ಬೆಂಗಳೂರು:ಸಂಚಾರ ನಿಯಮ ಉಲ್ಲಂಘನೆ ದಂಡದಲ್ಲಿ ಶೇ.50 ರಿಯಾಯಿತಿ ಪಡೆಯಲು ಜನರು ಸ್ವಯಂಪ್ರೇರಿತವಾಗಿ ಪಾವತಿ ಮಾಡುತ್ತಿರುವ ದಂಡ ಸಂಗ್ರಹದಲ್ಲಿ ಬುಧವಾರ ಕೊಂಚ ಇಳಿಮುಖವಾಗಿದೆ. ಅದಾಗ್ಯೂ ಕಳೆದ ಆರು ದಿನಗಳಲ್ಲಿ ಒಟ್ಟಾರೆ ದಂಡ ಸಂಗ್ರಹ 50 ಕೋಟಿ ರೂ. ಗಡಿದಾಡಿದೆ.
ಸಾರಿಗೆ ಇಲಾಖೆ ನೀಡಿರುವ ಟ್ರಾಫಿಕ್ ಫೈನ್‌ನಲ್ಲಿ ಶೇ.50 ರಿಯಾಯಿತಿ ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ಜನರು ಸ್ವಯಂಪ್ರೇರಿತವಾಗಿ ದಂಡ ಪಾವತಿಸುತ್ತಿದ್ದಾರೆ. ಬುಧವಾರ ಸಹ ಸ್ಥಳೀಯ ಠಾಣೆಗಳಿಗೆ ಜನರೇ ಖುದ್ದು ಹಾಜರಾಗಿ ತಮ್ಮ ವಾಹನಗಳ ಮೇಲೆ ವಿಧಿಸಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ದಂಡ ಪಾವತಿಸಿದರು. ಅದೇ ರೀತಿ ಆನ್‌ಲೈನ್ ಸೇವೆ, ಕರ್ನಾಟಕ ಒನ್, ಬೆಂಗಳೂರು ಒನ್‌ನಲ್ಲಿ ದಂಡ ಪಾವತಿಸಿದ ದೃಶ್ಯ ಕಂಡು ಬಂತು.
ಬುಧವಾರ 9.06 ಕೋಟಿ ರೂ. ದಂಡ ವಸೂಲಿಯಾಗಿದೆ. ಫೆ.7ರ ಮಂಗಳವಾರ 9.7 ಕೋಟಿ ರೂ. ಸಂಗ್ರಹವಾಗಿತ್ತು. ನಿರೀಕ್ಷೆಗೂ ಮೀರಿ ಜನರಿಂದ ಸ್ಪಂದನೆ ಸಿಗುತ್ತಿದೆ. ಫೆ.11ರ ವರೆಗೂ ಇದೇ ರೀತಿ ಸಾರ್ವಜನಿಕರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕೆಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಫೆ.11ರ ಆನಂತರವೂ ಶೇ.50 ರಿಯಾಯಿತಿ ಸೌಲಭ್ಯ ವಿಸ್ತರಿಸುವ ಪ್ರಸ್ತಾಪ ಪೊಲೀಸ್ ಇಲಾಖೆ ಮುಂದೆ ಇಲ್ಲ. ಇದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಾರಿಗೆ ಇಲಾಖೆ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಅವಧಿ ವಿಸ್ತರಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಅಧಿಕಾರ ಇಲ್ಲವೆಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರೇಮಿಗಳ ದಿನದಂದು ‘ಅಪ್ಪಿಕೋ ದನ’; ಫೆ. 14 ‘ಕೌ ಹಗ್ ಡೇ’ ಎಂದು ಆಚರಿಸಲು ಸರ್ಕಾರದ ಮನವಿ
ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 6 =
Remember me
