ಬೆಂಗಳೂರು:ಟ್ರಾಫಿಕ್ ಪೊಲೀಸರು ಹಿಡಿಯುತ್ತಿಲ್ಲ ಎಂದು ನಿಯಮ ಉಲ್ಲಂಘಿಸುವವರು ಓದಲೇ ಬೇಕಾದ ಸುದ್ದಿ ಇದು. ಸಿಗ್ನಲ್‌ ಅಲ್ಲಿ ಯಾರೂ ನೋಡುತ್ತಿಲ್ಲ ಎಂದು ಬೇಕಾಬಿಟ್ಟಿ ವಾಹನ ಚಲಾವಣೆ ಮಾಡಿದರೆ ಕೇಸ್ ದಾಖಲಾಗುವುದು ಮಾತ್ರ ಖಂಡಿತ.
ಇನ್ನು ಮುಂದೆ ಟ್ರಾಫಿಕ್​ ಪೊಲೀಸರು ನಿಲ್ಲಸಲಿಲ್ಲ ಎಂದರೆ ಸಿಗ್ನಲ್​ ಬಳಿ ಇರುವ ಕ್ಯಾಮರಾ ಮೂಲಕ ಟ್ರ್ಯಾಕ್​ ಮಾಡಿ ವಾಹನದ ಮೇಲೆ ಪ್ರಕರಣವನ್ನು ದಾಖಲಿಸಲಾಗುತ್ತದೆ. ಸದ್ಯಕ್ಕೆ ಟ್ರಾಫಿಕ್ ಪೊಲೀಸರು ವಾಹನವನ್ನ ತಡೆದು ತಪಾಸಣೆ ಮಾಡುವುದನ್ನು ನಿಲ್ಲಿಸಿದ್ದಾರೆ.
ಪೊಲೀಸರು ನಿಲ್ಲಿಸುತ್ತಿಲ್ಲ ಎಂದು ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಳವಾಗಿದ್ದು ದಿನಕ್ಕೆ 1 ಲಕ್ಷ 20 ಸಾವಿರ ಕೇಸ್​ಗಳು ಆನ್​ಲೈನ್​ನಲ್ಲಿ ರಿಜಿಸ್ಟರ್ ಆಗಿವೆ. ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿ ಇತರೆ ಕೇಸ್​ಗಳು ದಾಖಲಾಗಿವೆ.
ಎರಡು ತಿಂಗಳಲ್ಲಿ 72 ಲಕ್ಷ ಕೇಸ್ ಗಳು ದಾಖಲಾಗಿರೋದು ಪತ್ತೆಯಾಗಿದ್ದು ಯಾರೋಬ್ಬರೂ ದಂಡದ ಮೊತ್ತವನ್ನು ಪಾವತಿ ಮಾಡಿಲ್ಲ ಎನ್ನುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮನೆ ಬಾಗಿಲಿಗೆ ಬರಲು ಸಂಚಾರಿ ಪೊಲೀಸರು ತೀರ್ಮಾನ ಮಾಡಿದ್ದಾರೆ.
ಈಗಾಗಲೇ ನಿಯಮ ಉಲ್ಲಂಘಿಸಿದವರ ಮನೆಗಳಿಗೆ ನೊಟೀಸ್ ಕಳಿಸಿದ್ದು ಜನರು ನೊಟೀಸ್​ಗೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಚುನಾವಣೆ ಮುಗಿದ ಬಳಿಕ ಅತಿ ಹೆಚ್ಚು ರೂಲ್ಸ್ ಬ್ರೇಕ್ ಮಾಡಿರುವವರ ಮನೆಗೆ ಹೋಗಿ ದಂಡ ಕಟ್ಟಿಸಿಕೊಳ್ಳಲು ಫ್ಲ್ಯಾನ್ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
