ಬೆಂಗಳೂರು:ಮುಷ್ಕರ ಕೈಬಿಟ್ಟು ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳದಿದ್ದರೆ ಏನು ಮಾಡಬೇಕೆಂಬುದು ಸರ್ಕಾರಕ್ಕೆ ಗೊತ್ತಿದೆ ಎನ್ನುವ ಮೂಲಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಸ್ಮಾ ಜಾರಿಯ ಸುಳಿವು ನೀಡಿದರು. ಸಿಎಂ ನಿವಾಸ ‘ಕಾವೇರಿ’ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತುಕತೆ ಯಲ್ಲಿ ತೀರ್ವನಗಳಿಗೆ ಒಪ್ಪಿಕೊಂಡ ಮುಖಂಡರು ತಿರುಗಿ ಬಿದ್ದಿರುವುದು ಸರಿಯಲ್ಲ.ಈ ಕ್ಷಣಕ್ಕೂ ನೌಕರರ ಪರವಾಗಿ ಸರ್ಕಾರವಿದೆ ಎಂದರು.
ನೌಕರರ ಮಂಡಿಸಿದ ಬೇಡಿಕೆಗಳ ಬಗ್ಗೆ ಸಹಾನುಭೂತಿಯಿದೆ. ಇದೇ ಕಾರಣಕ್ಕೆ ಸುದೀರ್ಘವಾಗಿ ಚರ್ಚೆ ನಡೆಸಿ, ಬಹುತೇಕ ಬೇಡಿಕೆಗಳನ್ನು ಈಡೇರಿಸಲಾಗಿದೆ. ಸಂಧಾನ ಸಭೆಯಲ್ಲಿ ಪಾಲ್ಗೊಂಡ ಸಾರಿಗೆ ನೌಕರರು ಸಹಮತ ವ್ಯಕ್ತಪಡಿಸಿದ್ದರು. ನಂತರ ಉಲ್ಟಾ ಹೊಡೆದು ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದಾರೆ. ಒಕ್ಕೂಟದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ಬ್ಲ್ಯಾಕ್​ಮೇಲ್ ತಂತ್ರ, ಬೆದರಿಕೆಗಳಿಗೆ ಸರ್ಕಾರ ಬಗುವುದಿಲ್ಲ ಎಂದು ಬೊಮ್ಮಾಯಿ ಖಡಕ್ ಆಗಿ ಹೇಳಿದರು.
ಸರ್ಕಾರಕ್ಕೆ ಸೆಡ್ಡು ಹೊಡೆದ ಸಾರಿಗೆ ಸಿಬ್ಬಂದಿ: ಮತ್ತೆ ಬಸ್​ ಬಂದ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
