ಬಾಗಲಕೋಟೆ: ತೃತೀಯಲಿಂಗಿಗಳು ಎಂದೊಡನೆ ಸಾಮಾನ್ಯವಾಗಿ ಕಣ್ಮುಂದೆ ಬರುವುದು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವ ತೃತೀಯಲಿಂಗಿಗಳೇ. ಅವರನ್ನು ಸಮಾಜ ನಡೆಸಿಕೊಂಡಿರುವ ರೀತಿಯಿಂದಾಗಿ ಅವರ ಸ್ಥಿತಿ ಹಾಗೆ ಆಗಿದೆಯಾದರೂ, ಅವರಲ್ಲಿಯೂ ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಂಡವರಿಗೇನೂ ಕೊರತೆ ಇಲ್ಲ.
ಅಂಥದೇ ಒಂದು ತೃತೀಯಲಿಂಗಿಗಳ ಗುಂಪು ಬಾಗಲಕೋಟೆ ಜಿಲ್ಲೆಯಲ್ಲಿದೆ. ಜಿಲ್ಲೆಯ ನಾಗರಾಳ ಎಸ್‌ಪಿ ಗ್ರಾಮದಲ್ಲಿರುವ 10 ಜನ ತೃತೀಯ ಲಿಂಗಿಗಳು, ಮಂಗಳಾದೇವಿ ಹೆಸರಿನಲ್ಲಿ ಸ್ವಸಹಾಯ ಸಂಘ ರಚಿಸಿಕೊಂಡಿದ್ದಾರೆ. ಕುರಿ-ಮೇಕೆ ಸಾಕಾಣಿಕೆ ಆರಂಭಿಸಿದ್ದಾರೆ. ಅವರ ಬಳಿ ಇರುವ 15 ಕುರಿಗಳು ಈಗ ಅವರಿಗೆ ಸ್ವತಂತ್ರ ಜೀವನಕ್ಕೆ ದಾರಿ ಮಾಡಿಕೊಡುತ್ತಿವೆ.
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿ. ಭೂಬಾಲನ್ ಅವರ ಕಾಳಜಿಯಿಂದಾಗಿ ಈ ಮಂಗಳಮುಖಿಯರಿಗೆ ಬಡ್ಡಿ ರಹಿತ ಸಾಲ ಸಿಕ್ಕಿದೆ. ಎನ್.ಆರ್.ಎಲ್.ಎಂ. ಯೋಜನೆಯಡಿ ಒಂದೂವರೆ ಲಕ್ಷ ರೂ. ಸಾಲ ದೊರೆತಿದೆ. ನರೇಗಾ ಯೋಜನೆ ಅಡಿ ಮೇಕೆ ಸಾಕಾಣಿಕೆಗೆ ಉಚಿತ ಶೆಡ್ ನಿರ್ಮಿಸಿಕೊಂಡಿದ್ದಾರೆ.
ಸ್ವಂತ ಕುಟುಂಬದವರು ಮತ್ತು ಸಮಾಜದಿಂದ ನಿರ್ಲಕ್ಷೃ ಮತ್ತು ತಿರಸ್ಕಾರಕ್ಕೆ ಒಳಗಾಗಿ ನೋವು ಅನುಭವಿಸುತ್ತಿದ್ದ ತೃತೀಯಲಿಂಗಿಗಳ ಮೊಗದಲ್ಲಿ ಈಗ ಸಂತಸದ ಮಂದಹಾಸ ಮೂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
