|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಚುನಾವಣೆ ಎದುರಿಗಿರುವಾಗಲೇ ಸರ್ಕಾರಕ್ಕೆ ಸಾರಿಗೆ ಬಿಕ್ಕಟ್ಟು ಎದುರಾಗಿದ್ದು, ಒಂದು ವರ್ಗದ ಬೇಡಿಕೆ ಈಡೇರಿಸಿದರೆ ಇನ್ನೊಂದು ದೊಡ್ಡ ವರ್ಗಕ್ಕೆ ಬರೆ ಹಾಕಿದಂತಾಗಿ ಪರಿಣಾಮ ಎದುರಿಸಬೇಕಾಗುವ ಆತಂಕ ಎದುರಾಗಿದೆ. ವೇತನ ಪರಿಷ್ಕರಿಸಬೇಕೆಂದು ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ಸಿಬ್ಬಂದಿ ಬೇಡಿಕೆ ಮಂಡಿಸುತ್ತಲೇ ಬಂದಿದ್ದು, ಕಳೆದ ವಾರ ವಿಭಾಗ ಕಚೇರಿ ಮುಂದೆ ಹೋರಾಟ ನಡೆಸಿದರು. ಸರ್ಕಾರ ಈ ಒತ್ತಾಯಕ್ಕೆ ಬಗ್ಗದ ಕಾರಣ ಮತ್ತೊಂದು ದೊಡ್ಡ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಫೆ.6ರಿಂದ ಉಪವಾಸ ಸತ್ಯಾಗ್ರಹ ನಡೆಸುವುದು. ಆನಂತರ ಹಿಂದೆ ನಡೆದಂತೆ ಪೂರ್ಣ ಪ್ರಮಾಣದಲ್ಲಿ ಮುಷ್ಕರಕ್ಕೆ ಕರೆಕೊಡಲು ನಿರ್ಧರಿಸಿದ್ದಾರೆ.
ಈ ಹೊತ್ತಿನಲ್ಲಿ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿದ್ದು, ಒಂದು ವೇಳೆ ನೌಕರರ ಬೇಡಿಕೆ ಈಡೇರಿಸಬೇಕೆಂದಾದರೆ ಪ್ರಯಾಣ ದರ ಹೆಚ್ಚಿಸಲೇ ಬೇಕಾದ ಅನಿವಾರ್ಯತೆ ಇದೆ. ಇತ್ತ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಇಷ್ಟರಲ್ಲೇ ಎದುರಾಗಬಹುದು. ಒಂದೊಮ್ಮೆ ಜಾರಿಯಾದರೆ ಸದ್ಯಕ್ಕೆ ವೇತನ ಪರಿಷ್ಕರಣೆ ಆಗುವುದೇ ಇಲ್ಲ ಎಂಬುದು ನೌಕರರ ಅಳುಕಾಗಿದೆ. ಹಾಗೆಯೇ, ಒಂದು ವೇಳೆ ಪ್ರಯಾಣ ದರ ಹೆಚ್ಚಿಸಿದರೆ ಚುನಾವಣೆ ಹೊತ್ತಿನಲ್ಲಿ ನಕಾರಾತ್ಮಕ ಸಂದೇಶ ಹೋಗುತ್ತದೆ ಎಂಬುದು ಸರ್ಕಾರದ ಆತಂಕ. ಇದೇ ವೇಳೆ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ಕಾರಿ ನೌಕರರ ಸರಿಸಮಾನ ವೇತನ ಕೊಡಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವರು ಸ್ಪಷ್ಟವಾಗಿ ಹೇಳಿರುವುದು ನೌಕರರನ್ನು ಇನ್ನಷ್ಟು ಕೆರಳಿಸಿದೆ.
ಬೇಡಿಕೆಗೆ 3 ವರ್ಷ:ರಾಜ್ಯ ರಸ್ತೆ ಸಾರಿಗೆ ನೌಕರರ ವೇತನವನ್ನು ಪ್ರತಿ 4 ವರ್ಷಗಳಿಗೊಮ್ಮೆ ಪರಿಷ್ಕರಿಸುವ ಪದ್ಧತಿ ಜಾರಿಯಲ್ಲಿದೆ. 2020 ಜನವರಿಯಿಂದ ವೇತನ ಪರಿಷ್ಕರಣೆ ಆಗಬೇಕಾಗಿತ್ತು. ಸಾರಿಗೆ ಸಂಸ್ಥೆಗಳ ಪ್ರಮುಖ ಕಾರ್ವಿುಕ ಸಂಘಟನೆಗಳು ತಮ್ಮ ಬೇಡಿಕೆಗಳ ಪಟ್ಟಿಯನ್ನು 2019ರ ಡಿಸೆಂಬರ್ ಅಂತ್ಯದಲ್ಲಿ ನೀಡಿದ್ದು, ತತ್ಸಂಬಂಧ ಪ್ರಾಥಮಿಕ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಷ್ಟರಲ್ಲಿ ನೌಕರರ ಹೋರಾಟ ಹಾಗೂ ಕೋವಿಡ್​ನಿಂದ ನಿಗಮಗಳು ಆರ್ಥಿಕ ಸಂಕಷ್ಟ ಅನುಭವಿಸಿದವು. ವೇತನ ಕೊಡಲು ಸಾಧ್ಯವಾಗದ ಪರಿಸ್ಥಿತಿ ನಿರ್ವಣವಾದಾಗ ಸರ್ಕಾರ ತನ್ನ ಬೊಕ್ಕಸದಿಂದ ನೀಡಿತು. 4 ಸಾರಿಗೆ ನಿಗಮಗಳ ವ್ಯವಸ್ಥಾಪಕರ ನಿರ್ದೇಶಕರನ್ನೊಳಗೊಂಡ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಇನ್ನೂ ವರದಿ ಪರಿಶೀಲಿಸುವ ಹಂತದಲ್ಲೇ ಇದೆ.
ಸರ್ಕಾರದ ವಾದ:ನಾಲ್ಕೂ ಸಾರಿಗೆ ಸಂಸ್ಥೆಗಳನ್ನು ರಸ್ತೆ ಸಾರಿಗೆ ಸಂಸ್ಥೆಗಳ ಕಾಯ್ದೆ 1950ರ ಕಲಂ 3ರಡಿ ಸಾರಿಗೆ ಇಲಾಖೆ ಅಧೀನ ನಿಗಮವನ್ನಾಗಿ ಸ್ಥಾಪಿಸಲಾಗಿದೆ. ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸರ್ಕಾರದ ನೌಕರರು ಎಂದು ಪರಿಗಣಿಸಿಲ್ಲ ಎಂದು ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ. ಜತೆಗೆ ವೇತನ ಪರಿಷ್ಕರಣೆ ಬಗ್ಗೆ ಚರ್ಚೆಯಾಗಿದೆ. ಅಂತಿಮ ತೀರ್ಮಾನ ಮುಖ್ಯಮಂತ್ರಿ ವಿವೇಚನೆಗೆ ಬಿಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸಾರಿಗೆ ನಿಗಮಗಳ ನೌಕರರು ರಾಜ್ಯ ಸರ್ಕಾರದ ಮಾದರಿಯಲ್ಲೇ ತುಟ್ಟಿಭತ್ಯೆ, ಮನೆ ಬಾಡಿಗೆಭತ್ಯೆ, ನಗರ ಪರಿಹಾರ ಭತ್ಯೆ, ರಜಾ ಸೌಲಭ್ಯಗಳು, ವೈದ್ಯಕೀಯ ಮರು ಪಾವತಿ ಸೌಲಭ್ಯ ಇತ್ಯಾದಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಆರ್ಥಿಕ ಪರಿಣಾಮ:ನಾಲ್ಕೂ ನಿಗಮಗಳ ನೌಕರರಿಗೆ ಮಾಸಿಕ ವೇತನಕ್ಕೆ 290 ಕೋಟಿ ರೂ. ಬೇಕಾಗಬಹುದು. ಶೇ.25 ಅನ್ನಾದರೂ ವೇತನ ಹೆಚ್ಚಿಸಿ ಎಂಬುದು 1.07 ಲಕ್ಷ ನೌಕರರ ಪ್ರಮುಖ ಬೇಡಿಕೆಯಾಗಿದೆ. ಅಲ್ಲದೆ, 2020ರ ಜನವರಿಯಿಂದ ಅನ್ವಯ ಆಗುವಂತೆ ವೇತನ ಹೆಚ್ಚಿಸಿದರೆ ಅಂದಾಜು 6 ಸಾವಿರ ಕೋಟಿ ರೂ. ಹೊರೆ ಬೀಳಲಿದೆ. ಈ ಹೊರೆ ಭರಿಸುವಷ್ಟು ನಿಗಮಗಳು ಸಬಲವಾಗಿಲ್ಲ.
ಗೆಳೆಯನ ಕೊಂದು ಶವ ಎಸೆಯುವಾಗ ತಾನೂ ಪ್ರಪಾತಕ್ಕೆ ಬಿದ್ದು ಹೆಣವಾದ!

ದೇವಸ್ಥಾನಕ್ಕೆ ಹೊರಟಿದ್ದವರ ವಾಹನ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ಮೂವರ ಪರಿಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
