| ಗಂಗೂಬಾಯಿ ರಮೇಶ್ ಮಾನಕರ, ಜಿಲ್ಲಾಧಿಕಾರಿ, ಉತ್ತರ ಕನ್ನಡ
ಒಂದು ಕಡೆ ಘಟ್ಟ ಪ್ರದೇಶಗಳು, ಇನ್ನೊಂದು ಕಡೆ ಸುಂದರ ಕಡಲ ತೀರಗಳು, ಮತ್ತೊಂದೆಡೆ ಮಲೆನಾಡು ಪ್ರದೇಶ. ಬದಿಗೆ ಒಣ ಭೂಮಿ ಪ್ರದೇಶದ ಜತೆಗೆ ದಟ್ಟ ಅಭಯಾರಣ್ಯ. ಹೀಗೆ ವಿಭಿನ್ನ ಪ್ರಾಕೃತಿಕ ಸೌಂದರ್ಯದ ಮೂಲಕ ಉತ್ತರ ಕನ್ನಡ ಜಿಲ್ಲೆಯು ಇಡೀ ದೇಶದಲ್ಲಿಯೇ ವಿಭಿನ್ನ ಜಿಲ್ಲೆಯಾಗಿದೆ. ಪ್ರವಾಸಿ ತಾಣಗಳ ಹೆಬ್ಬಾಗಿಲು ಎನಿಸಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಗೆದಷ್ಟು ಬರಿದಾಗದ ಪ್ರಾಕೃತಿಕ ಸೌಂದರ್ಯವಿದೆ. ಈ ಸಾಲಿನಲ್ಲಿ ಕರಿ ಮರಳ ಕಡಲ ತೀರ ತೀಳ್ಮಾತಿ ವಿಭಿನ್ನವಾಗಿ ನಿಲ್ಲುತ್ತದೆ.
ಕಡಲ ತೀರ ಎಂದರೆ ಸಾಮಾನ್ಯವಾಗಿ ಬೆಳ್ಳನೆಯ ಅಥವಾ ತಿಳಿ ಕಂದು ಬಣ್ಣದ ಮರಳಿನ ರಾಶಿ ಕಣ್ಣಮುಂದೆ ಬರುತ್ತದೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರದ ತೀಳ್ಮಾತಿ ಕಡಲತೀರ ಇದಕ್ಕೆ ಭಿನ್ನ. ಇಡೀ ಕಡಲತೀರವೇ ಕಪ್ಪು ಮರಳಿನಿಂದ ಆವರಿಸಿದೆ. ನೊರೆ ನೊರೆಯ ಅಲೆಗಳು ಕಡಲಿಗೆ ಮುತ್ತಿಕ್ಕಿ ಮತ್ತೆ ಸಮುದ್ರ ಸೇರುವ ನೀರಿನಲ್ಲಿ ನೆನೆವ ಕಾಲುಗಳಿಗೆ ಮೆತ್ತಿಕೊಳ್ಳುವ ಕರಿ ಮರಳು ಹೊಸ ಅನುಭವ ಕಟ್ಟಿಕೊಡುತ್ತದೆ. ರಾಜ್ಯದ ಏಕೈಕ ಕಪ್ಪು ಮರಳಿನ ಕಡಲ ತೀರ ಇದಾಗಿದೆ. ಕಪ್ಪು ಮರಳಿನ ಕಡಲ ತೀರ ವಿಶ್ವದಲ್ಲೇ ಅಪರೂಪ. ನಮ್ಮ ಭಾರತ ದೇಶದಲ್ಲಿ ನಾಲ್ಕು ಕಡೆ ಮಾತ್ರ ಇಂತಹ ಕಡಲ ತೀರ ಕಾಣಸಿಗುತ್ತದೆ. ತೀಳ್ಮಾತಿ ಹೊರತುಪಡಿಸಿದರೆ ಕೇರಳದ ಕೋವಾಲಂ, ಮಹಾರಾಷ್ಟ್ರದ ನವಪುರ ಮತ್ತು ಗುಜರಾತ್​ನ ದುಮಾಸ್ ತೀರಗಳಲ್ಲಿ ಕಪ್ಪು ಮರಳಿದೆ.
ತೀಳ್ಮಾತಿ ಕಡಲ ತೀರದಲ್ಲಿ ಹಲವು ಚಲನಚಿತ್ರಗಳ ಚಿತ್ರೀಕರಣ ಸಹ ನಡೆದಿದೆ. ಕಪ್ಪು ಮರಳಿನ ಕಡಲ ತೀರದಲ್ಲಿ ಕುಳಿತು ಸೂರ್ಯಾಸ್ತ ನೋಡುವುದೇ ಮನಮೋಹಕ. ಕಡಲ ತೀರಕ್ಕೆ ಭೇಟಿ ಕೊಡುವ ಪ್ರವಾಸಿಗರು ಕಪ್ಪು ಮರಳಿನಲ್ಲಿ ಮೂಡುವ ಸೂರ್ಯನ ಕಿರಣಗಳನ್ನು ನೋಡುವುದು ಮನಸಿಗೆ ಮುದ ನೀಡುತ್ತದೆ. ತೀಳ್ಮಾತಿ ಕಡಲ ತೀರ ಪುಟ್ಟ ಪ್ರದೇಶವನ್ನು ಹೊಂದಿದ್ದು, ಅಂದಾಜು 200 ಮೀಟರ್​ವರೆಗೆ ವ್ಯಾಪಿಸಿದೆ. asdasdas asd
ಉತ್ತರ ಕನ್ನಡ ಜಿಲ್ಲಾಡಳಿತ ಈ ತೀಳ್ಮಾತಿ ಕಡಲ ತೀರದ ಅಭಿವೃದ್ಧಿಗೆ ಇನ್ನಷ್ಟು ಕ್ರಮ ಕೈಗೊಳ್ಳಲಿದೆ. ಇಡೀ ರಾಜ್ಯದಲ್ಲಿಯೇ ಕಪ್ಪು ಮರಳಿನ ಕಡಲ ತೀರ ಇರುವ ಸ್ಥಳ ಇದೊಂದೇ ಆಗಿರುವುದರಿಂದ ಇಂತಹದೊಂದು ಅದ್ಭುತ ತಾಣಕ್ಕೆ ತಪ್ಪದೇ ಭೇಟಿ ನೀಡಿ.
ಎಲ್ಲಿದೆ?:ಕರ್ನಾಟಕದ ಗಡಿ ಭಾಗ ಮಾಜಾಳಿ ಎನ್ನುವ ಗ್ರಾಮದಲ್ಲಿ ಈ ತೀಳ್ಮಾತಿ ಕಡಲತೀರ ಇದೆ. ಕಾರವಾರ ನಗರದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಮಾಜಾಳಿಯ ಬಳಿ ಸಣ್ಣದಾದ ಗುಡ್ಡವೊಂದನ್ನು ಹತ್ತಿ ಇಳಿದರೆ ಕರಿ ಕಡಲ ತೀರ ಕಣ್ತುಂಬಿಕೊಳ್ಳಬಹುದು. ಎರಡು ಗುಡ್ಡಗಳ ಮಧ್ಯೆ ಈ ಕಡಲತೀರ ಇದೆ. ಇದರ ಎಡ, ಬಲದಲ್ಲಿ ಮಾಜಾಳಿ ಕಡಲತೀರ ಮತ್ತು ಗೋವಾದ ಪೋತಿಂ ಕಡಲತೀರ ಇದೆ. ಆಶ್ಚರ್ಯದ ಸಂಗತಿ ಎಂದರೆ, ಈ ಎರಡೂ ಕಡಲ ತೀರದ ಮರಳು ಬಿಳಿ ಬಣ್ಣದಲ್ಲಿದೆ. ಮಧ್ಯ ಇರುವ ತೀಳ್ಮಾತಿಯಲ್ಲಿ ಮಾತ್ರ ಕಪ್ಪು ಮರಳು ಇದೆ. ಹೀಗೇಕೆ ಎನ್ನುವುದಕ್ಕೆ ಸ್ಪಷ್ಟ ಉತ್ತರಗಳು ಈವರೆಗೆ ಸಿಕ್ಕಿಲ್ಲ. ಕಡಲ ತೀರದ ಅಕ್ಕ ಪಕ್ಕದಲ್ಲಿ ಕಡುಗಪ್ಪು ಬಣ್ಣದ ಬಂಡೆಗಲ್ಲುಗಳ ರಾಶಿ ಚಾಚಿಕೊಂಡಿವೆ. ಕಡಲ ಶಾಸ್ತ್ರಜ್ಞರು ಹೇಳುವ ಪ್ರಕಾರ ಈ ಕಲ್ಲುಗಳೇ ಅಲೆಗಳ ರಭಸಕ್ಕೆ ಸಿಕ್ಕಿ ಮರಳು ರೂಪ ಪಡೆಯುತ್ತವೆ. ಅದು ನೀರಿನ ಸುಳಿಗೆ ಸಿಲುಕಿ ಹೊರ ಹೋಗದೇ ಇರುವುದರಿಂದ ಕಪ್ಪು ಮರಳಿನ ಕಡಲತೀರ ನಿರ್ವಣವಾಗಿದೆ. ಇಂತಹ ಕಡಲತೀರವನ್ನು ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ.
ಎಳ್ಳು ಮಣ್ಣು:ಇಲ್ಲಿನ ಮರಳು ಅಪ್ಪಟ ಕರಿ ಎಳ್ಳಿನಂತೆ ಕಾಣುತ್ತದೆ. ತೀಳ್ ಮಾತಿ (ತೀಳ್ಮಾತಿ) ಎನ್ನುವ ಹೆಸರು ಬರುವುದಕ್ಕೂ ಇದೇ ಕಾರಣವಿದೆ. ಕೊಂಕಣಿ ಭಾಷೆಯಲ್ಲಿ ತೀಳ್ ಎಂದರೆ ಎಳ್ಳು; ಮಾತಿ ಎಂದರೆ ಮಣ್ಣು. ಎಳ್ಳಿನ ರೀತಿಯಲ್ಲಿರುವ ಮರಳಿನ ಕಡಲ ತೀರ ಆಗಿರುವುದರಿಂದ ತೀಳ್ಮಾತಿ ಎನ್ನುವ ಹೆಸರು ಬಂದಿದೆ ಎನ್ನಲಾಗಿದೆ. dsf sdfs f
ಕಾರವಾರ ಜಿಲ್ಲೆಯನ್ನು ರಾಜ್ಯದ ಪ್ರವಾಸಿ ತಾಣಗಳ ಹೆಬ್ಬಾಗಿಲನ್ನಾಗಿಸಬೇಕು. ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಹೊಸ ಪ್ರವಾಸಿ ತಾಣಗಳನ್ನು ಪರಿಚಯಿಸಬೇಕು. ಈ ಮೂಲಕ ಹೆಚ್ಚು ಪ್ರವಾಸಿಗರನ್ನು ಸೆಳೆಯಬೇಕು ಎನ್ನುವುದು ಜಿಲ್ಲಾಡಳಿತದ ಕನಸು.
| ಗಂಗೂಬಾಯಿ ರಮೇಶ್ ಮಾನಕರ, ಜಿಲ್ಲಾಧಿಕಾರಿ, ಉತ್ತರ ಕನ್ನಡ
ಹೋಗುವುದು ಹೇಗೆ?:ತೀಳ್ಮಾತಿಗೆ ಹೋಗಬೇಕೆಂದರೆ, ಮಾಜಾಳಿ ಕಡಲತೀರದಲ್ಲಿರುವ ಗುಡ್ಡದ ಕಿರಿದಾದ ದಾರಿಯಲ್ಲಿ ಒಂದು ಕಿ.ಮೀ. ಚಾರಣ ಮಾಡಬೇಕು. ಕಾರವಾರ ನಗರದಿಂದ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಸಾಗಿದರೆ ಮಾಜಾಳಿ ಗ್ರಾಮ ಸೇರುತ್ತೇವೆ. ಅಲ್ಲಿಂದ ಎಡಕ್ಕೆ ತಿರುಗಿ ಕಿರಿದಾದ ಡಾಂಬರು ರಸ್ತೆಯಲ್ಲಿ ಅಂದಾಜು 3-4 ಕಿ.ಮೀ. ಕ್ರಮಿಸಿದ ಮೇಲೆ ಮಾಜಾಳಿ ಕಡಲತೀರ ಎದುರುಗೊಳ್ಳುತ್ತದೆ. sdfdsf dsfds dsfdsf sdf
ಮಕ್ಕಳನ್ನು ಹೊಂದುವುದೆಂದರೆ ಜಗತ್ತನ್ನು ಉಳಿಸಿದಂತೆ: ಎಲಾನ್ ಮಸ್ಕ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + nine =
Remember me
