ಯಾದಗಿರಿ:ಇಲ್ಲೊಬ್ಬ ಅಪರೂಪದ ಸಾಹಸಿ 1 ಗಂಟೆ 43 ನಿಮಿಷಗಳಲ್ಲಿ ಬರೋಬ್ಬರಿ 24 ಕಿಲೋ ಮೀಟರ್ ದೂರ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಾಲನೆ 1 ಲಕ್ಷದ 45 ಸಾವಿರ ರೂಪಾಯಿ ಭರ್ಜರಿ ಮೊತ್ತದ ಬಹುಮಾನವನ್ನು ಬಾಚಿಕೊಂಡಿದ್ದಾನೆ.
ಹೌದು, ಯಾದಗಿರಿ ಜಿಲ್ಲೆಯ ದೋರನಹಳ್ಳಿ ಗ್ರಾಮದ ನಿವಾಸಿ ಬಸಲಿಂಗಪ್ಪ ಹುರಸಗುಂಡಗಿ ಈ ಅಪರೂಪದ ಸಾಧನೆ ಮಾಡಿ ಭೇಷ್ ಎನಿಸಿಕೊಂಡಿದ್ದಾನೆ. ನಾಗರ ಪಂಚಮಿ ಅಂಗವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ವಿಭಿನ್ನ ಸಾಹಸ ಸ್ಪರ್ಧೆಗಳು ನಡೆಯುತ್ತವೆ. ಆದರೆ, ಇದೇ‌ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಬಹುದೂರ ಚಲಾಯಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.
ಬಸಲಿಂಗಪ್ಪ ಹುರಸಗುಂಡಗಿ, ವಿಜಯಪುರ-ಹೈದರಾಬಾದ್ ಹೆದ್ದಾರಿಯಲ್ಲಿ ಬರುವ ದೋರನಹಳ್ಳಿ ಗ್ರಾಮದಿಂದ ಯಾದಗಿರಿ ಹೊರವಲಯದ ವಡಗೇರಿ ಕ್ರಾಸ್​ವರೆಗೆ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು 1 ಗಂಟೆ 43 ನಿಮಿಷದಲ್ಲಿ ತಲುಪಿದ್ದಾನೆ. ಇನ್ನೋರ್ವ ಪ್ರತಿಸ್ಪರ್ಧಿ ಪರಶುರಾಮ ಟೋಕಾಪುರ ಎಂಬುವವರು ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದರೂ ಸಹ 1 ತಾಸು 45 ನಿಮಿಷದಲ್ಲಿ ದೂರವನ್ನು ಕ್ರಮಿಸಿದರು. ಆದರೆ ಅಂತಿಮವಾಗಿ 2 ನಿಮಿಷ ಮೊದಲು ತಲುಪಿದ ಬಸಲಿಂಗಪ್ಪ ಹುರಸಗುಂಡಿಗಿ ಅವರನ್ನು ವಿಜೇತರನ್ನಾಗಿ ಘೋಷಿಸಲಾಯಿತು.
ಇದನ್ನೂ ಓದಿ:ನೀವು ಅಮೆರಿಕಕ್ಕೆ ಏಕೆ ಹೋಗಲಿಲ್ಲ? ಸಿಕ್ಕಾಪಟ್ಟೆ ವೈರಲ್​ ಆಯ್ತು ಬೆಂಗಳೂರು ಟೆಕ್ಕಿ ಕೊಟ್ಟ ಉತ್ತರ…
ಸುಮಾರು 24 ಕಿ.ಮೀ. ದೂರವನ್ನು ತಲುಪಿದಾಗ ಅಲ್ಲಿನ ಗ್ರಾಮಸ್ಥರು ಶಿಳ್ಳೆ, ಕೇಕೆ ಹಾಕಿ ವಿಜೇತ ಬಸಲಿಂಗಪ್ಪನನ್ನ ಹೊತ್ತು ಸಂಭ್ರಮಾಚರಣೆ‌ ಮಾಡಿದ್ರು. ದೋರನಹಳ್ಳಿ ಗ್ರಾಮಸ್ಥರಿಂದ ಸಂಗ್ರಹಿಸಿದ್ದ ಒಟ್ಟು 1 ಲಕ್ಷ 45 ಸಾವಿರ ರೂಪಾಯಿ ಹಣವನ್ನು ಬಹುಮಾನವಾಗಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿ ವಿಜೇತನಾದ ಬಸಲಿಂಗಪ್ಪ ಹುರಸಗುಂಡಿಗಿ ನೀಡಲಾಯಿತು.
ಗ್ರಾಮೀಣ ಸೊಗಡಿನ ಕ್ರೀಡೆಗಳು ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ವಿಶೇಷ ಸ್ಪರ್ಧೆ ಆಯೋಜಿಸಿದ್ದು ವಿಶೇಷವಾಗಿತ್ತು. ಸ್ಥಳೀಯರು ಸಾಕಷ್ಟು ಸಂಭ್ರಮಿಸಿದರು.(ದಿಗ್ವಿಜಯ ನ್ಯೂಸ್​)
ನೀವು ಅಮೆರಿಕಕ್ಕೆ ಏಕೆ ಹೋಗಲಿಲ್ಲ? ಸಿಕ್ಕಾಪಟ್ಟೆ ವೈರಲ್​ ಆಯ್ತು ಬೆಂಗಳೂರು ಟೆಕ್ಕಿ ಕೊಟ್ಟ ಉತ್ತರ…

ವಲಸೆಗೆ ಒತ್ತಡ, ಭವಿಷ್ಯದ ದುಗುಡ: ನಾಲ್ಕು ದಿನದಲ್ಲಿ ತೀರ್ಮಾನವೆಂದ ಎಸ್​ಟಿಎಸ್; ಬೈರತಿ, ಹೆಬ್ಬಾರ್ ತ್ರಿಶಂಕು

ಕಾವೇರಿ ವರಿ, ರಾಜಕೀಯ ಮೇಲಾಟ ಇಂದು: ಸರ್ವಪಕ್ಷ ಸಭೆಗೆ ಸರ್ಕಾರ, ಪ್ರತಿಪಕ್ಷ ಸಜ್ಜು; ಸುಪ್ರೀಂ ವಿಚಾರಣೆಗೂ ಮುನ್ನ ರಾಜ್ಯದ ನಿಲುವು ಚರ್ಚೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 7 =
Remember me
