ಯಾದಗಿರಿ:ವ್ಯಕ್ತಿಯೊಬ್ಬರು ಮಕ್ಕಳಿಬ್ಬರ ಕಣ್ಣೆದುರೇ ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ಯಾದಗಿರಿ-ಷಹಾಪುರ ಮಾರ್ಗದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮಕ್ಕಳಿಬ್ಬರಿಗೂ ಗಾಯಗಳಾಗಿವೆ.
ಯಾದಗಿರಿ ಜಿಲ್ಲೆಯ ಷಹಾಪುರದ ಸೋಮಣ್ಣ ಹಿಂದಿನಮನಿ (45) ಸಾವಿಗೀಡಾದ ವ್ಯಕ್ತಿ. ಇವರ ಜತೆಗಿದ್ದ ಮಕ್ಕಳಾದ ಮಹೇಶ (10) ಹಾಗೂ ಹನುಮಂತ (12) ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಷಹಾಪುರ ತಾಲೂಕಿನ ಸಗರ ಗ್ರಾಮದ ನಿವಾಸಿ ಸೋಮಣ್ಣ ಬೈಕ್​ನಲ್ಲಿ ಮಕ್ಕಳಿಬ್ಬರ ಜತೆಗೆ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್​ನ ಟಯರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿದ್ದರಿಂದ ಅದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತ ಆಗುತ್ತಿದ್ದಂತೆ ಟ್ರ್ಯಾಕ್ಟರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ವಡಗೇರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 ಮದ್ವೆ, 3 ಡೈವೋರ್ಸ್, ಸದ್ಯ ಇಬ್ರು ಹೆಂಡ್ತಿ; ಪತ್ನಿ ಬೇಗ ಮನೆಗೆ ಬರಲಿ ಎಂದೇ ಫ್ಲೈಓವರ್!; ಏನಿದು, ಯಾರ ಕಥೆ?

ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 3 =
Remember me
