ಬೆಂಗಳೂರು:ಅನಂತ್ ಸುಬ್ಬರಾವ್ ನೇತೃತ್ವದ ಸಂಘಟನೆ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದೆ.21 ಮಾರ್ಚ್​ನಿಂದ ಅನಿರ್ಧಿಷ್ಟಅವಧಿ ಮುಷ್ಕರ ಶುರುವಾಗಲಿದ್ದು ಅನಂತ್ ಸುಬ್ಬರಾವ್ ಮುಖ್ಯಮಂತ್ರಿಗೂ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಬಹುದಿನಗಳ ಬೇಡಿಕೆಗೆ ಮಣಿದಿರುವ ಸಾರಿಗೆ ಇಲಾಖೆ, ವೇತನ ಪರಿಷ್ಕರಣೆ ಮಾಡಿದೆ. ಈ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶೇಕಡಾ 15ರಷ್ಟು ವೇತನ ಹೆಚ್ಚಳ ಮಾಡುವಕ್ಕೆ ತೀರ್ಮಾನಿಸಿರುವುದಾಗಿ ಹೇಳಿದ್ದರು.
ಇದನ್ನೂ ಓದಿ:ಮಾರ್ಚ್ 21 ರಿಂದ ಸಾರಿಗೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ..!
ಇದಕ್ಕೆ ಸಂಬಂಧಿಸಿದಂತೆ ಎಐಯುಟಿಸಿ ಅಧ್ಯಕ್ಷ ಅನಂತ ಸುಬ್ಬರಾವ್ ಸುದ್ದಿಗೋಷ್ಟಿ ನಡೆಸಿದ್ದು ‘ಬೆಳಗ್ಗೆ ಮುಖ್ಯಂಮತ್ರಿಗಳು 20% ಕೆಪಿಟಿಸಿಎಲ್ ಗೆ ಕೊಟ್ಟಿದ್ದಾರೆ ಕೆಎಸ್‌ಆರ್‌ಟಿಸಿಗೆ 15% ಕೊಟ್ಟಿದ್ದಾರೆ. ನಾವು ಹೆಚ್ಚು ಕೇಳಿದ್ದೇವೆ. ನೂರಾರು ಜನರು ಸ್ಟ್ರೈಕ್‌ನಲ್ಲಿದ್ದಾರೆ ಅಂತ ಎಫ್‌ಐಆರ್ ಆಗಿದೆ. ಅವರನ್ನು ಕೆಲಸದಿಂದ ತೆಗೆಯಬಾರದು ಎಂದು ಬೇಡಿಕೆ ಇತ್ತು. ಆದ್ರೆ ಬೆಳಗ್ಗೆ 15% ಅಂತ ಬಂದಿರೋದು ನಿಜಕ್ಕೂ ಶಾಕಿಂಗ್.
ಇದನ್ನೂ ಓದಿ:ನೌಕರರ ಮುಷ್ಕರ: ನಾಳೆಯಿಂದ ಕೆಪಿಟಿಸಿಎಲ್​, ಎಸ್ಕಾಂ, ಬೆಸ್ಕಾಂ ಎಲ್ಲವೂ ಬಂದ್!
ನಾಳೆ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. 2016 ರಲ್ಲೂ ಕೂಡಾ ಒಪ್ಪಂದ ಆಗಿ ನಂತರ ನೋಟಿಫಿಕೇಷನ್ ಬಂತು. ಈಗ ಚರ್ಚೆ ಆಗಿರಬೇಕಾದಾಗಲೇ ಈ ರೀತಿ ಮಾಡಿರೋದು ಸರಿಯಲ್ಲ. ಮುಖ್ಯಮಂತ್ರಿಗಳೇ ನಮಗೆ ಅಪಾಯಿಂಟ್‌ಮೆಂಟ್ ಕೊಡಿ. ಸರ್ಕಾರದ ಮಟ್ಟದಲ್ಲಿ ಏನಿದೆ ಅಂತ ಹೇಳಬಹುದು. ನಮ್ಮ ತೀರ್ಮಾನ ಯಥಾಸ್ಥಿತಿ ಇದೆ. ಮಾತುಕತೆ ಮುಂದುವರೆಯದೆ ಇದ್ದರೆ 21 ಕ್ಕೆ ಸ್ಟ್ರೈಕ್ ಮಾಡುತ್ತೇವೆ’ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 4 =
Remember me
