ಬೆಂಗಳೂರು:ಸಂಜಯ್‌ನಗರದ ಬಳಿ ರೈಲ್ವೆ ಹಳಿ ದಾಡುತ್ತಿದ್ದಾಗ ತಾಯಿ-ಮಗನ ಮೇಲೆ ರೈಲು ಹರಿದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದೊಡ್ಡಬ್ಯಾಲದ ಕರೆ ನಿವಾಸಿಗಳಾದ ಹರೀಶ್ (30), ಮಂಗಳಮ್ಮ (50) ಮೃತಪಟ್ಟವರು. ಮಂಗಳಮ್ಮ ದೊಡ್ಡಬ್ಯಾಲದ ಕರೆಯಲ್ಲಿ ಬಳೆ ಅಂಗಡಿ ಹೊಂದಿದ್ದಾರೆ. ಇವರ ಅಳಿಯ ಸಂಜಯ್‌ನಗರದಲ್ಲಿ ಅಂಗಡಿ ಹೊಂದಿದ್ದು, ಭಾನುವಾರ ಮುಂಜಾನೆ ಅಳಿಯನ ಮನೆಗೆ ಮಗ ಹರೀಶ್ ಜತೆ ಹೊರಟಿದ್ದರು. ಬೆಳಗ್ಗೆ 5.45ರಲ್ಲಿ ಸಂಜಯ್ ನಗರಕ್ಕೆ ಬಸ್‌ನಲ್ಲಿ ಬಂದು ಭದ್ರಪ್ಪ ಲೇಔಟ್ ಬಳಿ ಇಳಿದು ಪಕ್ಕದಲ್ಲಿದ್ದ ರೈಲ್ವೆ ಅಂಡರ್‌ಪಾಸ್‌ನ ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಆ ವೇಳೆ ಇವರ ಹಿಂದಿನಿಂದ ಏಕಾಏಕಿ ರೈಲೊಂದು ಬಂದಿದ್ದು, ತಾಯಿ-ಮಗನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇತ್ತ ಅದೇ ರಸ್ತೆಯಲ್ಲಿ ಬಂದ ಮತ್ತೊಂದು ರೈಲಿನ ಲೋಕೋ ಪೈಲೇಟ್ ಹಳಿ ಪಕ್ಕದಲ್ಲಿ ಬಿದ್ದಿದ್ದ ಇಬ್ಬರ ಮೃತದೇಹ ಗಮನಿಸಿ ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ಕೊಟ್ಟಿದ್ದರು. ಈ ಮಾಹಿತಿ ಆಧರಿಸಿ ಬೈಯ್ಯಪ್ಪನಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಇಬ್ಬರ ಮೃತದೇಹವನ್ನೂ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾನ್ಸರ್​ನಿಂದ ಬಳಲುತ್ತಿದ್ದ ಸಹೋದರನ ಚಿಕಿತ್ಸೆಗಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ ಮಹಿಳೆ!

ಇದ್ದಕ್ಕಿದ್ದಂತೆ ಗುಡ್ಡದಿಂದ ಕುಸಿದ ಬಂಡೆಗಳು; ಸೇತುವೆ ಮುರಿದುಬಿದ್ದು 9 ಸಾವು!

24 ಗಂಟೆಗಳಲ್ಲಿ 262 ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿದ ಅಫ್ಘಾನ್ ಸೇನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 19 =
Remember me
