ಚಿಕ್ಕಮಗಳೂರು:ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದೀಗ ಜನರ ಆಗಮನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ನಗರದ ಬೆಟ್ಟ-ಗುಡ್ಡಗಳು, ಜಲಪಾತ ಸ್ಥಳಗಳಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ಕೊಡುತ್ತಿದ್ದಾರೆ. ಈಗಾಗಲೇ ಎತ್ತಿನಭುಜ ಚಾರಣವನ್ನು ಸ್ಥಗಿತಗೊಳಿಸಿರುವ ಚಿಕ್ಕಮಗಳೂರು ಜಿಲ್ಲಾಡಳಿತ, ಪ್ರವಾಸಿಗರ ಹುಚ್ಚಾಟ ಮುಂದುವರೆದರೆ ಉಳಿದ ಪ್ರವಾಸಿ ತಾಣಗಳಿಗೂ ಶೀಘ್ರವೇ ನಿಷೇಧ ಹೇರುವುದರಲ್ಲಿ ಕಿಂಚಿತ್ತು ಅನುಮಾನವಿಲ್ಲ.
ಇದನ್ನೂ ಓದಿ:VIDEO | ಮನೆಗೆ ನುಗ್ಗಿ ಸೀರಿಯಲ್ ನೋಡುತ್ತಾ ಕುಳಿತ ಬುಸ್​​ ಬುಸ್​ ನಾಗಪ್ಪ..
ಕಳೆದ ಕೆಲವು ದಿನಗಳಿಂದ ಜಿಲ್ಲೆಗೆ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪ್ರವಾಸಿಗರು, ಚಾರ್ಮಾಡಿ ಘಾಟಿಯಲ್ಲಿ ಕಾರು ನಿಲ್ಲಿಸಿ, ಮೋಜು-ಮಸ್ತಿ ಮಾಡುತ್ತಿದ್ದಾರೆ. ರಸ್ತೆಯ ಮಧ್ಯೆ ತಮ್ಮ ವಾಹನಗಳನ್ನು ನಿಲ್ಲಿಸಿ, ಜಾರುವ ಬಂಡೆಗಳ ಮೇಲೆ ಹತ್ತುವ ಹುಚ್ಚು ಸಾಹಸ ಪ್ರದರ್ಶಿಸುತ್ತಿದ್ದಾರೆ. ಜಲಪಾತಗಳ ಸ್ಥಳಕ್ಕೆ ಪ್ರವೇಶಿಸುವುದಲ್ಲದೇ ಜಾರುವ ಬಂಡೆಗಳ ಮೇಲೆ ನಿಲುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ಸ್ವಲ್ಪ ಯಾಮಾರಿದ್ರು ಅಪಾಯ ಕಟ್ಟಿಟ್ಟಬುತ್ತಿ ಎಂಬುದನ್ನು ಪ್ರವಾಸಿಗರು ಯಾಕೋ ಮರೆತಂತೆ ಕಾಣುತ್ತಿದೆ.

ಬಂಡೆಗಳ ಮೇಲೆ ಹತ್ತಿ ಅಪಾಯದ ಸ್ಥಳದಲ್ಲಿ ಡ್ಯಾನ್ಸ್, ರೀಲ್ಸ್​ ಮಾಡಿ ಹುಚ್ಚಾಟ ಪ್ರದರ್ಶನ. ಈ ಹಿಂದೆ ಇದೇ ರೀತಿ ಮಾಡಲು ಹೋಗಿ ಅನೇಕರು ಕೈ-ಕಾಲು ಮುರಿದುಕೊಂಡು, ಜೀವ ಕಳೆದುಕೊಂಡ ಘಟನೆಗಳು ಸಹ ವರದಿಯಾಗಿವೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಜಲಪಾತಗಳ ಬಳಿ ಇಂತಹ ಘಟನೆಗಳು ಹೆಚ್ಚುತ್ತಿವೆ. ಬಂಡೆಗಳ ಮೇಲೆ ಹತ್ತದಂತೆ ನಾಮಫಲಕ ಇದ್ದರೂ ಪ್ರವಾಸಿಗರು ತಲೆಕಡಿಸಿಕೊಳ್ಳುತ್ತಿಲ್ಲ.
ಇದನ್ನೂ ಓದಿ:ಧಾರಾಕಾರ ಮಳೆ ನಡುವೆ ರಸ್ತೆಯಲ್ಲಿ 8 ಅಡಿ ಉದ್ದದ ಮೊಸಳೆ ಓಡಾಟ; ಸ್ಥಳೀಯರು ಏನಂದ್ರು ಗೊತ್ತಾ?
ರಸ್ತೆ ಮಧ್ಯೆ ವಾಹನ ನಿಲ್ಲಿಸಿ, ಡ್ಯಾನ್ಸ್ ಮಾಡುವುದು, ಸೆಲ್ಫಿ ತೆಗೆದುಕೊಳ್ಳುವುದನ್ನು ಪ್ರವಾಸಿಗರು ಈ ಕೂಡಲೇ ತಪ್ಪಿಸಬೇಕು. ಪ್ರವಾಸಿಗರ ಇಂತಹ ಹುಚ್ಚಾಟ ರಸ್ತೆಯಲ್ಲಿ ಪ್ರಯಾಣಿಸುವ ಇತರ ವಾಹನ ಸವಾರರಿಗೂ ಬಹಳ ಕಿರಿಕಿರಿ ಉಂಟುಮಾಡುತ್ತಿದೆ. ಚಿಕ್ಕಮಗಳೂರಿನ ಪ್ರವಾಸಿ ತಾಣಗಳಲ್ಲಿ ಇಂತಹ ಘಟನೆಗಳು ಹೀಗೆ ಮುಂದುವರಿದರೆ ಎತ್ತಿನಭುಜ ಕ್ಲೋಸ್​ ಆದಂತೆ ಉಳಿದ ಸ್ಥಳಗಳಿಗೂ ನಿಷೇಧ ಹೇರುವುದು ಖಚಿತ.
ಐಸಿಸಿ ಟಿ20 ತಂಡದಲ್ಲಿ ಕೊಹ್ಲಿಗಿಲ್ಲ ಸ್ಥಾನ..! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 3 =
Remember me
