ಬೆಂಗಳೂರು:ರಾಜ್ಯದ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದಿಗೆ ಅಂತ್ಯವಾಗುವ ಲಕ್ಷಣ ಕಾಣಿಸಲಾರಂಭಿಸಿದೆ. ಇಂದು ಎರಡನೇ ಸುತ್ತಿನ ಮಾತುಕತೆ ನಡೆಸಿರುವ ಸಾರಿಗೆ ಸಚಿವ ಲಕ್ಷ್ಮಣ್​​ ಸವದಿ ಅವರು ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಸರ್ಕಾರಿ ನೌಕರರಾಗಬೇಕೆಂದು ಮುಷ್ಕರಕ್ಕೆ ಹೋದವರಿಗೆ ಬಿಎಂಟಿಸಿಯಿಂದ ಬಿಗ್​ ಶಾಕ್​!
ಸಾರಿಗೆ ನೌಕರರು ಹತ್ತು ಬೇಡಿಕೆ ಇಟ್ಟಿದ್ದರು. ಅವನ್ನೆಲ್ಲ ಈಡೇರಿಸುವ ಭರವಸೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಒಂದು ಹೆಜ್ಜೆ ನಾವು ಮುಂದೆ ಹೋಗಿದ್ದೇವೆ. ಅವರು ಒಂದು ಹೆಜ್ಜೆ ಹಿಂದೆ ಸರಿದಿದ್ದಾರೆ. ಅರ್ಧಗಂಟೆಯಲ್ಲಿ ಎಲ್ಲ ಸಮಸ್ಯೆ ಬಗ್ಗೆ ಚರ್ಚೆ ಆಗಿದೆ. ವಿಧಾನ ಸೌಧದಲ್ಲಿ ಇದನ್ನ ಇವತ್ತು ಮುಗಿಸುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ:ರಾಘಣ್ಣ ‘ರಾಜತಂತ್ರ’ ಬಿಡುಗಡೆಗೆ ಸಿದ್ಧ; ಸೆನ್ಸಾರ್​ನಿಂದಲೂ ಸಿಕ್ತು ಪ್ರಮಾಣ ಪತ್ರ
ಪ್ರತಿಭಟನೆ ಮಾಡುವವರ ಮತ್ತು ಜನರ ನಡುವೆ ನಾವು ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಿದ್ದೇವೆ. ಕೋವಿಡ್ ಸಮಯದಲ್ಲೂ ಸಂಬಳ ನೀಡಿದ್ದೇವೆ. ನೌಕರರ ಜತೆ ಸಂಪರ್ಕದಲ್ಲಿ ಇದ್ದುಕೊಂಡು ಮಾತುಕತೆ ನಡೆಸುತ್ತೇವೆ. ಅರ್ಧಗಂಟೆಯಲ್ಲಿ ಅಂತಿಮ ಸುತ್ತಿನ ಮಾತುಕತೆ ನಡೆಸುತ್ತೇವೆ. ಅರ್ಧಗಂಟೆ ಬಳಿಕ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಸವದಿ ಅವರು ಹೇಳಿದ್ದಾರೆ.
ಎಲ್ಲೂ ಕಾಣದ ಸವದಿ, ಬಿಎಸ್​ವೈ ಅಸಮಾಧಾನ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen + 5 =
Remember me
