ಬೆಂಗಳೂರು:ಗುಜರಿಗೆ ಸೇರುವ ಬಸ್​ಗಳ ಪುನರ್​ಬಳಕೆಗೆ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿರುವ, ಕೆಎಸ್ಸಾರ್ಟಿಸಿ ಇದೀಗ ಹಳೆ ಬಸ್ಸನ್ನು ಶಾಲೆ ತರಗತಿಯನ್ನಾಗಿ ಪರಿವರ್ತಿಸಲು ಕುಂದಾಪುರದ ಬಗ್ವಾಡಿ ಗ್ರಾಮಸ್ಥರಿಗೆ ನೆರವು ನೀಡುತ್ತಿದೆ.
ಕೆಎಸ್ಸಾರ್ಟಿಸಿಯಲ್ಲಿ 7 ಲಕ್ಷಕ್ಕಿಂತ ಹೆಚ್ಚಿನ ಕಿ.ಮೀ. ಬಸ್ ಸಂಚರಿಸಿದರೆ ಅದನ್ನು ಗುಜರಿಗೆ ಸೇರಿಸಲಾಗುತ್ತದೆ. ಅಂತಹ ನೂರಾರು ಬಸ್​ಗಳು ಕೆಎಸ್ಸಾರ್ಟಿಸಿ ಬಳಿಯಿದ್ದು, ಅವುಗಳನ್ನು ಗುಜರಿ ಹಾಕಲಾಗುತ್ತದೆ. ಆದರೆ, ಆ ಗುಜರಿ ಬಸ್​ಗಳನ್ನು ಮರುಬಳಕೆ ಮಾಡಲು ಕೆಎಸ್ಸಾರ್ಟಿಸಿ ಚಿಂತಿಸುತ್ತಿದೆ. ಅದರಂತೆ ಕಳೆದ ಕೆಲದಿನಗಳ ಹಿಂದೆ ಹಳೆಯ ಬಸ್ ಅನ್ನು ಶೌಚಗೃಹವನ್ನಾಗಿ ಪರಿವರ್ತಿಸಿ ಮೆಜೆಸ್ಟಿಕ್​ನಲ್ಲಿ ಇಡಲಾಗಿದೆ. ಅದರ ಜತೆಗೆ ಇದೀಗ ಶಾಲಾ ಕೊಠಡಿಯನ್ನಾಗಿ ಪರಿವರ್ತಿಸುವ ಬಗ್ಗೆಯೂ ಚಿಂತಿಸಿದೆ.
ಕಲಾವಿದನ ಮನವಿಗೆ ಒಪ್ಪಿದ ಎಂಡಿ:ಕುಂದಾಪುರದ ಬಗ್ವಾಡಿಯಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲವಾಗಿದ್ದು, ಹೊಸ ಕಟ್ಟಡ ನಿರ್ಮಾಣ ಮಾಡಬೇಕಿದೆ. ಅದಕ್ಕಾಗಿ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಲ್ಲಿ ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಕಲಾವಿದ ಮತ್ತು ಗ್ರಾಮದ ನಿವಾಸಿ ಪ್ರಶಾಂತ್ ಆಚಾರ್ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರಲ್ಲಿ ಕೋರಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಶಿವಯೋಗಿ ಸಿ.ಕಳಸದ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಅದರ ಜತೆಗೆ ಕೆಎಸ್ಸಾರ್ಟಿಸಿಯ ಬಸ್ ಅನ್ನು ಶಾಲಾ ಕೊಠಡಿಯನ್ನಾಗಿ ಪರಿವರ್ತಿಸಲು ಮುಂದಾಗಿ ಎಂದು ತಿಳಿಸಿದ್ದಾರೆ. ಅದಕ್ಕಾಗಿ ಕೆಎಸ್ಸಾರ್ಟಿಸಿಯಿಂದ ಹಳೆಯ ಬಸ್ ಅನ್ನು ನೀಡುವುದಾಗಿಯೂ ತಿಳಿಸಿದ್ದಾರೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅತಿಥಿಗಳಿಗೆ ಚೋಟಾ ಬಸ್:ಕಲಾವಿದ ಪ್ರಶಾಂತ್ ಆಚಾರ್, ಲಾಕ್​ಡೌನ್ ಅವಧಿಯಲ್ಲಿ ಕೆಎಸ್ಸಾರ್ಟಿಸಿಯ ಸಾಮಾನ್ಯ ಸಾರಿಗೆ ಮತ್ತು ಐರಾವತ ಬಸ್​ಗಳ ಮಾದರಿಯನ್ನು ಸಿದ್ಧಪಡಿಸಿದ್ದು, ಅದರ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅದು ಕೆಎಸ್ಸಾರ್ಟಿಸಿ ಎಂಡಿ ಶಿವಯೋಗಿ ಸಿ.ಕಳಸದ ಅವರ ಗಮನಕ್ಕೆ ಬಂದಿದ್ದು, ಸೋಮವಾರ ಪ್ರಶಾಂತ್ ಆಚಾರ್ ಅವರನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ಕರೆಸಿ, ಬಸ್ ಮಾದರಿಯನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಕೆಎಸ್ಸಾರ್ಟಿಸಿಗೆ ಬರುವ ಅತಿಥಿಗಳಿಗೆ ಈ ಚೋಟಾ ಬಸ್ ನೀಡಲು ಐರಾವತ ಬಸ್​ನ 10 ಮಾದರಿಯನ್ನು ಸಿದ್ಧಪಡಿಸಿ ನೀಡುವಂತೆ ಪ್ರಶಾಂತ್ ಆಚಾರ್ ಅವರಿಗೆ ಸೂಚಿಸಿದ್ದಾರೆ.
ಲಾಕ್​ಡೌನ್ ಅವಧಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಮಾದರಿ ಸಿದ್ಧಪಡಿಸಿ, ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಹಾಕಿದ್ದೆ. ಅದನ್ನು ನೋಡಿ ನಿಗಮದ ಎಂಡಿ ಅದೇ ಮಾದರಿಯ ಬಸ್​ಗಳನ್ನು ನೀಡಲು ತಿಳಿಸಿದ್ದಾರೆ.
| ಪ್ರಶಾಂತ್ ಆಚಾರ್ಕಲಾವಿದ
‘ರಾಜ್ಯದಲ್ಲಿ ಕಾಂಗ್ರೆಸ್​ಗೆ ಕೊನೇ ಬೆಣೆ ಹೊಡೆಯೋದು ಸಿದ್ದರಾಮಯ್ಯ’ ಎಂದ ಎಚ್​. ಡಿ.ಕುಮಾರಸ್ವಾಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + seventeen =
Remember me
