ಯಾದಗಿರಿ:ಸಂಭ್ರಮದಲ್ಲಿದ್ದ ಕುಟುಂಬಸ್ಥರು ನಡೆಸಿದ ಶುಭ ಸಮಾರಂಭದ ಸಂದರ್ಭದಲ್ಲಿ ನಡೆದ ಒಂದೇ ಒಂದು ಸ್ಫೋಟ ಒಟ್ಟು ಒಂಬತ್ತು ಮಂದಿಯನ್ನು ಬಲಿ ಪಡೆದಿದ್ದು, ಆ ಮನೆಯಲ್ಲಿನ ಸೂತಕದ ಕಾವು ದಿನೇದಿನೆ ಹೆಚ್ಚಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಫೆ. 25ರಂದು ಕೃಷ್ಣಾ ಭಾಗ್ಯ ಜಲನಿಗಮದ (ಕೆಬಿಜೆಎನ್​ಎಲ್​) ನಿವೃತ್ತ ನೌಕರನ ಮನೆಯಲ್ಲಿ ಸೀಮಂತ ನಡೆಯುತ್ತಿದ್ದ ಸಂದರ್ಭದಲ್ಲಿ ಅಡುಗೆ ಅನಿಲ ಸ್ಫೋಟಗೊಂಡು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅದರಲ್ಲಿ 8 ಜನರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆ ನಡೆದ ದಿನವೇ ಚಿಕಿತ್ಸೆ ಫಲಕಾರಿಯಾಗದೆ ಮಹಾಂತೇಶ (15 ತಿಂಗಳ ಮಗು), ಆದ್ಯಾ (3) ಹಾಗೂ ನಿಂಗಮ್ಮ (85) ಅದೇ ದಿನ ಮತ್ತು ಮರುದಿನ ಗಂಗಮ್ಮ (51) ಮೃತಪಟ್ಟಿದ್ದರು. ನಾಲ್ಕನೇ ದಿನ 6 ವರ್ಷದ ಶ್ವೇತಾ ಸಾವಿಗೀಡಾಗಿದ್ದಳು.
ಇದನ್ನೂ ಓದಿ:ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ರಿಷಬ್​ ಶೆಟ್ಟಿ ಬೇಸರ!
ಇಂದು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಳಿದ ಗಾಯಾಳುಗಳ ಪೈಕಿ ಐವರು ಸಾವಿಗೀಡಾಗಿದ್ದು, ಒಂದು ಸಿಲಿಂಡರ್​ ಸ್ಫೋಟದಿಂದ ಸತ್ತವರ ಸಂಖ್ಯೆ ಹತ್ತಕ್ಕೆ ಏರಿದೆ. ಕಲ್ಲಪ್ಪ ಶರಣಪ್ಪ ಲಕ್ಕಶೆಟ್ಟಿ (48), ಭೀಮರಾಯ ಶಿವಪ್ಪ (78) ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಹಾಗೂ ವೀರಬಸಪ್ಪ ಮಲ್ಲಣ್ಣ (25), ಚನ್ನವೀರ ಸಂಗಣ್ಣ ಮ್ಯಾಳಗಿ (30) ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.
ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ಉಳಿದ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ. ಇತ್ತ ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ಆದಷ್ಟು ಬೇಗ ಗಾಯಾಳುಗಳು ಗುಣ ಹೊಂದಿ ಮನೆಗೆ ವಾಪಸಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.
ಯೂಕ್ರೇನ್​ನಲ್ಲಿ ಸಿಲುಕಿಕೊಂಡವರಿಗೆ ಮತ್ತೊಂದು ಆತಂಕ; ತಕ್ಷಣವೇ ಖಾರ್ಕಿವ್​ನಿಂದ ತೆರಳಲು ಸೂಚನೆ!
ಯುದ್ಧಕ್ಕೆ ಹೆದರಿ ಯೂಕ್ರೇನ್​ನಿಂದ ಹೈದರಾಬಾದ್​ಗೆ ಬಂದ್ಲು ನವವಿವಾಹಿತೆ; ಅಲ್ಲಿ ಮದ್ವೆ, ಇಲ್ಲಿ ರಿಸೆಪ್ಷನ್​…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + nineteen =
Remember me
