ಬೆಂಗಳೂರು:ಟೋಯಿಂಗ್ ವಿಚಾರದಲ್ಲಿ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ವ್ಯಾಪಕ ಟೀಕೆಗಳು ಹಾಗೂ ಇದೇ ವಿಷಯವಾಗಿ ಸಂಚಾರ ಪೊಲೀಸರ ವರ್ತನೆ ವಿರುದ್ಧ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಂದು ಮಹತ್ವದ ಸಭೆಯೊಂದು ನಡೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಸಚಿವ ಅರಗ ಜ್ಞಾನೇಂದ್ರ ನೇತೃತ್ವದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಟೋಯಿಂಗ್​ನಿಂದ ಉದ್ಭವಿಸಿರುವ ವಿವಾದಿತ ಪರಿಸ್ಥಿತಿ ಕುರಿತು ಬಹಳಷ್ಟು ಚರ್ಚೆ ನಡೆಯಿತು. ಸಿಎಂ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಗೃಹಸಚಿವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಸಾರ್ವಜನಿಕರ ಹೇಳಿಕೆಗಳನ್ನು ಗೌರವಿಸಿ ಟೋಯಿಂಗ್​ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಇದುವರೆಗೆ ಏನಾಗಿದೆ ಅದು ಇನ್ನು ಮುಂದೆ ಆಗಬಾರದು. ಪಾರ್ಕಿಂಗ್ ಕುರಿತ ಫಲಕಗಳು ಸಾರ್ವಜನಿಕರಿಗೆ ಸರಿಯಾಗಿ ಕಾಣುವಂತಿರಬೇಕು. 50 ಮೀಟರ್​ಗೊಂದರಂತೆ ಇರುವ ನೋ ಪಾರ್ಕಿಂಗ್ ಫಲಕವನ್ನು 25 ಮೀಟರ್​ಗೊಂದರಂತೆ ಹಾಕಬೇಕು ಎಂದು ಸೂಚನೆ ನೀಡಲಾಗಿದೆ.
ಅಲ್ಲದೆ ಟೋಯಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಸಲುವಾಗಿ 15 ದಿನಗಳ ಕಾಲ ಖಾಸಗಿ ಟೋಯಿಂಗ್ ಸ್ಥಗಿತಗೊಳಿಸಲಾಗುವುದು. ಆದರೆ ನಾಳೆಯಿಂದ ನೋ ಪಾರ್ಕಿಂಗ್ ಜಾಗದಲ್ಲಿ ವಾಹನಳನ್ನು ನಿಲ್ಲಿಸಿದರೆ ಪೊಲೀಸರು ದೂರು ದಾಖಲಿಸಿಕೊಂಡು ಕ್ರಮಕೈಗೊಳ್ಳುತ್ತಾರೆ ಎಂದು ಗೃಹಸಚಿವರು ತಿಳಿಸಿದ್ದಾರೆ. ಜತೆಗೆ ಟೋಯಿಂಗ್ ಮಾಡಿದಾಗ ಇರುವ ಹಳೆಯ ಕೇಸುಗಳನ್ನು ಕ್ಲಿಯರ್ ಮಾಡಲು ಒತ್ತಾಯಿಸುವಂಥ ಸಮಸ್ಯೆ ಬಗೆಹರಿಸಲು ಕೂಡ ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಅದರಲ್ಲಿ ಪೊಲೀಸರ ತಪ್ಪಿಲ್ಲ, ಇದರಲ್ಲಿ ತಪ್ಪಿತ್ತು..: ಸಂಚಾರ ಪೊಲೀಸರ ವಿರುದ್ಧದ ಟೀಕೆಗಳಿಗೆ ರವಿಕಾಂತೇಗೌಡ ಲಿಖಿತ ಉತ್ತರ
Sign in to your account
Please enter an answer in digits:11 − eight =
Remember me
