ಗಣೇಶ ಚತುರ್ಥಿ ಬಂತೆಂದರೆ ಮನೆಯಲ್ಲಿ ಮಾತ್ರವಲ್ಲದೇ ಇಡೀ ಊರಿನಲ್ಲಿ ಹಬ್ಬದ ಕಳೆ ದುಪ್ಪಟ್ಟಾಗಿರುತ್ತದೆ. ಮನೆಯಲ್ಲಿ ಗಣಪನ ಪೂಜೆ ಮುಗಿಸಿ ಪೆಂಡಾಲ್​ಗಳಲ್ಲಿ ವಿಭಿನ್ನವಾದ ದೊಡ್ಡ ಗಣೇಶನ ಮೂರ್ತಿಗಳನ್ನು ನೋಡಿದರೆ ಅದೇನೋ ನೆಮ್ಮದಿ.

ಬೆಂಗಳೂರಿಗರಿಗೆ ಗಣಪತಿ ಹಬ್ಬ ಬಹಳ ವಿಶೇಷ. ಏಕೆಂದರೆ ಈ ಮಹಾನಗರದಲ್ಲಿ ಗಣಪತಿಯ ಅಸಂಖ್ಯ ರೂಪಗಳನ್ನು ಪೆಂಡಾಲ್​ಗಳಲ್ಲಿ ಕಣ್ತುಂಬಿಕೊಳ್ಳಬಹುದು. ಬೆಂಗಳೂರಿನಲ್ಲಿ ನೀವು ದರ್ಶಿಸಲೇ ಬೇಕಾದ ಟಾಪ್ 5 ಗಣೇಶ ಪೆಂಡಾಲ್​ಗಳ ಮಾಹಿತಿ ತಿಳಿದುಕೊಳ್ಳಿ.

ಬೆಂಗಳೂರು ಗಣೇಶ ಉತ್ಸವ:ಸುಮಾರು 60 ವರ್ಷಗಳಿಂದ ಅದ್ದೂರಿಯಾಗಿ ನಡೆಯುತ್ತಿರುವ ಬೆಂಗಳೂರು ಗಣೇಶ ಉತ್ಸವವನ್ನು ಕಣ್ತುಂಬಿಕೊಳ್ಳಬೇಕೆಂದರೆ ಬಸವನಗುಡಿಗೆ ಹೋಗಲೇಬೇಕು. ಎಪಿಎಸ್ ಕಾಲೇಜು ಮೈದಾನದಲ್ಲಿ, ಶ್ರೀ ವಿದ್ಯಾರಣ್ಯ ಯುವಕ ಸಂಘದ ನೇತೃತ್ವದಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ. ಗಣೇಶನ ವಿಸರ್ಜನೆ ಆಗುವವರೆಗೂ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಘಟಾನುಘಟಿ ನಟರು, ಹಾಡುಗಾರರು ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮ ನಡೆಸಿಕೊಡುತ್ತಾರೆ.

ಇದನ್ನೂ ಓದಿ:ಈ ವರ್ಷ ಗಣೇಶ ಚತುರ್ಥಿ ಯಾವಾಗ? ಪೂಜಾ ಮುಹೂರ್ತದ ಸಂಪೂರ್ಣ ವಿವರ ನಿಮಗಾಗಿ…
ಶ್ರೀ ವಿನಾಯಕ ಮಿತ್ರ ಮಂಡಲಿ, ಬನಶಂಕರಿ:ಜಯನಗರದ ಬಳಿ ಬನಶಂಕರಿಯಲ್ಲಿ ಪ್ರತಿ ವರ್ಷ ಶ್ರೀ ವಿನಾಯಕ ಮಿತ್ರ ಮಂಡಲಿ ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುತ್ತದೆ. ಸುಮಾರು 40ಕ್ಕೂ ಹೆಚ್ಚು ವರ್ಷಗಳಿಂದ ಗಣಪತಿಯನ್ನು ಕೂರಿಸಿ ಹಬ್ಬ ಆಚರಿಸಲಾಗುತ್ತಿದೆ. ಗಣೇಶ ವಿಸರ್ಜನೆಯಾಗುವ ತನಕವೂ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತದೆ.

ಶ್ರೀ ವಿನಾಯಕ ಗೆಳೆಯರ ಬಳಗ, ಕೋಡಿಹಳ್ಳಿ:ಶ್ರೀ ವಿನಾಯಕ ಗೆಳಯರ ಬಳಗದ ವತಿಯಿಂದ ಕೋಡಿಹಳ್ಳಿಯ ಸಮೀಪ ವಿಭಿನ್ನವಾದ ಗಣೇಶ ಮೂರ್ತಿಗಳನ್ನು ಸ್ಥಾಪಿಸಿ ಪುಜಿಸಲಾಗುತ್ತದೆ. ಸುಮಾರು 4 ದಿನಗಳ ಕಾಲ ಗಣೇಶನನ್ನು ಪ್ರತಿಷ್ಠಾಪಿಸಿ ವಿಸರ್ಜನೆ ಮಾಡುತ್ತಾರೆ. ಕೊನೆಯ ದಿನ ಏರಿಯಾ ಜನರೆಲ್ಲರೂ ಸಂಭ್ರಮದಲ್ಲಿ ಮೆರವಣಿಗೆ ನಡೆಸಿ ಗಣೇಶನನ್ನು ಬೀಳ್ಕೊಡುತ್ತಾರೆ.
ಇದನ್ನೂ ಓದಿ:ಗಣೇಶ ಚತುರ್ಥಿ 2023: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 6 ಪುರಾಣ ಪ್ರಸಿದ್ಧ ಗಣೇಶ ದೇವಾಲಯಗಳು
ಶ್ರೀ ವಿನಾಯಕ ಭಕ್ತ ಮಂಡಲಿ, ಬಾಣಸವಾಡಿ:ಬಾಣಸವಾಡಿಯಲ್ಲಿ ಶ್ರೀ ವಿನಾಯಕ ಭಕ್ತ ಮಂಡಲಿ ಕೂರಿಸುವ ಗಣಪತಿಯನ್ನು ನೋಡಲು ಕಣ್ಣಿಗೇ ಹಬ್ಬ. 5 ದಿನಗಳ ಕಾಲ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಇಲ್ಲಿ ಪೂಜಿಸಲಾಗುತ್ತದೆ. ಇಲ್ಲಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ.

ಪಂಚಮುಖಿ ಗಣೇಶ ದೇವಸ್ಥಾನ:ಕೆಂಗೇರಿಯಲ್ಲಿರುವ ಪಂಚಮುಖಿ ಗಣಪತಿಯ ದೇವಾಲಯದಲ್ಲಿ ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಐದು ಕೋಶಗಳನ್ನು ಬಿಂಬಿಸುವ ಈ ಗಣೇಶನ್ನು ಚತುರ್ಥೀಯ ದಿನ ಇಷ್ಟಾರ್ಥ ಸಿದ್ಧಿಗಾಗಿ ಶಾಸ್ತ್ರೋಕ್ತವಾಗಿ ಪೂಜಿಸಲಾಗುತ್ತದೆ.
Ganesh Chaturthi : ಗಣೇಶನಿಗೆ ಮೊದಲ ಪೂಜೆ ಯಾಕೆ ಮಾಡುತ್ತಾರೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + seven =
Remember me
