ಬೆಂಗಳೂರು:ಮಂಗಳೂರು ನಗರ ಪೊಲೀಸ್ ಆಯುಕ್ತ ಸೇರಿದಂತೆ 7 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರನ್ನು ಡಿಐಜಿ ರೈಲ್ವೆ ಹುದ್ದೆಗೆ ನಿಯೋಜಿಸಿದ ಸರ್ಕಾರ, ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಹಿರಿಯ ಎಸ್‌ಪಿ ಕುಲದೀಪ್ ಕುಮಾರ್ ಜೈನ್ ಅವರನ್ನು ನೇಮಿಸಿದೆ.
ಬೆಂಗಳೂರು ನಗರಕ್ಕೆ ಹೊಸದಾಗಿ ದಕ್ಷಿಣ (ಸಂಚಾರ) ವಿಭಾಗವನ್ನು ಸೃಜಿಸಿ ಮಹಮ್ಮದ್ ಸುಜೀತಾ ನೇಮಕ ಮಾಡಿದೆ. ಉಳಿದಂತೆ ದೆಕ್ಕಾ ಕಿಶೋರ್ ಬಾಬು- ಎಸ್‌ಪಿ ರಾಜ್ಯ ಗುಪ್ತದಳ, ಡಾ. ಕೋನಾ ವಂಶಿಕೃಷ್ಣ- ಎಸ್‌ಪಿ ವೈರ್‌ಲೆಸ್, ಮಹಮ್ಮದ್ ಸುಜೀತಾ – ಡಿಸಿಪಿ ದಕ್ಷಿಣ ವಿಭಾಗ ಸಂಚಾರ ಬೆಂಗಳೂರು, ಅರುಣಾಗ್ಷು ಗಿರಿ- ಡಿಸಿಪಿ ಸಿಎಆರ್ (ಕೇಂದ್ರ) ಬೆಂಗಳೂರು, ಯಶೋಧ ವಂಟಗೋಡಿ- ಎಸ್‌ಪಿ ಕೊಪ್ಪಳಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ:ಮೈಸೂರಿನಲ್ಲಿ ಕೋರ್ಟ್​ಗೆ ಹಾಜರಾದ ರಾಖಿ ಸಾವಂತ್; ಆದಿಲ್​ ಖಾನ್​​ನನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − six =
Remember me
