ಬೆಂಗಳೂರು:ರಾಜಕೀಯ ಅಧಿಕಾರ ವಂಚಿತ ಸಮುದಾಯಗಳನ್ನು ರಾಜಕೀಯ ವ್ಯವಸ್ಥೆ ತೆಕ್ಕೆಗೆ ತರಬೇಕು ಎಂಬ ಪಕ್ಷದ ನಾಯಕರ ಆಶಯವಾಗಿದೆ. ಪಕ್ಷದ ಸದಸ್ಯತ್ವ ನೋಂದಣಿ ವೇಳೆ ಹೆಚ್ಚಿನ ಈ ಅಂಶದತ್ತ ಲಕ್ಷ್ಯಹರಿಸಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಸಲಹೆ ನೀಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಒಬಿಸಿ ಮೋರ್ಚಾ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ 200ಕ್ಕೂ ಹೆಚ್ಚು ಜಾತಿಗಳು, ಸಾವಿರಕ್ಕೂ ಹೆಚ್ಚು ಉಪಜಾತಿಗಳಿವೆ.
ಈ ಪೈಕಿ 800ಕ್ಕೂ ಸಣ್ಣ ಜಾತಿ, ಉಪಜಾತಿಗಳಿಗೆ ರಾಜಕೀಯ ಅಧಿಕಾರದ ಸ್ಪರ್ಶವೇ ಆಗಿಲ್ಲ. ಕನಿಷ್ಟ ಪಕ್ಷ ಒಬ್ಬರೇ ಒಬ್ಬರು ಗ್ರಾ.ಪಂ. ಸದಸ್ಯರಾಗಲೂ ಸಾಧ್ಯವಾಗಿಲ್ಲ. ಅಂತಹ ಸಮುದಾಯಗಳ ಬಳಿಗೆ ತೆರಳಿ ವಿಶ್ವಾಸಕ್ಕೆ ಪಡೆದು, ಸದಸ್ಯತ್ವ ನೀಡಬೇಕು ಎಂದರು.
ಹಿಂದುಳಿದ ವರ್ಗಗಳಿಗೆ ಸೇರಿದ ಇಂತಹ ಸಣ್ಣ ಸಮುದಾಯಗಳಿಗೆ ರಾಜಕೀಯ ಅಧಿಕಾರದ ಪ್ರಾತಿನಿಧ್ಯ ಲಭಿಸಬೇಕು. ಕಾಯಕ ಬಿಟ್ಟು ಬೇರೇನೋ ಯೋಚಿಸದ ಕಾರಣಕ್ಕೆ ಈ ಸಮುದಾಯಗಳು ವಂಚಿತವಾಗಿವೆ ಎಂದು ರಘು ಕೌಟಿಲ್ಯ ಹೇಳಿದರು.
ಸದಸ್ಯತ್ವ ನೋಂದಣಿ ಸಂಖ್ಯೆಗಿಂತ ಹೆಚ್ಚೆಚ್ಚು ಸಮುದಾಯಗಳನ್ನು ರಾಜಕೀಯ ವ್ಯವಸ್ಥೆಯೊಳಗೆ ತರುವುದು ಅಭಿಯಾನದ ಮುಖ್ಯ ಉದ್ದೇಶವಾಗಬೇಕು, ನೆಲದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಇಂತಹ ಶ್ರಮಿಕ ಸಮುದಾಯ ಕಟ್ಟಿಕೊಟ್ಟಿದೆ. ವಿಕಸಿತ ಭಾರತದ ಗುರಿ ಸಾಧಿಸುವುದೆಂದರೆ ಎಲ್ಲರನ್ನು ಒಳಗೊಂಡಿರುವುದು, ಸರ್ವ ಸ್ಪರ್ಶಿಯಾಗಿರಬೇಕು ಎಂದರು.
ಸದಸ್ಯತ್ವ ನೋಂದಣಿ ಅಭಿಯಾನ ಪ್ರಯತ್ನವೂ ಇದೇ ದಿಕ್ಕಿನಲ್ಲಿರಬೇಕು. ಎಲ್ಲ ಸಮುದಾಯಗಳನ್ನು ಬಿಜೆಪಿ ತಲುಪಿದೆ. ಒಪ್ಪಿ ಅಪ್ಪಿಕೊಂಡಿದೆ ಎಂಬುದನ್ನು ಅರ್ಥ ಮಾಡಿಸಿ, ಸಂಘಟನೆ ಸಬಲೀಕರಣಕ್ಕೆ ಶ್ರಮಿಸಬೇಕು ಎಂದು ರಘು ಕೌಟಿಲ್ಯ ತಿಳಿಹೇಳಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತನಾಡಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರಿಗೆ 100ನೇ ವರ್ಷವಿದು. ಈ ಕಾರಣಕ್ಕೆ ಅಟಲ್ ಪರ್ವವೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಸದಸ್ಯತ್ವ ನೋಂದಣಿಯು ಪಕ್ಷದ ಪಾಲಿಗೆ ಹಬ್ಬವೆಂದು ತಿಳಿಸಿದರು.
ಆಂತರಿಕ ಪ್ರಜಾಪ್ರಭುತ್ವಕ್ಕೆ ಮಹತ್ವ ನೀಡಿದ, ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷದ ಸದಸ್ಯರೆಂದು ಹೆಮ್ಮೆಯಿಂದ ಹೇಳಿಕೊಂಡು, ಜನರೊಂದಿಗೆ ನಿಕಟತೆ ಸಾಧಿಸಬೇಕು ಎಂದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಅವ್ವಣ್ಣ ಮ್ಯಾಕೇರಿ, ಸೋಮಶೇಖರ್, ರಾಜ್ಯ, ಜಿಲ್ಲಾ ಪದಾಧಿಕಾರಿಗಳು ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + nine =
Remember me
