ಹೊಸಕೋಟೆ:ಜನರ ರಕ್ಷಕ ಎನಿಸಿಕೊಂಡ ಪೊಲೀಸ್​ ಪೇದೆಯೊಬ್ಬರು ಸಮವಸ್ತ್ರಧಾರಿಯಾಗಿ ಹಾಡಹಗಲೇ ಕುಡಿದು ಫುಟ್​ಪಾತ್​ನಲ್ಲಿ ಮಲಗಿರುವ ವಿಡಿಯೋ ವೈರಲ್​ ಆಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಚನ್ನಬೈರೇಗೌಡ ಕ್ರೀಡಾಂಗಣ ಬಳಿ ಟ್ರಾಫಿಕ್​ ಪೇದೆಯೊಬ್ಬರು ಕುಡಿದ ಅಮಲಿನಲ್ಲೇ ನಿದ್ರೆಗೆ ಜಾರಿದ್ದಾರೆ. ಮದ್ಯದ ನಶೆಯಲ್ಲಿ ವಾಹನ ಚಾಲನೆ ಮಾಡುವವರಿಗೆ ಬಿಸಿ ಮುಟ್ಟಿಸಬೇಕಿದ್ದವರೇ ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಮಲಗಿದ್ದಕ್ಕೆ ಸಾರ್ವಜನಿಕರಿಂದ ಭಾರೀ ಟೀಕೆಗಳು ವ್ಯಕ್ತವಾಗಿದೆ.ಇದನ್ನೂ ಓದಿರಿಸಪ್ತಪದಿ ತುಳಿದ ಐದೇ ದಿನಕ್ಕೆ ಮದುಮಗ ಸಾವು, 20 ಜನರಿಗೆ ಕೋವಿಡ್​ ಸೋಂಕು!
ಪಾನಮತ್ತನಾಗಿ ಫುಟ್​ಪಾತ್​ನಲ್ಲಿ ಮಲಗಿದ್ದ ಪೇದೆಯನ್ನು ಸಾರ್ವಜನಿಕರು ಎಷ್ಟೇ ಎಚ್ಚರ ಮಾಡಲು ಹೋದರೂ ಮೈಮೇಲೆ ಪ್ರಜ್ಞೆ ಇಲ್ಲದಂತೆ ಮಲಗಿದ್ದನ್ನು ಸ್ಥಳೀಯರೇ ಮೊಬೈನಲ್ಲಿ ವಿಡಿಯೋ ಮಾಡಿದ್ದು, ಜಾಲತಾಣದಲ್ಲಿ ವೈರಲ್​ ಆಗಿದೆ. ಎದ್ದೇಳಿ, ಮನೆಯಲ್ಲಿ ಹೋಗಿ ಮಲಗಿ ಎಂದು ವ್ಯಕ್ತಿಯೊಬ್ಬರು ಎಬ್ಬಿಸಲು ಯತ್ನಿಸಿದರೂ ಆ ಪೇದೆ, ‘ಐದು ನಿಮಿಷ ಮಲಗುತ್ತೇನೆ’ ಎಂದಿದ್ದಾರೆ. ಈ ಪೇದೆ ಯಾವ ಠಾಣೆಯವರು, ಎಲ್ಲಿಯವರು ಎಂಬುದು ತಿಳಿದು ಬಂದಿಲ್ಲ.
ಒಟ್ಟಿನಲ್ಲಿ ಜನರಿಗೆ ಕಾನೂನಿನ ಪಾಠ ತಿಳಿಹೇಳಬೇಕಾದ ಆರಕ್ಷಕರೊಬ್ಬರು ಹೀಗೆ ರಸ್ತೆಯಲ್ಲಿ ಕುಡಿದು ಮಲಗಿದ್ದು, ಇಲಾಖೆಗೂ ಇರಿಸುಮುರಿಸು ತರಿಸಿದೆ. ಯಾರಾದರೇನು ಇದು ‘ಎಣ್ಣೆ’ ಗಮ್ಮತ್ತು ಎಲ್ಲರಿಗೂ ಒಂದೇ ಎಂಬ ಕಾಮೆಂಟ್ಸ್​ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
https://www.facebook.com/VVani4U/videos/270278340715744/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 4 =
Remember me
