ಬೆಂಗಳೂರು:ಸ್ಯಾಂಡಲ್​​ವುಡ್​ನ ಸ್ಟಾರ್​​ ನಟರ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಮೋಹಿನಿ ಸಾಲು ಸಾಲು ಹಿಟ್​ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ನಟಿ ಮೋಹಿನಿ ಸುದ್ದಿ ಈಗ ಮುನ್ನೆಲೆಗೆ ಬಂದಿದೆ.
ಶ್ರೀರಾಮಚಂದ್ರ, ಗಡಿಬಿಡಿ ಅಳಿಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಮೋಹಿನಿಗೆ ಸಿನಿಮಾ ಅವಕಾಶ ಕಡಿಮೆಯಾಗುತ್ತ ಬಂದಂತೆ ಟಿವಿ ಶೋಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದ ನಟಿ ಮೋಹಿನಿ, ಕಾಲಕಳೆದಂತೆ ಬಣ್ಣದ ಬದುಕಿನಿಂದ ದೂರವಾಗಿಬಿಟ್ಟರು. ಈಗಂತೂ ನಟಿ ಮೋಹಿನಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಹಲವರಿಗೆ ಗೊತ್ತೇ ಇಲ್ಲ.
ನಟನೆಯಲ್ಲಿ ಅವಕಾಶಗಳು ಕಮ್ಮಿ ಆಗುತ್ತಿದ್ದಂತೆ ಆಧ್ಯಾತ್ಮದತ್ತ ಒಲವು ತೋರಿಸತೊಡಗಿದ ಮೋಹಿನಿ, ಹಿಂದೂ ಧಾರ್ಮಿಕ ಆಚರಣೆ ಬದಲಾಗಿ ಕ್ರೈಸ್ತ ಧರ್ಮದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಬಳಿಕ ಮೋಹಿನಿ ಕ್ರಿಶ್ಚಿಯನ್ ವ್ಯಕ್ತಿಯನ್ನು ಮದುವೆಯಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎನ್ನಲಾಗುತ್ತಿದೆ. ಹಿಂದೂ ಬ್ರಾಹ್ಮಣ ಸಮುದಾಯದ ಹುಡುಗಿಯೊಬ್ಬಳು ಮತಾಂತರಗೊಂಡ ಬಳಿಕ ಆಕೆಯ ಬಾಳಲ್ಲಿ ಬಹಳಷ್ಟು ಬದಲಾವಣೆ ಆಗಿವೆ ಎನ್ನಲಾಗುತ್ತಿದೆ.
ನಟಿ ಮೋಹಿನಿ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಇಬ್ಬರು ಮುದ್ದಾದ ಮಕ್ಕಳೊಂದಿಗೆ ಫ್ಯಾಮಿಲಿ ಲೈಫ್ ನಡೆಸುತ್ತಿದ್ದರೂ ಮೋಹಿನಿಗೆ ಇತ್ತೀಚೆಗೆ ಆಧ್ಯಾತ್ಮದತ್ತ ಇನ್ನೂ ಹೆಚ್ಚಿನ ಒಲವು ಬಂದಿದೆ ಎನ್ನಲಾಗುತ್ತಿದೆ. ಕ್ರೈಸ್ತ ಧರ್ಮದ ಕೌನ್ಸಿಲರ್ ಆಗಿ ಈಗ ಮಾಜಿ ನಟಿ ಮೋಹಿನಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಶ್ರೀರಾಮಚಂದ್ರ ಸಿನಿಮಾ ನಟಿ ಮೋಹಿನಿ ಈಗ ಕ್ರೈಸ್ತ ಕೌನ್ಸಿಲರ್ ಆಗಿ ಬದಲಾಗಿದ್ದು, ಬಣ್ಣದ ಲೋಕದೊಂದಿಗೆ ಸಂಪೂರ್ಣ ನಂಟು ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
‘ಶ್ರೀರಾಮಚಂದ್ರ’ ಚಿತ್ರದ ನಾಯಕಿ ಎಂದರೆ ಸಾಕು, ನಟಿ ಮೋಹಿನಿಯ ಮುಖ ಕಣ್ಮುಂದೆ ನಲಿಯುತ್ತದೆ. ಶಿವರಾಜ್‌ಕುಮಾರ್ ಜತೆ ಗಡಿಬಿಡಿ ಅಳಿಯ ಚಿತ್ರದಲ್ಲಿ ಮೋಹಿನಿ ಕೂಡ ಮುಖ್ಯ ಪಾತ್ರದಲ್ಲೇ ಕಾಣಿಸಿಕೊಂಡಿದ್ದರು. ನಿಶ್ಯಬ್ಧ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಮೋಹಿನಿ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.
ಬ್ಯಾನ್‌ ಆದ್ರೂ ಹಾಟ್​ ಫೋಟೋಗಳಿಂದ ವರ್ಷಕ್ಕೆ 1 ಕೋಟಿ ರೂ. ಗಳಿಸುವ ಮೋಹಕ ಬೆಡಗಿ

ತಗಡು, ಗುಲಾಮಾ ಅಂತ ಹೇಳಿದವರಿದ್ದಾರೆ..ಗೂಬೆ ಅಂದಿದ್ದಕ್ಕೆ ನನ್ನ ತಂದೆನ ರೋಡಿಗೆ ನಿಲ್ಲಿಸಿಬಿಟ್ಟರು

ಬೆತ್ತಲೆ ಹಬ್ಬ; ಪುರುಷರ ಜತೆ ಮಹಿಳೆಯರಿಗೂ ಅವಕಾಶ..ಷರತ್ತುಗಳು ಅನ್ವಯ

ದರ್ಶನ್​ ಜತೆ 10 ವರ್ಷದಿಂದ ಸಂಬಂಧ; ವಿವಾದ ಹುಟ್ಟುಹಾಕಿದ ಈ ಪವಿತ್ರಾ ಗೌಡ ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 8 =
Remember me
