ಬೆಂಗಳೂರು: ಲಾಕ್​ಡೌನ್​ಗೂ ಮುಂಚೆ ವಿವಿಧ ದೇಶಗಳಿಂದ ಭಾರತಕ್ಕೆ ಬಂದು ಇಲ್ಲಿಯೇ ಉಳಿಯುವಂತಾಗಿದ್ದವರನ್ನು ಇದೀಗ ವಿಶೇಷ ವಿಮಾನದ ಮೂಲಕ ತಂತಮ್ಮ ದೇಶಗಳಿಗೆ ಕಳುಹಿಸಲಾಗುತ್ತಿದೆ.
ಕರೊನಾ ಸೋಂಕು ಹರಡುವಿಕೆ ತಡೆಯುವ ಸಲುವಾಗಿ ಲಾಕ್​ಡೌನ್ ಘೋಷಿಸಿ, ಎಲ್ಲ ಬಗೆಯ ನಾಗರಿಕ ವಿಮಾನ ಹಾರಾಟ ರದ್ದು ಮಾಡಲಾಗಿದೆ. ಪರಿಣಾಮ ನೂರಾರು ವಿದೇಶಿಗರು ಭಾರತದಲ್ಲೇ ಉಳಿಯುವಂತಾಗಿದೆ. ಅಂಥವರನ್ನು ತಮ್ಮ ದೇಶಗಳಿಗೆ ವಾಪಸ್ ಕರೆಸಿಕೊಳ್ಳಲು ಮುಂದಾಗಿರುವ ಆಯಾ ದೇಶದ ರಾಯಭಾರ ಕಚೇರಿ ವಿಶೇಷ ವಿಮಾನಗಳನ್ನು ಆಯೋಜಿಸಿದೆ. ಕೇಂದ್ರ ಸರ್ಕಾರದ ಅನುಮತಿಯಂತೆ ಇಟಲಿಯ ರಾಯಭಾರ ಕಚೇರಿ ಮಂಗಳವಾರ ತನ್ನ ದೇಶದ 86 ಪ್ರಜೆಗಳು ಮತ್ತು ಇನ್ನಿತರ ಯೂರೋಪ್ ದೇಶಗಳ 80 ಪ್ರಜೆಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ರೋಮ್ ಗೆ ಕರೆದೊಯ್ಯಲಾಗಿದೆ. ಅವರಲ್ಲಿ ಗೋಕರ್ಣ ದಲ್ಲಿ ಸಿಲುಕಿದ್ದ ಇಟಲಿ ಪ್ರಜೆಗಳು ಸೇರಿದ್ದು, ಕೇರಳದಲ್ಲಿದ್ದವರೂ ಇದ್ದಾರೆ.
ಬ್ರಿಟನ್ ಪ್ರಜೆಗಳು ರವಾನೆ: ಇದೇ ಮಾದರಿಯಲ್ಲಿ ಇಂಗ್ಲೆಂಡ್ ತನ್ನ ಪ್ರಜೆಗಳನ್ನು ವಿಶೇಷ ವಿಮಾನದ ಮೂಲಕ ಕರೆದೊಯ್ದಿದೆ. ಸೋಮವಾರ 292 ಬ್ರಿಟನ್ ಪ್ರಜೆಗಳನ್ನು ಬ್ರಿಟೀಷ್ ಏರ್​ವೇಸ್ ವಿಮಾನದ ಮೂಲಕ ಕೊಂಡೊಯ್ಯಲಾಗಿದೆ. ಅದೇ ರೀತಿ ಉಳಿದವರನ್ನು ಕರೆದೊಯ್ಯಲು ಬುಧವಾರ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಅಹಮದಾಬಾದ್ ಮೂಲಕ ಲಂಡನ್​ಗೆ ವಿಶೇಷ ವಿಮಾನ ಸೇವೆ ನಿಗದಿ ಮಾಡಲಾಗಿತ್ತು.
ಎಲ್ಲ ರಾಜ್ಯಗಳ ಸಿಎಂ ಜತೆ ಏ.27ರಂದು ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಂವಾದ : ಲಾಕ್​ಡೌನ್ ಬಗ್ಗೆ ಚರ್ಚೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eleven =
Remember me
