಬಿಡುಗಡೆ ಮಾಡಿ ರಷ್ಯಾದ ಬಣ್ಣ ಬಯಲು ಮಾಡಿದ ಯೂಕ್ರೇನ್​ ಸೇನೆ: ಈ ರೈಲಿನಲ್ಲಿ ಅಂತಹದ್ದೇನಿದೆ?

ಮಧ್ಯರಾತ್ರಿ ಐಎಫ್​ಎಸ್ ಅಧಿಕಾರಿ ವಿಶ್ರಾಂತಿ ಗೃಹಕ್ಕೆ ಬಂತು ಚಿರತೆ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one × one =
Remember me
