ತೀರ್ಥಹಳ್ಳಿ:ತಂದೆ ಕೊನೆಯುಸಿರೆಳೆದ ವಿಷಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗನಿಗೆ ಗೊತ್ತೇ ಇಲ್ಲ. ತಂದೆಯ ಕ್ರಿಯಾಕರ್ಮಗಳನ್ನೂ ಮಾಡಲಾಗಲಿಲ್ಲ. ದುರ್ದೈವ ಎಂದರೆ ತಂದೆ ಮೃತಪಟ್ಟ ಮರುದಿನವೇ ಮಗ ಕೂಡ ಕೊನೆಯುಸಿರೆಳೆದ.
ಕೆಲವೇ ದಿನಗಳ ಹಿಂದೆ ಹೆತ್ತಬ್ಬೆಯನ್ನು ಕಳೆದುಕೊಂಡು ತಬ್ಬಲಿಯಾಗಿ ದುಃಖದ ಮಡುವಿನಲ್ಲಿದ್ದ ಮಗ, ಅಗಲಿದ ತಂದೆಯ ಕಳೇಬರವನ್ನೂ ನೋಡಲಾಗದ ಸ್ಥಿತಿಯಲ್ಲಿ ಒಂದೇ ದಿನದ ಅಂತರದಲ್ಲಿ ತಾನೂ ಹೆತ್ತವರ ಹಾದಿ ಹಿಡಿದ ಘಟನೆ ಪಟ್ಟಣದಲ್ಲಿ ಶನಿವಾರ ಸಂಭವಿಸಿದೆ. ಪಶುವೈದ್ಯ ಇಲಾಖೆ ನಿವೃತ್ತ ನೌಕರ, ಪಟ್ಟಣದ ಸೊಪ್ಪುಗುಡ್ಡೆ ಬಡಾವಣೆಯ ಗಣೇಶಪ್ಪ ಶೇಟ್ ​(89) ಮತ್ತು ಇವರ ಏಕೈಕ ಪುತ್ರ ದಿನೇಶ್​ ಶೇಟ್​ (51) ಮೃತರು.ಇದನ್ನೂ ಓದಿರಿಈ ಮನೆಯಲ್ಲಿ ಮೂವರ ಸಾವಾಯ್ತು… ದೋಷವೆಂದು ಕೆಲ ತಿಂಗಳು ಹೊರಗಿದ್ದ ಮಗ ವಾಪಸ್ ​ಬರುಷ್ಟರಲ್ಲಿ ಕಾದಿತ್ತು ಶಾಕ್​!
ದಿನೇಶ್​ಗಾಗಿ ತಂದೆ ಗಣೇಶಪ್ಪ ಅವರು ಪಟ್ಟಣ ಆಜಾದ್​ ರಸ್ತೆಯಲ್ಲಿ ನವರತ್ನ ಜ್ಯುವೆಲರ್ಸ್​ ಹೆಸರಿನಲ್ಲಿ ಚಿನ್ನದ ಅಂಗಡಿ ತೆರೆದಿದ್ದರು. ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ನಂತರ ನಿವೃತ್ತ ನೌಕರರ ಸಂಘದಲ್ಲೂ ಸಕ್ರಿಯರಾಗಿದ್ದರು. ಕೆಲದಿನಗಳ ಹಿಂದೆ ಬಾಳಸಂಗಾತಿಯನ್ನು ಕಳೆದುಕೊಂಡ ಆಘಾತದಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದ್ದ ಅವರು ಗುರುವಾರ ರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆ ಶುಕ್ರವಾರ ಪಟ್ಟಣದ ರುದ್ರಭೂಮಿಯಲ್ಲಿ ನೆರವೇರಿತು.
ಅತ್ತ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ದಿನೇಶ್, ಮಂಗಳೂರಿನ ಖಾಸಗಿ ಆಸ್ಪತ್ರೆ ಸೇರಿದ್ದರು. ತಂದೆಯ ಅಂತಿಮ ದರ್ಶನವನ್ನೂ ಮಾಡಲಾಗದ ಸ್ಥಿತಿಯಲ್ಲಿದ್ದ ದಿನೇಶ್​ ಶುಕ್ರವಾರ ತಡರಾತ್ರಿ ಇಹಲೋಕದ ಯಾತ್ರೆ ಮುಗಿಸಿದರು. ತಂದೆಯ ಸಾವಿನ ವಿಚಾರ ಮಗನಿಗೆ ತಿಳಿದಿರಲಿಲ್ಲ. ದಿನೇಶ್​ರ ಅಂತ್ಯಕ್ರಿಯೆ ಶನಿವಾರ ಸಂಜೆ ಮಂಗಳೂರಿನಲ್ಲಿ ನೆರವೇರಿತು. ಗಣೇಶಪ್ಪ ಅವರು ಪುತ್ರಿಯನ್ನು, ದಿನೇಶ್​ ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!

ಅಪಘಾತದಲ್ಲಿ ಪಾರಾದರೂ ಬೆನ್ನಟ್ಟಿದ ಜವರಾಯ ಸಾಲಾಗಿ ತಾಯಿ-ಮಗ-ಮೊಮ್ಮಗನ ಪ್ರಾಣ ಹೊತ್ತೊಯ್ದ!

‘ನಾವು ಡ್ರಗ್ಸ್​ ಪಾರ್ಟಿ ಮಾಡ್ತಾ ಇದ್ವಿ, ಅದರಲ್ಲಿ ಅನುಶ್ರೀ ಕಿಕ್ಕೇರಿಸಿಕೊಳ್ತಿದ್ಲು…’

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eighteen + 2 =
Remember me
