ಬೆಂಗಳೂರು:ರಾಜ್ಯ ಸರ್ಕಾರ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ವರ್ಗಾವಣೆ ನಿಯಮ ಪರಿಷ್ಕರಿಸಿದ್ದು, ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದವರನ್ನು ಅರ್ಹರೆಂದು ಪರಿಗಣಿಸಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ವರ್ಗಾವಣೆ ಪ್ರಕ್ರಿಯೆಯ ನಿಯಂತ್ರಣಾಧಿಕಾರಿಗಳನ್ನಾಗಿ ನೇಮಕ ಮಾಡಿ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ಪ್ರಾಂಶುಪಾಲರ ಕೋರಿಕೆ ಮೇರೆಗೆ ವರ್ಗಾವಣೆಗೆ (ಸಾಮಾನ್ಯ ವಿಭಾಗ) ಶೇ.10 ಮಿತಿ ನಿಗದಿಪಡಿಸಿದ್ದು, ಉಪನ್ಯಾಸಕರ ವರ್ಗಾವಣೆಗೂ ಇದೇ ಮಿತಿ ಅನ್ವಯಿಸಲಿದೆ. ಆದರೆ, ಆಯಾ ವಿಭಾಗದ ವಿಷಯ ಉಪನ್ಯಾಸಕರ ಸಂಖ್ಯಾಬಲವನ್ನು ಇದು ಆಧರಿಸಿದೆ. ಮರು ನಿಯೋಜನೆ, ಹೆಚ್ಚುವರಿ ವರ್ಗಾವಣೆ ಹಾಗೂ ಪರಸ್ಪರ ಒಪ್ಪಿಗೆ ಮೇರೆಗೆ ನಡೆಯುವ ವರ್ಗಾವಣೆಗಳನ್ನು ಈ ಮಿತಿಯಿಂದ ಹೊರಗಿಡಲಾಗಿದೆ. ವರ್ಗಾವಣೆಗಾಗಿ ಅರ್ಜಿ ಸಲ್ಲಿಕೆ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆನ್​ಲೈನ್ ಮೂಲಕವೇ ನಡೆಸಬೇಕೆಂದು ಸ್ಪಷ್ಟಪಡಿಸಲಾಗಿದೆ.
ಉಪನ್ಯಾಸಕರ ಮರು-ನಿಯೋಜನೆ: ಪ್ರತಿ ಎರಡು ವರ್ಷಗಳಿಗೊಮ್ಮೆ ಮಂಜೂರಾದ ಉಪನ್ಯಾಸಕರ ಸಂಖ್ಯಾಬಲವನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರಿಷ್ಕರಿಸಲಾಗುತ್ತದೆ. ಹೆಚ್ಚುವರಿ ಉಪನ್ಯಾಸಕರನ್ನು ಅಗತ್ಯವಿರುವ ಕಾಲೇಜುಗಳಿಗೆ ಮರು-ನಿಯೋಜಿಸಲಾಗುತ್ತದೆ. ನಂತರವಷ್ಟೇ ಕಾಲೇಜಿಗೆ ಅನುಗುಣವಾಗಿ ಮಂಜೂರಾದ ಹುದ್ದೆ ಲೆಕ್ಕ ಹಾಕಲಾಗುವುದು. ನಂತರ ಖಾಲಿ ಇರುವ ಉಪನ್ಯಾಸಕರ ಸಂಖ್ಯೆಯನ್ನು ಪ್ರಕಟಿಸಲಾಗುತ್ತದೆ.
ವರ್ಗಾವಣೆ ಅವಧಿ:ಏಪ್ರಿಲ್ ಅಥವಾ ಮೇನಲ್ಲಿ ವರ್ಗಾವಣೆ ಕೈಗೊಳ್ಳುವಂತೆ ತಿಳಿಸಲಾಗಿದೆ. ಆದರೆ, ಖಚಿತ ಅವಧಿ ನಿರ್ಧರಿಸುವ ಅಧಿಕಾರವನ್ನು ವರ್ಗಾವಣೆ ಪ್ರಕ್ರಿಯೆ ನಿಯಂತ್ರಣಾಧಿಕಾರಿಗಳಿಗೆ ನೀಡಲಾಗಿದೆ. ಅವರೇ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದಾರೆ.
ವಿಶೇಷ ಕೌನ್ಸೆಲಿಂಗ್:2018-19ರ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಗೆ ಗುರಿಯಾದ ಉಪನ್ಯಾಸಕರಿಗೆ ವಿಶೇಷ ಕೌನ್ಸೆಲಿಂಗ್ ನಡೆಸುವಂತೆ ಸೂಚಿಸಲಾಗಿದೆ. ಇವರಿಗೆ ಹಿರಿತನ ನೀಡತಕ್ಕದ್ದು ಹಾಗೂ ಸ್ಥಳ ಆಯ್ಕೆಯಲ್ಲೂ ಹಿರಿತನ ಪಾಲಿಸತಕ್ಕದ್ದು. ಆದರೆ, ಇದು ಅವಕಾಶಗಳ ಲಭ್ಯತೆ ಹಾಗೂ ಹಲವು ಷರತ್ತುಗಳಿಗೆ ಒಳಪಟ್ಟಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
