| ಕೀರ್ತಿನಾರಾಯಣ ಸಿ. ಬೆಂಗಳೂರು
ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್​ಟಿಒ) ಅಧಿಕಾರೇತರ ಕ್ಲರಿಕಲ್ (ಲಿಪಿಕ) ಸಿಬ್ಬಂದಿಗೆ ಟ್ರಾನ್ಸ್​ಫರ್ ಟಾರ್ಚರ್ ಮತ್ತೆ ಶುರುವಾಗಿದೆ. ಹಣ ಕೊಟ್ಟವರಿಗೆ ಆದಾಯವಿರುವ ಜಾಗ, ಕೊಡದಿದ್ದವರಿಗೆ ಯಾವುದೋ ದೂರದ ಊರಿಗೆ ಎತ್ತಂಗಡಿ ಮಾಡುವ ‘ಡೆಪ್ಯುಟೇಷನ್ ಅಸ್ತ್ರ’ ಪ್ರಯೋಗಿಸಲಾಗುತ್ತಿದ್ದು, ಹಣ ಹೊಂದಿಸಲಾಗದ ಬಡಪಾಯಿ ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕರ್ನಾಟಕ ನಾಗರಿಕ ಸೇವೆಗಳ (ಕೆಸಿಎಸ್​ಆರ್) ನಿಯಮ 8(15)(ಜಿ) ಪ್ರಕಾರ ವರ್ಗಾವಣೆಯಾಗಿರುವ ಮೂಲ ಕಚೇರಿಯಿಂದ 1 ತಿಂಗಳಿಗಿಂತ ಹೆಚ್ಚಿನ ಅವಧಿಗೆ ಸರ್ಕಾರಿ ನೌಕರರನ್ನು ಬೇರೆ ಕಚೇರಿಗೆ ನಿಯೋಜನೆ ಮಾಡುವಂತಿಲ್ಲ. ಆದರೆ, ಆರ್​ಟಿಒ ಕಚೇರಿಗಳಲ್ಲಿ ಸಾಮಾನ್ಯ ವರ್ಗಾವಣೆಗಿಂತ ಡೆಪ್ಯುಟೇಷನ್ (ನಿಯೋಜನೆ) ವ್ಯವಸ್ಥೆಯೇ ಜಾಸ್ತಿಯಾಗಿದೆ. ಇದಕ್ಕೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯೂ ಒಂದು ಕಾರಣ ಎಂದು ಹಿರಿಯ ಅಧಿಕಾರಿಗಳು ಸಮಜಾಯಿಷಿ ಕೊಡುತ್ತಿದ್ದಾರೆ.
ರಾಜ್ಯಾದ್ಯಂತ 66 ಆರ್​ಟಿಒ ಕಚೇರಿಗಳಿವೆ. ಪ್ರತಿಯೊಂದು ಹುದ್ದೆಗೂ ಇಂತಿಷ್ಟು ಹಣ ಎಂದು ‘ಸಿಂಡಿಕೇಟ್ ವ್ಯವಸ್ಥೆ’ ನಿಗದಿ ಪಡಿಸಿದೆ. ಮುಂಬಡ್ತಿ, ವರ್ಗಾವಣೆ, ಡೆಪ್ಯುಟೇಷನ್, ಹೆಚ್ಚುವರಿ ಹೊಣೆಗಾರಿಕೆ, ಇರುವ ಹುದ್ದೆಯಲ್ಲೇ ಮುಂದುವರಿಕೆ, ಒಂದಕ್ಕಿಂತ ಹೆಚ್ಚು ಹುದ್ದೆಗಳ ಜವಾಬ್ದಾರಿ ಪ್ರತಿಯೊಂದಕ್ಕೂ ಇಂತಿಷ್ಟು ರೇಟ್ ನಿಗದಿ ಪಡಿಸಲಾಗುತ್ತಿದೆ. ಅಧೀಕ್ಷಕರು, ಎಸ್​ಡಿಎ, ಎಫ್​ಡಿಎ ಸಿಬ್ಬಂದಿ ಕ್ಲರಿಕಲ್ ವಿಭಾಗಕ್ಕೆ ಬರುತ್ತಾರೆ. ಅಧೀಕ್ಷಕ ಹುದ್ದೆಯಲ್ಲಿರುವವರಿಗೆ ಈ ಮೊದಲು 3 ಲಕ್ಷ ರೂ. ನಿಗದಿ ಮಾಡಲಾಗಿತ್ತು. ಆದರೆ, ಈ ವರ್ಷ 4 ರಿಂದ 5 ಲಕ್ಷ ರೂ. ಫಿಕ್ಸ್ ಮಾಡಲಾಗಿದೆ. ಎಸ್​ಡಿಎ/ಎಫ್​ಡಿಎ ಸಿಬ್ಬಂದಿಗೆ ಈ ಮೊದಲು 1 ಲಕ್ಷ ರೂ. ಇತ್ತು. ಈ ವರ್ಷ 2 ಲಕ್ಷ ರೂ. ಕೇಳಲಾಗುತ್ತಿದೆ.
ಆರ್​ಟಿಒ ಕಚೇರಿಗಳಲ್ಲಿ ಶೇ.50ಕ್ಕಿಂತ ಹೆಚ್ಚು ಸಿಬ್ಬಂದಿ ಕೊರತೆ ಇದೆ. ಲಿಪಿಕ ಸಿಬ್ಬಂದಿ ಡೆಪ್ಯುಟೇಷನ್​ಗೆ ಇಂತಿಷ್ಟು ದರ ನಿಗದಿಪಡಿಸಲಾಗಿದೆ ಎಂಬ ಬಗ್ಗೆ ಯಾವುದಾದರೂ ಪ್ರಕರಣವಿದ್ದರೆ ನನ್ನ ಗಮನಕ್ಕೆ ತರಲಿ. ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ.
| ರಾಮಲಿಂಗಾರೆಡ್ಡಿ ಸಾರಿಗೆ ಸಚಿವ
ಕಷ್ಟಕ್ಕೆ ಸ್ಪಂದಿಸದ ಲಿಪಿಕ ಸಂಘಮೋಟಾರು ವಾಹನ ಇಲಾಖಾ ಸಂಘ (ಲಿಪಿಕ) ಅಸ್ತಿತ್ವದಲ್ಲಿದೆ. ಆದರೆ, ಲಿಪಿಕ ಸಿಬ್ಬಂದಿಯ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸಂಘ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಇಲಾಖೆಯ ಬಹುತೇಕ ಲಿಪಿಕ ಸಿಬ್ಬಂದಿಗೆ ಸಂಘದ ಬಗ್ಗೆ ಮಾಹಿತಿಯೇ ಗೊತ್ತಿಲ್ಲ. ಅವಿರೋಧವಾಗಿ ತಮಗೆ ತಾವೇ ಅಧ್ಯಕ್ಷರು, ಖಜಾಂಚಿ, ನಿರ್ದೇಶಕರು ಎಂದು ಘೋಷಿಸಿಕೊಂಡಿದ್ದಾರೆ. ಸಂಘದ ಸದಸ್ಯರಿಂದಲೇ ಲಿಪಿಕ ಸಿಬ್ಬಂದಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಎಲ್ಲ ಕಚೇರಿಗಳಿಗೂ ಕರೆಬೆಂಗಳೂರಿನ ಕಚೇರಿಯ ಸೂಪರಿಂಟೆಂಡೆಂಟ್ ಒಬ್ಬರು, ಲಿಪಿಕ ಸಿಬ್ಬಂದಿ ಡೆಪ್ಯುಟೇಷನ್ ದಂಧೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಜ್ಯದಲ್ಲಿರುವ ಎಲ್ಲ ಆರ್​ಟಿಒ ಕಚೇರಿಗಳಿಗೆ ಕರೆ ಮಾಡುವ ಸೂಪರಿಂಟೆಂಡೆಂಟ್, ಕಚೇರಿಯಲ್ಲಿ ಎಷ್ಟು ಲಿಪಿಕ ಸಿಬ್ಬಂದಿ ಇದ್ದಾರೆ? ಯಾರ್ಯಾರು ಯಾವ ಹುದ್ದೆಯಲ್ಲಿದ್ದಾರೆ? ಹಣ ಕೊಡುವವರೆಷ್ಟು? ಕೊಡದಿರುವವರೆಷ್ಟು? ಎಂಬ ಮಾಹಿತಿ ಸಂಗ್ರಹಿಸಿ ಅದರ ಪ್ರಕಾರ ಪಟ್ಟಿ ಸಿದ್ಧಪಡಿಸುತ್ತಾರೆ ಎಂದು ನೌಕರರು ತಿಳಿಸಿದ್ದಾರೆ.
ಶೀಘ್ರ ಇನ್ನೊಂದು ಪಟ್ಟಿ ರಿಲೀಸ್2023ರ ಡಿಸೆಂಬರ್​ನಲ್ಲಿ ಲಿಪಿಕ ಸಿಬ್ಬಂದಿ ಡೆಪ್ಯುಟೇಷನ್ ಪಟ್ಟಿ ಬಿಡುಗಡೆಯಾಯಿತು. ಇನ್ನೊಂದು ಪಟ್ಟಿ ರೆಡಿಯಾಗಿದ್ದು, ಎರಡು ಅಥವಾ ಮೂರು ದಿನದಲ್ಲಿ ಬಿಡುಗಡೆಯಾಗಲಿದೆ. ಹಣ ಕೊಡದವರನ್ನು ಆ ಪಟ್ಟಿಯಲ್ಲಿ ಎತ್ತಂಗಡಿ ಮಾಡಲಾಗುತ್ತದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ.
ಕಿರುಕುಳ ಹೇಗೆ?
* ನಿಗದಿ ಮಾಡಿರುವಷ್ಟು ದುಡ್ಡು ಕೊಡದವರನ್ನು ದೂರದ ಊರಿಗೆ ವರ್ಗ ಮಾಡುವುದು.
* ಮಕ್ಕಳು ಶಾಲೆಗೆ ಸೇರಿರುತ್ತಾರೆ, ವಯಸ್ಸಾದ ತಂದೆ-ತಾಯಿ ಇರುತ್ತಾರೆ. ಅವರನ್ನು ಬಿಟ್ಟು ಹೋಗಬೇಕು.
* ವರ್ಗಾವಣೆಯಾದ ಜಾಗಕ್ಕೆ ಹೋಗಿ ಒಂದೆರಡು ತಿಂಗಳು ಕೆಲಸ ಮಾಡಿ ಅಲ್ಲಿ ಹೊಂದಿಕೊಂಡರೆ ಮತ್ತೆ ಅಲ್ಲಿಂದ ಇನ್ನೊಂದೆಡೆಗೆ ವರ್ಗಾವಣೆ ಮಾಡುವುದು.
ವಸೂಲಿ ಇರಲಿಲ್ಲ!ಕ್ಲರಿಕಲ್ ಸಿಬ್ಬಂದಿ ವರ್ಗಾವಣೆಗೆ ಈ ಮೊದಲು ಹಣ ನಿಗದಿ ಇರಲಿಲ್ಲ. ಎರಡ್ಮೂರು ವರ್ಷದಿಂದೀಚೆಗೆ ಈ ವ್ಯವಸ್ಥೆ ಬಂದಿದೆ. ಕೆಲ ಸಿಬ್ಬಂದಿ 20 ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ಒಂದೇ ಕಚೇರಿಯಲ್ಲಿದ್ದಾರೆ. ಅವರು ಆರ್ಥಿಕವಾಗಿ ಪ್ರಭಾವಿಗಳಾಗಿದ್ದು, ವರ್ಗಾವಣೆಗೊಳಿಸಿದರೂ ಕಚೇರಿ ಬಿಟ್ಟು ಹೋಗಲ್ಲ. ಇದೇ ಕಾರಣಕ್ಕೆ ವರ್ಗಾವಣೆಗೆ ರೇಟ್ ಫಿಕ್ಸ್ ಮಾಡಲಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ.
ಸಾನಿಯಾ-ಶೋಯಿಬ್​ ಡಿವೋರ್ಸ್​ಗೆ ಅಸಲಿ ಕಾರಣ ಇಲ್ಲಿದೆ! ಮಲಿಕ್​ ವಿರುದ್ಧವೇ ತಿರುಗಿಬಿದ್ದ ಪಾಕ್​ ಮಾಧ್ಯಮಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
