ಕೋಲಾರ/ಬಾಗಲಕೋಟೆ:ನಷ್ಟದ ಕಾರಣಕ್ಕೆ ಸಂಬಳ ಕೊಡಲೂ ಹಣವಿಲ್ಲ ಎಂದು ಹೇಳಿದ್ದ ಸಾರಿಗೆ ಸಂಸ್ಥೆ ಇದೀಗ ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಕೆಲವರಿಗಷ್ಟೇ ವೇತನ ನೀಡಿದೆ. ಈ ನಡುವೆ ಹಬ್ಬ ಆಚರಿಸಲು ಹಣವಿಲ್ಲ ಎಂದು ಹೇಳಿ ಸಾರಿಗೆ ಸಂಸ್ಥೆ ನೌಕರರು ಭಿಕ್ಷಾಟನೆ ಮಾಡಿದ್ದೂ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಬಸ್ ನಿಲ್ದಾಣ ಬಳಿ ಸಾರಿಗೆ ಸಂಸ್ಥೆ ನೌಕರ ಪ್ರೇಮ್​ಕುಮಾರ್​ ಹಬ್ಬದ ದಿನವಾದ ಯುಗಾದಿಯಂದೇ ಭಿಕ್ಷೆ ಬೇಡಿದ್ದಾರೆ. ಸಂಸ್ಥೆ ಸಂಬಳ ನೀಡದ ಕಾರಣ ಹಬ್ಬ ಆಚರಣೆ ಮಾಡಲೂ ಹಣವಿಲ್ಲ. ಅದರಲ್ಲೂ ಬಸ್​ ನಿಲ್ದಾಣದಲ್ಲಿ ಇವರೊಬ್ಬರೇ ಭಿಕ್ಷೆ ಬೇಡಿಲ್ಲ. ಭಿಕ್ಷಾಟನೆಗೆ ತನ್ನಿಬ್ಬರೂ ಮಕ್ಕಳನ್ನು ಕರೆದುಕೊಂಡು ಬಂದಿದ್ದರಿಂದ ಸಾರ್ವಜನಿಕರು ಅನುಕಂಪ ವ್ಯಕ್ತಪಡಿಸಿದರು.
ಇದನ್ನೂ ಓದಿ:ರುಂಡ-ಮುಂಡ ಬೇರೆ ಮಾಡಿ ಸೇಡು ತೀರಿಸಿಕೊಂಡರು; ಚಿಕ್ಕಪ್ಪನ ಮೇಲಿನ ದ್ವೇಷಕ್ಕೆ ಮಗನ ಕೊಲೆ
ಮತ್ತೊಂದೆಡೆ ಬಾಗಲಕೋಟೆಯಲ್ಲಿ ಚಾಲಕಿ-ಕಂ-ಕಂಡಕ್ಟರ್​ರೊಬ್ಬರು ಮನೆಮನೆಗೂ ತೆರಳಿ ಭಿಕ್ಷಾಟನೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದಲ್ಲಿ ರಾಜೇಶ್ವರಿ ಬಂಗಾರಿ ಎಂಬ ಈ ಉದ್ಯೋಗಿ ತಟ್ಟೆ ಹಿಡಿದು ಬೇಡಿದ್ದು, ಜನರು ಐದು, ಹತ್ತು, ಇಪ್ಪತ್ತು ರೂಪಾಯಿ ಭಿಕ್ಷೆ ನೀಡಿದ್ದಾರೆ. ಬಿರು ಬಿಸಿಲಿನಲ್ಲಿ ಒಂಟಿಯಾಗಿ ತಿರುಗಾಡಿದ ಇವರು, ‘ಅಮ್ಮಾ.. ತಾಯಿ.. ನಮಗೆ ಸಂಬಳ ಕೊಟ್ಟಿಲ್ಲ.. ಉಣ್ಣಲೂ ಏನೂ ಇಲ್ಲ..’ ಎಂದು ಬೇಡಿದ್ದಾರೆ.

ನೀನ್​ ಚೆನ್ನಾಗಿರು ದೇವ್ರು.. ನಿನ್​ ಹೆಂಡ್ತಿ-ಮಕ್ಳು ಚೆನ್ನಾಗಿರ್ಲಿ; ಮುಷ್ಕರನಿರತ ಸಾರಿಗೆ ನೌಕರರಿಂದ ಗಾಂಧಿಗಿರಿ

ಬಸ್​ ಚಕ್ರದಡಿ ಮಲಗಿ ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನ: ಠಾಣೆಯಲ್ಲಿ ಕಬ್ಬಿಣದ ಸರಳಿಗೆ ತಲೆ ಚಚ್ಚಿಕೊಂಡ ನೌಕರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 12 =
Remember me
