ಬೆಂಗಳೂರು:ರಾಜಧಾನಿಯ ಹಲವೆಡೆ ಗುರುವಾರ ಧಾರಾಕಾರವಾಗಿ ಮಳೆ ಸುರಿದಿದ್ದು, 4 ಕಡೆಗಳಲ್ಲಿ ಮರ ಬಿದ್ದಿವೆ. ಚಾಮರಾಜಪೇಟೆಯ 4ನೇ ಮುಖ್ಯರಸ್ತೆ, ಸಂಜಯನಗರದ ಕೆಇಬಿ ಲೇಔಟ್​ನ 6ನೇ ಕ್ರಾಸ್​, ಕೊತ್ತನೂರು ದಿಣ್ಣೆಯ ಸಂತೃಪ್ತಿನಗರದ 2ನೇ ಮುಖ್ಯರಸ್ತೆ, ಕಾಪೋರ್ರೇಷನ್​ ಹಿಂಭಾಗದ ಜಿಯೋ ಹೋಟೆಲ್​ ಬಳಿ ಮರ ಮತ್ತು ಕೊಂಬೆಗಳು ಮುರಿದುಬಿದ್ದ ಪರಿಣಾಮ ಅವಾಂತರ ಸೃಷ್ಟಿಯಾಯಿತು. ಅದೃಷ್ಟವಶಾತ್​ ಸಂಭವಿಸಬಹುದಾದ ಅನಾಹುತ ತಪ್ಪಿದೆ. ಆದರೆ, ವಾಹನ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು. ವಿಷಯ ತಿಳಿದು ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು, ಟ್ರಾಫಿಕ್​ ಪೋಲಿಸರ ಸಹಕಾರದೊಂದಿಗೆ ಮರಗಳ ತೆರವುಗೊಳಿಸಿ ವಾಹನಗಳು ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು.
ಕೆ.ಆರ್​. ವೃತ್ತ ರಸ್ತೆ, ಸಿಐಡಿ ರಸ್ತೆ ಸೇರಿ ನಗರದ ಪ್ರಮುಖ ರಸ್ತೆಗಳು ಹೊಳೆಯಾಗಿ ಮಾರ್ಪಟ್ಟಿದ್ದವು. ಅಂಡರ್​ಪಾಸ್​, ಜಂಕ್ಷನ್​ಗಳಲ್ಲಿ ನೀರು ನಿಂತು ಸವಾರರು ಪರದಾಡಿದರು. ಮಳೆಯಿಂದ ವಿದ್ಯುತ್​ ಕಂಬಗಳು ಹಾನಿಗೀಡಾದರೆ, ಚರಂಡಿಗಳೆಲ್ಲ ತುಂಬಿ ಹರಿದವು. ಮ್ಯಾನ್​ಹೋಲ್​ ಉಕ್ಕಿದ ಪರಿಣಾಮ ರಸ್ತೆಗಳ ಮೇಲೆ ಕೊಳಚೆನೀರು ಹರಿಯಿತು. ಕಾಮಗಾರಿ ನಡೆಸುತ್ತಿದ್ದ ಜಾಗದಲ್ಲಿ ನೀರು ನಿಂತಿರುವ ದೃಶ್ಯ ಕಂಡುಬಂತು. ಕೆಲವರು ಮಳೆಯಲ್ಲಿಯೇ ನೆನೆದುಕೊಂಡು ಹೋಗುತ್ತಿದ್ದರು. ಮಳೆಯಿಂದಾಗಿ ಬಸ್​ ನಿಲ್ದಾಣ, ಮರದ ಕೆಳಗಡೆ ನಿಂತು ಆಶ್ರಯ ಪಡೆದರು.
ರಾಜ್ಯಾದ್ಯಂತ ಮಳೆ ಬಿರುಸು: 15ರಿಂದ 5 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ಯಶವಂತಪುರ, ಪೀಣ್ಯ, ಜಾಲಹಳ್ಳಿ ಕ್ರಾಸ್​, ಹೆಬ್ಬಾಳ, ಯಲಹಂಕ ಸೇರಿ ಬೆಂಗಳೂರು ಉತ್ತರ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಯಿತು. ಕೆಲವೆಡೆ ಮುಖ್ಯರಸ್ತೆ ಜಲಾವೃತಗೊಂಡಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ನಗರದಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ರಾಮೋಹಳ್ಳಿ 66, ಚೋಳನಾಯಕನಹಳ್ಳಿ 64, ಕೆಂಗೇರಿ 48, ಗೊಲ್ಲಹಳ್ಳಿ 40, ಆರ್​.ಆರ್​.ನಗರ 35, ಉತ್ತರಹಳ್ಳಿ 35 ದೊರೆಸನ್ನಿಹಳ್ಳಿ 35, ಹೆಮ್ಮಿಗೆಪುರ 34, ವಿದ್ಯಾಪಿಠ 34, ರಾಜರಾಜೇಶ್ವರಿನಗರ 33, ನಂದಿನಿಲೇಔಟ್​ 28, ರಾಜಾಜಿನಗರ 36 ಮಿಮೀ ಮಳೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + twelve =
Remember me
