ಬೆಂಗಳೂರು:ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆ ಕಣದಲ್ಲಿ ಅಂತಿಮವಾಗಿ 30 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾದ ಶನಿವಾರ ಒಟ್ಟು 12 ಮಂದಿ ನಾಮಪತ್ರ ವಾಪಸ್ ಪಡೆದಿದ್ದಾರೆ.ಒಟ್ಟು ಮೂರು ಕ್ಷೇತ್ರಗಳಲ್ಲಿ 42 ಅಭ್ಯರ್ಥಿಗಳು 70 ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ವೇಳೆ 10 ನಾಮಪತ್ರ ತಿರಸ್ಕೃತಗೊಂಡಿದ್ದವು. 60 ನಾಮಪತ್ರ ಸಿಂಧುವಾಗಿದ್ದವು. ನಾಮಪತ್ರ ಸಲ್ಲಿಸಿದ ಒಟ್ಟು 42 ಅಭ್ಯರ್ಥಿಗಳ ಪೈಕಿ 12 ಮಂದಿ ಉಮೇದುವಾರಿಕೆ ಹಿಂಪಡೆದಿದ್ದು, 30 ಮಂದಿ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
ಎಲ್ಲಿ? ಎಷ್ಟು ಮಂದಿ?ಮಸ್ಕಿಯಲ್ಲಿ 8, ಬಸವಕಲ್ಯಾಣದಲ್ಲಿ 12, ಬೆಳಗಾವಿ ಲೋಕಸಭೆ ಕಣದಲ್ಲಿ 10 ಮಂದಿ ಉಳಿದಿದ್ದಾರೆ. ಕಣದಲ್ಲಿರುವ ಒಟ್ಟು 30 ಮಂದಿಯ ಪೈಕಿ 26 ಪುರುಷರು, ನಾಲ್ವರು ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮಸ್ಕಿಯಲ್ಲಿ 1, ಬಸವಕಲ್ಯಾಣದಲ್ಲಿ 2, ಬೆಳಗಾವಿಯಲ್ಲಿ ಒಬ್ಬ ಮಹಿಳೆಯರು ಚುನಾವಣಾ ಕಣದಲ್ಲಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್‌ನಲ್ಲಿ ಹಿರಿತನಕ್ಕೆ ಬೆಲೆಯಿಲ್ಲ; ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಹೇಳಿಕೆ
ಯಾವ ಪಕ್ಷ ? ಎಲ್ಲಿ?:ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ತಲಾ ಒಬ್ಬರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಜೆಡಿಎಸ್ ಬಸವಕಲ್ಯಾಣದಲ್ಲಿ ಮಾತ್ರ ಸ್ಪರ್ಧಿಸಿದೆ. ಕರ್ನಾಟಕ ರಾಷ್ಟ್ರ ಸಮಿತಿಯಿಂದ 3, ಶಿವಸೇನಾ 1, ಹಿಂದುಸ್ತಾನ್ ಜನತಾ ಪಾರ್ಟಿ 2, ಕರ್ನಾಟಕ ಕಾರ್ಮಿಕ ಪಕ್ಷದಿಂದ 1, ಆಲ್ ಇಂಡಿಯಾ ಮಜಿಸ್ ಇ-ಇತ್ತೇಹದುಲ್ ಮುಸಲ್ಮೀನ್ 1, ಅಖಿಲ ಭಾರತೀಯ ಮುಸ್ಲಿಂ ಲೀಗ್ 1 ಹಾಗೂ 14 ಮಂದಿ ಪಕ್ಷೇತರರು ಈ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಒಡ್ಡಿದ್ದಾರೆ.
ಚುನಾವಣೆಗೆ ವೇದಿಕೆ ಸಜ್ಜು:ಚುನಾವಣೆಗೆ ಉಮೇದುವಾರಿಕೆ ಹಿಂಪಡೆಯುವ ಅವಧಿ ಮುಗಿದಿರುವುದರಿಂದ ಸೋಮವಾರದಿಂದ ಚುನಾವಣಾ ಕಣ ರಂಗೇರಲಿದೆ. ರಾಷ್ಟ್ರೀಯ ಪಕ್ಷಗಳ ಮುಖಂಡರು ಸೋಮವಾರದಿಂದ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಅದಕ್ಕಾಗಿ ಕಾರ್ಯಕ್ರಮ ಪಟ್ಟಿ ತಯಾರಿಸಿ ಕ್ಷೇತ್ರವಾರು ಸ್ಟಾರ್ ಪ್ರಚಾರಕರನ್ನು ನಿಯೋಜಿಸಲಾಗಿದೆ. ಜೆಡಿಎಸ್ ಬಸವ ಕಲ್ಯಾಣ ಕ್ಷೇತ್ರದಲ್ಲಿ ಸೋಮವಾರ ಪ್ರಚಾರ ನಡೆಸಲಿದೆ.ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ದಂಡೇ ಮೂರೂ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬೆವರು ಹರಿಸಲಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯ ದೂರು ಸ್ವೀಕರಿಸಲು ಮಲಗು ಬಾ ಎಂದ ಎಸಿಪಿ! ಕಾಮುಕ ಪೊಲೀಸ್​ ವಜಾ

ಮಾವೋವಾದಿಗಳ ಅಟ್ಟಹಾಸ: ಕೋಬ್ರಾ ಪಡೆಯ ಐವರು ಯೋಧರು ಹುತಾತ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 5 =
Remember me
