ಬೆಂಗಳೂರು:ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಚಾರ್ಜ್​ಶೀಟ್ ಪ್ರತಿಯನ್ನು ಎನ್​ಐಎ ಅಧಿಕಾರಿಗಳು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದೀಗ ಸಲ್ಲಿಕೆಯಾಗಿರುವ ಚಾರ್ಜ್​ಶೀಟ್​ನಲ್ಲಿ ಆಘಾತಕಾರಿ ವಿಷಯವೊಂದನ್ನು ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ.
ಪಿಎಫ್​ಐ ತಂಡದಲ್ಲಿ ಹಿಂದು ಮುಖಂಡರ ಹತ್ಯೆ ನಡೆಸುವುದಕ್ಕೆಂದೇ ನಿರ್ದಿಷ್ಟ ತಂಡ ರಚನೆಯಾಗಿದೆ. ಈ ತಂಡಕ್ಕೆ ‘ಸರ್ವೀಸ್ ಟೀಂ’ ಎಂದು ಹೆಸರಿಡಲಾಗಿದ್ದು, ಪಿಎಫ್​ಐ ಮುಖಂಡರ ಸೂಚನೆ ಪ್ರಕಾರ ಕಾರ್ಯನಿರ್ವಹಿಸುತ್ತಿತ್ತು ಎಂಬ ವಿಚಾರವೊಂದನ್ನು ಉಲ್ಲೇಖಿಸಿದ್ದಾರೆ.
ಸೆಲೆಕ್ಷನ್ ಪ್ರೋಸೆಸ್ ಮೂಲಕ ಸರ್ವೀಸ್ ಟೀಂ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿತ್ತು. ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಫ್ರೀಡಂ ಕಮ್ಯುನಿಟಿ ಹಾಲ್​ನಲ್ಲಿ ಸದಸ್ಯರಿಗೆ ತರಬೇತಿ ನೀಡಲಾಗಿತ್ತು. 2016ರಲ್ಲಿ ರುದ್ರೇಶ್ ಹತ್ಯೆ ಬಳಿಕ ಸರ್ವೀಸ್ ಟೀಂ ಅಸ್ತಿತ್ವಕ್ಕೆ ತರಲು ಪಿ.ಎಫ್.ಐ ರಾಜ್ಯ ಸಮಿತಿ ನಿರ್ಧಾರ ಮಾಡಿತ್ತು. ಪಿಎಫ್​ಐ ರಾಜ್ಯ ಕಾರ್ಯಕಾರಿ ಸಮಿತಿ ಟಾರ್ಗೆಟ್ ಮಾಡಿ ಹಿಂದು ಕಾರ್ಯಕರ್ತರನ್ನು ಹತ್ಯೆ ಮಾಡಲು ನಿರ್ಧಾರ ಕೈಗೊಂಡಿತ್ತು ಎಂದು ಉಲ್ಲೇಖವಾಗಿದೆ.
‘ಸರ್ವೀಸ್ ಟೀಂ’ನ ಮುಂದಾಳತ್ವವನ್ನು ರಾಜ್ಯ ಕಾರ್ಯಕಾರಿ ಸಮಿತಿಯ ಓರ್ವ ಸದಸ್ಯ ವಹಿಸಿದ್ದ. ಪಿಎಫ್​ಐ ಮುಸ್ಲಿಂ ಯುವಕರಿಗೆ ವಿವಿಧ ರೀತಿಯ ಕಾರ್ಯಾಗಾರ ಕೈಗೊಂಡಿತ್ತು. ಈ ಕಾರ್ಯಾಗಾರದಲ್ಲಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿ ಮಸೀದಿ, ಮದರಸ, ಶಾಲೆಗಳಲ್ಲಿ ಇಡುವ ಬಗ್ಗೆ ಸೂಚನೆ ನೀಡಲಾಗಿತ್ತು. ರಹಸ್ಯ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಮಾಡಿ, ಸದಸ್ಯರ ನಡುವಿನ ಸಂವಹನ ಮಾಡಲಾಗುತ್ತಿತ್ತು.
ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಹತ್ಯೆಗಳನ್ನು ರೂಪಿಸಲಾಗುತ್ತಿತ್ತು. ಇದಕ್ಕಾಗಿ ಅಸ್ತಿತ್ವಕ್ಕೆ ಬಂದಿದ್ದ ಸರ್ವೀಸ್ ಟೀಂ ಸದಸ್ಯರ ನೇಮಕದ ವೇಳೆ ತೀವ್ರ ನಿಗಾ ವಹಿಸಿ, ದೈಹಿಕವಾಗಿ ಫಿಟ್ ಇದ್ದವರಿಗೆ ಮಾತ್ರ ಸದಸ್ಯರಾಗಲು ಅವಕಾಶ ಮಾಡಿಕೊಡಲಾಗುತ್ತಿತ್ತು. ಮುಸ್ತಫಾ ಪೈಚಾರ್ ಮತ್ತು ಮಸೂದ್ ಸೆಲೆಕ್ಷನ್ ಪ್ರೋಸೆಸ್ ಮೂಲಕ ಸರ್ವೀಸ್ ಟೀಂಗೆ ಸದಸ್ಯರನ್ನು ಆಯ್ಕೆ ಮಾಡುತ್ತಿದ್ದರು. ಇಲ್ಲಿಗೆ ಆಯ್ಕೆ ಆದ ಸದಸ್ಯರನ್ನು ಪಿಎಫ್ಐನ ಬೇರೆ ಘಟಕಗಳಿಂದ ಸಂಪೂರ್ಣವಾಗಿ ಹೊರಗಿಡಲಾಗುತ್ತಿತ್ತು ಎಂಬ ಅಂಶಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − five =
Remember me
