ಬೆಂಗಳೂರು:ಕಾನೂನು ಎಲ್ಲರಿಗೂ ಒಂದೇ. ಬಡವ-ಶ್ರೀಮಂತ, ಸರ್ಕಾರಿ-ಖಾಸಗಿ ಎಂಬ ತಾರತಮ್ಯ ಇಲ್ಲ. ರಸ್ತೆ ಸಂಚಾರ ನಿಯಮಯದಲ್ಲೂ ಅಷ್ಟೆ. ಯಾರೇ ನಿಯಮ ಉಲ್ಲಂಘಿಸಿದ್ದರೂ ದಂಡ ತೆರಬೇಕು ಎಂಬುದಕ್ಕೆ ತಾಜಾ ಉದಾಹರಣೆ ಈ ಪ್ರಕರಣ.
ಹೌದು, ಸಂಚಾರ ನಿಯಮ ಉಲ್ಲಂಘಿಸಿಕೊಂಡು ಬರುತ್ತಿದ್ದ ಬಿಎಂಟಿಸಿ ಬಸ್​ ಡ್ರೈವರ್​ಗೆ ಕೆ.ಆರ್. ಪುರಂ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಇದರ ಬೆನ್ನಲ್ಲೇ ಸಂಸದರೊಬ್ಬರ ಕಾರಿಗೂ ಪೊಲೀಸರು ದಂಡ ಹಾಕಿದ್ದಾರೆ.
ಇದನ್ನೂ ಓದಿರಿಎರಡು ಸಾವಿರ ಕಿ.ಮೀ. ಪಾದಯಾತ್ರೆ ಹೊರಟ ಜೆ.ಎಚ್​. ಪಟೇಲ್​ರ ಪುತ್ರ ಮಹಿಮಾ!
41ನೇ ಡಿಪೋದ ಬಿಎಂಟಿಸಿ ಬಸ್ ಚಾಲಕ ನಾಗರಾಜ್ ದಂಡ ಕಟ್ಟಿದ್ದಾರೆ. ಹೂಡಿ ಮುಖ್ಯರಸ್ತೆ ಕಡೆಯಿಂದ ಕೆಆರ್ ಪುರಂ ಕಡೆಗೆ ಹೊರಟಿದ್ದ ನಾಗರಾಜ್​, ಒನ್​ ವೇ ಮಾರ್ಗದಲ್ಲಿ ಬಸ್ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಕೂಡಲೇ ಬಸ್​ಅನ್ನು ತಡೆದ ಕೆ.ಆರ್.ಪುರಂ ಟ್ರಾಫಿಕ್​ ಪೊಲೀಸ್ ಇನ್​ಸ್ಪೆಕ್ಟರ್ ಎಂ.ಎ. ಮಹಮದ್ ​ಅವರು ಚಾಲಕನಿಗೆ ದಂಡದ ಬಿಸಿ ಮುಟ್ಟಿಸಿದರು.
ಇದೇ ರಸ್ತೆಯಲ್ಲಿ ಬಂದ ಆಂಧ್ರದ ಗುಂಟೂರಿನ ಸಂಸದರಿಗೆ ಸೇರಿದ ಜಾಗ್ವಾರ್ ಕಾರಿಗೂ ದಂಡ ಹಾಕಲಾಗಿದೆ. ಸದರಿ ಕಾರನ್ನು ಸ್ಥಳೀಯ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯ ಚರಣ್ ಚಾಲನೆ ಮಾಡುತ್ತಿದ್ದರು. ಅವರಿಂದ ದಂಡ ವಸೂಲಿ ಮಾಡಲಾಗಿದೆ.
ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ

ಸಿಸಿಬಿ ನೋಟಿಸ್​ ಬರುತ್ತಿದ್ದಂತೆ ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಅನುಶ್ರೀ ಕರೆ ಮಾಡಿದ್ದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − thirteen =
Remember me
