ಬೆಂಗಳೂರು:ಜನಸ್ನೇಹಿ ಪೊಲೀಸಿಂಗ್ ಮಾದರಿಯಲ್ಲಿ ‘ರೈಲ್ವೆ ಪ್ರಯಾಣಿಕ ಸ್ನೇಹಿ ಪೊಲೀಸಿಂಗ್’ಗಾಗಿ ಪರಿಚಯ ಪತ್ರ (ವಿಸಿಟಿಂಗ್ ಕಾರ್ಡ್) ವಿತರಿಸುವ ವಿನೂತನ ಯೋಜನೆಗೆ ರೈಲ್ವೇ ಪೊಲೀಸ್ ಇಲಾಖೆ ಮುಂದಾಗಿದೆ.
ದೇಶ ವ್ಯಾಪಿ ರೈಲು ಸೇವೆ ಇದ್ದು, ದೂರದ ಊರುಗಳಿಗೆ ಜನರು ಪ್ರಯಾಣ ಬೆಳೆಸುತ್ತಾರೆ. ನಗರಕ್ಕೂ ಸಾವಿರಾರು ಪ್ರಯಾಣಿಕರು ಭೇಟಿ ನೀಡುತ್ತಾರೆ. ಪರಿಚಯ ಇಲ್ಲದ ಪ್ರದೇಶಕ್ಕೆ ಹೋದಾಗ ಅಥವಾ ಮಾರ್ಗಮಧ್ಯೆದಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ಸಹಾಯ ಮಾಡುವ ಉದ್ದೇಶಕ್ಕೆ ರಾಜ್ಯ ರೈಲ್ವೆ ಪೊಲೀಸ್ ಇಲಾಖೆಯು ಅಧಿಕಾರಿ, ಸಿಬ್ಬಂದಿ ಪರಿಚಯ ಪತ್ರ (ವಿಸಿಟಿಂಗ್ ಕಾರ್ಡ್) ವಿತರಿಸುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಿದೆ.
ವಿಸಿಟಿಂಗ್ ಕಾರ್ಡ್‌ನಲ್ಲಿ ರೈಲ್ವೆ ಠಾಣೆ ದೂರವಾಣಿ ಸಂಖ್ಯೆ, ಕಂಟ್ರೋಲ್ ರೂಮ್ ನಂಬರ್ ಮತ್ತು ಅಧಿಕಾರಿಗಳ ಮೊಬೈಲ್ ನಂಬರ್ ಇರಲಿದೆ. ರೈಲು ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬ ಪ್ರಯಾಣಿಕರಿಗೂ ವಿಸಿಟಿಂಗ್ ಕಾರ್ಡ್ ವಿತರಿಸಲಿದ್ದಾರೆ. ಪ್ರಯಾಣಿಕರು ರೈಲು ಅಥವಾ ಮನೆಗೆ ಹೋಗುವಾಗ ಆಟೋ, ಕ್ಯಾಬ್ ಇನ್ನಿತರ ಸ್ಥಳಗಳಲ್ಲಿ ಸಂಕಷ್ಟಕ್ಕೆ ಅಥವಾ ಅಪರಾಧಕ್ಕೆ ತುತ್ತಾದರೆ ತಕ್ಷಣ ವಿಸಿಟಿಂಗ್ ಕಾರ್ಡ್‌ನಲ್ಲಿ ಇರುವ ಫೋನ್ ನಂಬರ್‌ಗೆ ಕರೆ ಮಾಡಿದರೆ ರೈಲ್ವೆ ಪೊಲೀಸರು ಸಹಾಯ ಮಾಡಲಿದ್ದಾರೆ. ರೈಲ್ವೆ ಕಂಟ್ರೋಲ್ ರೂಮ್​ಗೆ ದೇಶ ವ್ಯಾಪಿ ವಿಸ್ತಾರ ಇರುವ ಕಾರಣಕ್ಕೆ ಇದು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಪ್ರಯಾಣಿಕರು ಈ ಯೋಜನೆಯ ಪ್ರಯೋಜನ ಪಡೆಯಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಳೆ ಚಾಲನೆ :ಬುಧವಾರ ಬೆಳಗ್ಗೆ 11 ಗಂಟೆಗೆ ಯಶವಂತಪುರ ರೈಲು ನಿಲ್ದಾಣದಲ್ಲಿ ವಿಸಿಟಿಂಗ್ ಕಾರ್ಡ್ ಯೋಜನೆಗೆ ರೈಲ್ವೆ ಇಲಾಖೆ ಎಡಿಜಿಪಿ ಭಾಸ್ಕರ್ ರಾವ್ ಚಾಲನೆ ನೀಡಲಿದ್ದಾರೆ. ಎಸ್‌ಪಿ ಡಾ. ಸಿರಿಗೌರಿ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.
‘ಅವರು ದೊಡ್ಡವರು, ಕ್ಷಮಿಸಿಬಿಟ್ಟರು..’ ರಾಹುಲ್​ ಗಾಂಧಿ ವಿಚಾರದಲ್ಲಿ ತಾನು ಮಾಡಿದ ದೊಡ್ಡ ತಪ್ಪನ್ನು ಬಿಚ್ಚಿಟ್ಟ ರಮ್ಯಾ!

ಹೆರಿಗೆಯಾದ ಅಕ್ಕನನ್ನು ನೋಡಲು ಹೋದ ತಂಗಿಯನ್ನೇ ರೇಪ್ ಮಾಡಿದ ಭಾವ!

11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
