ಹುಬ್ಬಳ್ಳಿ: ಮಧುಮೇಹ ನಿಯಂತ್ರಣಕ್ಕೆ ಪಾದಹಸ್ತಾಸನ, ಅರ್ಧಚಕ್ರಾಸನ.. ಬೆನ್ನುನೋವಿಗೆ ಭುಜಂಗಾಸನ, ಪಶ್ಚಿಮೋತ್ತಾಸನ.. ಗಂಭೀರ ರೋಗಗಳಿಗೆ ಕಪಾಲಭಾತಿ, ಅನುಲೋಮ-ವಿಲೋಮ ಪ್ರಾಣಾಯಾಮ… ಇದು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಏರ್ಪಡಿಸಿರುವ 3ನೇ ದಿನದ ಬೃಹತ್ ಯೋಗ ಶಿಬಿರದಲ್ಲಿ ಸೊಂಟ ನೋವು, ಚರ್ಮರೋಗ, ಹೆಪಟೈಟಿಸಿಸ್, ಅಸ್ತಮಾ, ಕ್ಯಾನ್ಸರ್ ಸೇರಿ ವಿವಿಧ ರೋಗದಿಂದ ಗುಣಮುಖರಾಗಲು ಬಾಬಾ ರಾಮದೇವ್ ಗುರೂಜಿ ಯೋಗಾಸನಗಳ ಪ್ಯಾಕೇಜ್​ಅನ್ನು ಶಿಬಿರಾರ್ಥಿಗಳಿಗೆ ಕಲಿಸಿದ ಪರಿ.
ವಿಆರ್​ಎಲ್ ಲಾಜಿಸ್ಟಿಕ್ಸ್, ವಿಜಯವಾಣಿ, ದಿಗ್ವಿಜಯ 24/7 ಸುದ್ದಿವಾಹಿನಿ, ಪವರ್ ನ್ಯೂಸ್, ಪತಂಜಲಿ ಯೋಗ ಪೀಠದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಬೃಹತ್ ಯೋಗ ಶಿಬಿರವನ್ನು ಶನಿವಾರ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ರಘುವೀರಾನಂದ ಸ್ವಾಮೀಜಿ, ಸಚಿವ ಜಗದೀಶ ಶೆಟ್ಟರ್ ಉದ್ಘಾಟಿಸಿದರು.
ಬಾಬಾ ರಾಮದೇವ್ ಮಾತನಾಡಿ, ಯೋಗ ಸಂಪೂರ್ಣ ವೈದ್ಯಕೀಯ ವಿಜ್ಞಾನ. ಯೋಗಿಗಳಾಗುವ ಮೂಲಕ ರೋಗ ಮುಕ್ತ, ನಶೆ ಮುಕ್ತ, ದ್ವೇಷ ಮುಕ್ತ ಬದುಕು ಸಾಗಿಸಿ. ಹಿಂದು, ಮುಸ್ಲಿಂ, ಕ್ರೖೆಸ್ತರು ಹಾಗೂ ಬೇರೆ ಬೇರೆ ಸಮುದಾಯದ ಆಚಾರ-ವಿಚಾರದಲ್ಲಿ ಭಿನ್ನತೆ ಇದೆ. ಪೂಜಿಸುವ ದೇವರುಗಳ ಹೆಸರು ಬೇರೆ. ಆದರೆ, ಈ ಆಚರಣೆ ಪಾಲಿಸುವವರೆಲ್ಲ ಮಾನವರು. ಇರುವುದೊಂದೇ ಮಾನವ ಧರ್ಮ. ಜಾತಿ-ಧರ್ಮ ಯಾವುದೇ ಇರಲಿ ಯೋಗ ಮಾಡಿ. ಇದರಿಂದ ಸಮಾಜದಲ್ಲಿ ಶಾಂತಿ ಉಂಟಾಗುತ್ತದೆ ಎಂದು ತಿಳಿಸಿದರು. ಈ ದೇಶದಲ್ಲಿ ಇರುವವರೆಲ್ಲ ಹಿಂದುಸ್ತಾನಿಗಳು. ಆದರೆ, ಉಪಯೋಗಿಸುವ ವಸ್ತು ಮಾತ್ರ ವಿದೇಶದ್ದು. ಸ್ವದೇಶಿ ವಸ್ತು ಬಳಸಿ. ಯೋಗದಿಂದ ಬಡತನ ದೂರವಾಗುತ್ತದೆ. ಆಸ್ಪತ್ರೆಗೆ ವೆಚ್ಚ ಮಾಡುವ ಬದಲು ಯೋಗದಿಂದ ನಿರೋಗಿಯಾಗಿ ಎಂದರು.
ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ಕನಕದಾಸ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರವಿ ದಂಡಿನ ಮತ್ತಿತರರಿದ್ದರು.
ಇಂದು ಉಪರಾಷ್ಟ್ರಪತಿ ಭಾಗಿ
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಭಾನುವಾರದ ಯೋಗ ಶಿಬಿರದಲ್ಲಿ ಪಾಲ್ಗೊಳ್ಳ ಲಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಮೂವರು ಬಾಲಕರ ಜೀವ ಉಳಿಸಿದ ಯೋಗಪಟು ಆದಿತ್ಯ ಅವರನ್ನು ಸನ್ಮಾನಿಸಲಿದ್ದಾರೆ.
ಚಳಿಗೂ ಜಗ್ಗಲಿಲ್ಲ
ಶನಿವಾರ ಬೆಳಗಿನ ಜಾವ ವಿಪರೀತ ಇಬ್ಬನಿ ಮತ್ತು ಚಳಿ ಇದ್ದರೂ ಯೋಗಾಸಕ್ತರ ಉತ್ಸಾಹ ಒಂದಿನಿತೂ ಕುಂದಿರಲಿಲ್ಲ. ಸಾವಿರಾರು ಜನರು ರೈಲ್ವೆ ಮೈದಾನದಲ್ಲಿ ಯೋಗಾಸನ ಮಾಡಿದರು. ಬೆಳಗ್ಗೆ 4.30ಕ್ಕೆ ಮಕ್ಕಳು, ಮಹಿಳೆಯರು, ವೃದ್ಧರು ಎನ್ನದೇ ಎಲ್ಲ ವಯಸ್ಸಿನವರು ಜಮಾಯಿಸಿದ್ದರು.
ಗತವೈಭವ ಸೃಷ್ಟಿ
ಯೋಗದ ಮೂಲಕ ಭಾರತದ ಗತವೈಭವ ಮರುಕಳಿಸುತ್ತಿದೆ. ಧರ್ಮದ ಪುನರುತ್ಥಾನದಲ್ಲಿ ಯೋಗದ ಪಾತ್ರ ಪ್ರಮುಖವಾದದ್ದು. ಇಡೀ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ. ಯೋಗದ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿ ಸ್ಥಾಪನೆಯಾಗಲಿ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ರಘುವೀರಾನಂದ ಸ್ವಾಮೀಜಿ ಹಾರೈಸಿದರು.
ಯೋಗಾಭ್ಯಾಸದಿಂದ ಹೊಸ ಚೈತನ್ಯ ಲಭಿಸುತ್ತದೆ. ನಾನು 10-15 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ನನಗೆ ಮಧುಮೇಹ ಅಥವಾ ರಕ್ತದೊತ್ತಡ ಸಮಸ್ಯೆ ಇಲ್ಲ. ಬಾಬಾ ರಾಮದೇವ್ ಅವರು ಅಸಂಖ್ಯ ಜನರಲ್ಲಿ ಯೋಗದ ಆಸಕ್ತಿ ಬೆಳೆಸುತ್ತಿದ್ದಾರೆ. ಪ್ರತಿ ಕುಟುಂಬ ಯೋಗಾಸನದಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯಯುತ ಕುಟುಂಬಗಳಾಗಲಿ.
| ಜಗದೀಶ ಶೆಟ್ಟರ್ ಕೈಗಾರಿಕಾ ಸಚಿವ
ಬಿಯರ್ ಕುಡಿದರೆ ದೇಹ ಸಣ್ಣಗಾಗುವುದಿಲ್ಲ, ಲಿವರ್ ಹಾಳಾಗುತ್ತದೆ. ನಿತ್ಯ ಯೋಗ, ಪ್ರಾಣಾಯಾಮ ಮಾಡಿ. ದೇಹ ಸಣ್ಣಗಾಗುತ್ತದೆ. ಕುಟುಂಬದವರೆಲ್ಲ ಯೋಗ ಮಾಡುವ ಮೂಲಕ ಯೋಗಿ ಕುಟುಂಬಗಳು ನಿರ್ವಣವಾಗಲಿ.
| ಬಾಬಾ ರಾಮದೇವ್ ಯೋಗ ಗುರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
