|ಡಿ.ಎಂ.ಮಹೇಶ್, ದಾವಣಗೆರೆ
ಒಬ್ಬರು ಅಂಗವೈಕಲ್ಯತೆಗೆ ತುತ್ತಾದರೂ ಆ ಮನೆಯ ಸ್ಥಿತಿಯೇ ಡೋಲಾಯಮಾನ. ಆದರೆ ಇಲ್ಲೊಂದು ಕುಟುಂಬದಲ್ಲಿ ಐವರು ಅಂಗ ವೈಕಲ್ಯಕ್ಕೆ ಒಳಗಾಗಿದ್ದಾರೆ. ಆದರೆ ಇದನ್ನು ನೆಪ ಮಾಡಿಕೊಂಡು ಮನೆಯಲ್ಲಿ ಕೂರದೆ ಛಲದಿಂದ ಬದುಕಿ ಇತರರಿಗೆ ಮಾದರಿಯಾಗಿದ್ದಾರೆ.
ವಿಕಲತೆಗೆ ಸೆಡ್ಡು ಹೊಡೆದ ಈ ಸಂಸಾರ ಕಾಣಸಿಗುವುದು ಹರಿಹರ ತಾಲೂಕಿನ ಅಮರಾವತಿ ಕಾಲನಿಯ ಆಂಜನೇಯ ಬಡಾವಣೆಯಲ್ಲಿ. ಬಂಡ್ರಿ ನಾಗರಾಜ ಈ ಮನೆಯ ಯಜಮಾನ. ಪೋಲಿಯೋ ಬಾಧಿತರಾಗಿ ಜನ್ಮತಃ ಎರಡೂ ಕಾಲುಗಳ ಸ್ವಾಧೀನ ಇಲ್ಲದಿದ್ದರೂ ಮನೆ ಬಳಿ ಬೀಡಿ ವ್ಯಾಪಾರ ಮಾಡುತ್ತಾರೆ. ದಾವಣಗೆರೆಯಿಂದ ಸೊಪ್ಪು ಖರೀದಿಸಿ ತಂದು ಮಾರಾಟ ಮಾಡುತ್ತಾರೆ. ಇವರ ದುಡಿಮೆ ಜತೆಗೆ ನಾಲ್ವರು ಸದಸ್ಯರಿಗೆ ಸಿಗುವ ಮಾಸಾಶನವೇ ಈ ಕುಟುಂಬಕ್ಕೆ ಆಧಾರ.ಮನೆಯೊಡತಿ, ಅಂಧೆ ಮಲ್ಲಮ್ಮಗೆ ಅಡುಗೆ ಮನೆಯ ಉಸಾಬರಿ ಬಿಟ್ಟರೆ ಬೇರಾವ ಪರಿಚಯವಿಲ್ಲ. ಈ ದಂಪತಿಗೆ ಒಟ್ಟು ಐವರು ಮಕ್ಕಳು. ಈ ಪೈಕಿ ಮೂವರು ಹೆಣ್ಣುಮಕ್ಕಳಿಗೆ ದೃಷ್ಟಿಭಾಗ್ಯವಿಲ್ಲ. ಮಗ ಕಾರ್ತೀಕ (17), ಮಗಳು ರೇಣುಕಾ (10) ಮಾತ್ರ ಆರೋಗ್ಯವಂತರಾಗಿದ್ದು ಕ್ರಮವಾಗಿ ಎಸ್ಸೆಸ್ಸೆಲ್ಸಿ ಹಾಗೂ ಐದನೇ ತರಗತಿ ಓದುತ್ತಿದ್ದಾರೆ. ಹಿರಿಮಗಳು ಮಂಜುಳಾ (20) ಮತ್ತು ಶಾರದಾ (19) ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.80ಕ್ಕೂ ಹೆಚ್ಚು ಅಂಕ ಗಳಿಸಿ, ದಾವಣಗೆರೆಯ ಮಹಿಳಾ ಕಾಲೇಜಲ್ಲಿ ಪ್ರಥಮ ಬಿಎ ಓದುತ್ತಿದ್ದಾರೆ. ಇಬ್ಬರ ವ್ಯಾಸಂಗಕ್ಕೆ ಸ್ಕಾಲರ್​ಶಿಪ್ ಹಣವೇ ಜಂಘಾಬಲ. ಪರಿಶ್ರಮಕ್ಕೆ ಇಲಾಖೆಯಿಂದ ಸಿಕ್ಕ ಟಾಕಿಂಗ್ ಲ್ಯಾಪ್​ಗಳ ಮೂಲಕವೇ ನಿತ್ಯಾಭ್ಯಾಸ ಮಾಡುತ್ತಿದ್ದಾರೆ. ಮತ್ತೊಬ್ಬ ಬಾಲಕಿ ದೇವಿಕಾ (15) ಸರ್ಕಾರಿ ಅಂಧ ಹೆಣ್ಣುಮಕ್ಕಳ ವಸತಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಾಳೆ. ‘ನಾವು ಮೂವರೂ ಹಾಡುತ್ತೇವೆ. ಸಂಗೀತದಲ್ಲಿ ಆಸಕ್ತಿ ಇದೆ. ಅದನ್ನು ಮುಂದುವರಿಸುವ ಅವಕಾಶ ಸಿಕ್ಕಿಲ್ಲ. ಬಿಎ, ಬಿಇಡಿ ಮಾಡುವಾಸೆ ಇದೆ’ ಎನ್ನುತ್ತಾಳೆ ಮಂಜುಳಾ.
ನಾನು ರಕ್ತಸಂಬಂಧದಲ್ಲಿ ಮದುವೆಯಾಗಿಲ್ಲ. ಆದರೂ ಅಂಗವಿಕಲ ಮಕ್ಕಳಿದ್ದಾರೆ. ಪತ್ನಿ ಸೇರಿ ಇಬ್ಬರು ಹೆಣ್ಣುಮಕ್ಕಳಿಗೆ ಕಣ್ಣಲ್ಲಿ ಪೊರೆ ಬಂದ ಕಾರಣಕ್ಕೆ ಆಪರೇಷನ್ ಮಾಡಿಸಿದ್ದರೂ ಫಲ ನೀಡಲಿಲ್ಲ. ಇನ್ನೊಬ್ಬ ಮಗಳಿಗೂ ಆಪರೇಷನ್ ಮಾಡಿಸಬೇಕಿದೆ ಎಂಬುದು ಬಂಡ್ರಿ ನಾಗರಾಜ ಅವರ ಆಸೆ. ಮಕ್ಕಳ ಓದಿನ ಕನಸಿಗೆ ಈ ಕುಟುಂಬ ನೆರವು ಬಯಸಿದೆ. (ಬಂಡ್ರಿ ನಾಗರಾಜ ಅವರ ಮೊ.ಸಂ. 73491-09283)
ಮಕ್ಕಳು ಎಲ್ಲಿಯವರೆಗೆ ಓದುತ್ತಾರೋ ಅಲ್ಲಿಯವರೆಗೆ ಓದಿಸುತ್ತೇನೆ. ದಾನಿಗಳು, ಸಂಘ-ಸಂಸ್ಥೆಗಳು ನೆರವು ನೀಡಿದರೆ ಅನುಕೂಲವಾಗಲಿದೆ. ಮಳೆ ಬಂದರೆ ಮನೆ ಸೋರುತ್ತದೆ. ಮನೆ ಮುಂದೆ ಅಂಗಡಿ ಮಾಡಲೆಂದು ಅಂಗವಿಕಲರ ಇಲಾಖೆಗೆ ಲೋನ್​ಗಾಗಿ ಅರ್ಜಿ ಹಾಕಿ ಕಾಯುತ್ತಿದ್ದೇನೆ.
|ಬಂಡ್ರಿ ನಾಗರಾಜ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − fifteen =
Remember me
