ಬೆಂಗಳೂರು:ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕೆಂಬ ಬೇಡಿಕೆಯೊಂದಿಗೆ ಸಾರಿಗೆ ನೌಕರರ ಸಂಘಟನೆ ಇಂದು ಮುಷ್ಕರಕ್ಕೆ ಕರೆ ನೀಡಿರುವ ಕಾರಣ ರಾಜ್ಯದ ಬಹುತೇಕ ಕಡೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಂಚಾರದಲ್ಲಿ ವ್ಯತ್ಯಾಸ ಉಂಟಾಗಿದೆ. ಕೆಲವು ಕಡೆ ನೌಕರರು ಸಂಘದ ಕರೆಗೆ ಸೊಪ್ಪುಹಾಕದೆ ಕೆಲಸ ಮುಂದುವರಿಸಿದ್ದೂ ನಡೆದಿದೆ. ಖಾಸಗಿ ಬಸ್ ಸಂಚಾರ ಇರುವಲ್ಲಿ ಜನರಿಗೆ ಅಷ್ಟೇನೂ ತೊಂದರೆ ಆಗಿಲ್ಲ.
ರಾಜ್ಯ ರಾಜಧಾನಿಯಲ್ಲಿಬೆಂಗಳೂರಿನ ಸಂಚಾರ ವ್ಯವಸ್ಥೆಯ ಕೇಂದ್ರ ಬಿಂದು ಮೆಜೆಸ್ಟಿಕ್ ಬಸ್​ನಿಲ್ದಾಣದಲ್ಲಿ ಬೆಳಗ್ಗೆ 6ಕ್ಕೆ ಎಂದಿನಂತೆ ಬಸ್ ಸಂಚಾರ ಆರಂಭವಾದಂತೆ ಗೋಚರಿಸಿತಾದರೂ, ಬಸ್​ಗಳ ಸಂಖ್ಯೆ ಕಡಿಮೆ ಇತ್ತು. ಬಿಎಂಟಿಸಿ ಬಸ್​ಗಳ ಸಂಚಾರ ಬಹಳ ವಿರಳವಾಗಿದೆ. ನಿತ್ಯವೂ 4,700 ಬಸ್ ಸಂಚರಿಸುತ್ತಿದ್ದಲ್ಲಿ ಈಗ ಕೆಲವೇ ಕೆಲವು ಬಸ್​ಗಳಷ್ಟೇ ಓಡಾಟ ನಡೆಸಿವೆ.
ಶಾಂತಿನಗರ ಬಸ್ ನಿಲ್ದಾಣದಲ್ಲೂ ಬಸ್ ಸಂಚಾರ ಕಡಿಮೆ ಇತ್ತು. ಶಾಂತಿನಗರ ನಿಲ್ದಾಣದಲ್ಲಿ ಮುನ್ನೆಚ್ಚರಿಕೆಗಾಗಿ ಪೋಲಿಸ್ ಭದ್ರತೆ ಒದಗಿಸಲಾಗಿದೆ. ಇದೇ ವೇಳೆ, ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ ಯಾವುದೇ ಬಸ್​ಗಳು ಹೊರಟಿಲ್ಲ. ಮುಂಜಾನೆ 4 ಗಂಟೆಗೆ ಆರಂಭವಾಗಬೇಕಾಗಿದ್ದ ಬಸ್ ಸಂಚಾರ ಇನ್ನೂ ಶುರುವಾಗಿಲ್ಲ. ಬಿಡದಿ, ಕೆಂಗೇರಿ ಕಡೆಗೆ ಕೆಲಸಕ್ಕೆ ಹೊರಟವರೆಲ್ಲರೂ ಬಸ್​ ಇಲ್ಲದೆ ಕಂಗಾಲಾಗಿ ಕುಳಿತಿದ್ದಾರೆ. ಬನಶಂಕರಿ ಬಸ್​ನಿಲ್ದಾಣದ್ದೂ ಇದೇ ಕಥೆ. ದಿನಗೂಲಿ ನೌಕರರು ಬಸ್​ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ.  ಇದೇ ವೇಳೆ, ಆಟೋ ರಿಕ್ಷಾದವರು ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿರುವುದಲ್ಲದೆ, ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ದೃಶ್ಯವೂ ಮೈಸೂರು ರಸ್ತೆ ಸ್ಯಾಟಲೈಟ್​ ಬಸ್​ನಿಲ್ದಾಣದ ಸಮೀಪ ಕಂಡು ಬಂತು. ಜನಸಾಮಾನ್ಯರು ಹಿಡಿಶಾಪ ಹಾಕುತ್ತಿದ್ದುದೂ ಗಮನಸೆಳೆಯುವಂತ್ತಿತ್ತು.
ಬಳ್ಳಾರಿಯಲ್ಲಿ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ
ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದೆ. ಬಸ್ ಗಳ ಸಂಚಾರ ಸ್ಥಗಿತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಾರಿಗೆ ಸಂಸ್ಥೆ ಕಾರ್ಮಿಕ ಸಂಘಟನೆ ಮುಖಂಡ ಆದಿಮೂರ್ತಿ, ಈಗ ನಡೆಯುತ್ತಿರುವ ಮುಷ್ಕರಕ್ಕೆ ಯಾರದೇ ನಾಯಕತ್ವ ಇಲ್ಲ. ನಾವು ಕಾರ್ಮಿಕರ ವಿರೋಧಿಗಳಲ್ಲ. ಆದರೆ, ದಿಢೀರನೆ ಬಸ್ ಗಳ ಸಂಚಾರ ಸ್ಥಗಿತಗೊಳಿಸಿ ಜನರಿಗೆ ತೊಂದರೆ ಉಂಟು ಮಾಡುವುದು ಸರಿಯಲ್ಲ. ಮುಷ್ಕರಕ್ಕೆ ಸಂಬಂಧಿಸಿದಂತೆ 21 ದಿನಗಳ ಮುಂಚೆ ನೋಟಿಸ್ ನೀಡಬೇಕಾಗುತ್ತದೆ. ಮುಷ್ಕರ ಕಾನೂನುಬದ್ಧವಾಗಿರಬೇಕೆಂದು ಹೇಳಿದರು.
ರಾಯಚೂರು ನೌಕರರ ಮನವೊಲಿಕೆ ಪ್ರಯತ್ನ

ಸಾರಿಗೆ ನೌಕರರ ಮುಷ್ಕರ ಬಸ್ ಸಂಚಾರದಲ್ಲಿ ವ್ಯತ್ಯಯ. ರಾಯಚೂರಿನ ಕೇಂದ್ರ ಬಸ್ ನಿಲ್ದಾಣ ಮತ್ತು ಲಿಂಗಸುಗೂರಿನ ಬಸ್ ನಿಲ್ದಾಣದಿಂದ ಸಂಚರಿಸದ ಬಸ್‌ಗಳು. ಪ್ರಯಾಣಿಕರ ಪರದಾಟ. ಬಸ್ ನಿಲ್ದಾಣದ ಹೊರಗಡೆಯಿಂದ ಸಂಚರಿಸುತ್ತಿರುವ ಬಸ್ ಗಳು. ಸಿಬ್ಬಂದಿಗಳನ್ನು ಮನವೊಲಿಸುತ್ತಿರುವ ಸಾರಿಗೆ ಇಲಾಖೆ ಅಧಿಕಾರಿಗಳು.
ಮಂಡ್ಯದಲ್ಲಿ ಗೊಂದಲ…ಮಂಡ್ಯದಲ್ಲಿ ಸಾರಿಗೆ ನೌಕರರ ಮುಷ್ಕರದ ವಿಚಾರ ಗೊಂದಲಕ್ಕೀಡಾಗಿದ್ದು, ಬೆಳಗ್ಗೆಯಿಂದ ಬಸ್ ಸಂಚಾರ ಶುರುವಾಗಿದೆ. ಆದರೆ ನಿಲ್ದಾಣದಿಂದ ಹೊರಟಿರುವ ಬಸ್‌ಗಳ ಸಂಖ್ಯೆ ಕಡಿಮೆ. 80 ಬಸ್‌ಗಳ ಪೈಕಿ‌ 30 ಬಸ್‌ಗಳಷ್ಟೇ ಸಂಚರಿಸುತ್ತಿವೆ. ನೌಕರರು ಬಾರದ ಕಾರಣ ಕೆಲವು ಬಸ್​ಗಳು ನಿಲ್ದಾಣದಲ್ಲೇ ಇವೆ. ಸಾರಿಗೆ ಅಧಿಕಾರಿಗಳು ನೌಕರರಿಗೆ ಫೋನ್ ಕರೆ ಮಾಡಿ, ಕರ್ತವ್ಯ ನಿರ್ವಹಿಸುವಂತೆ ಕೇಳುತ್ತಿದ್ದಾರೆ.
ತುಮಕೂರು ಬಸ್​ ಸಂಚಾರ ವ್ಯತ್ಯಯಸರ್ಕಾರಿ ನೌಕರರಾಗಿ ಮಾನ್ಯತೆ ನೀಡುವಂತೆ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು ಬೆಳಗ್ಗೆ 8 ಗಂಟೆ ಹೊತ್ತಿಗೆ ಜಿಲ್ಲೆಯಲ್ಲಿ 7 ಡಿಪೋಗಳಿಂದ 33 ಬಸ್ ಕಾರ್ಯಾಚರಣೆ ಮಾಡಿವೆ. ಬಸ್ ಸಂಚಾರದಲ್ಲಿನ ವ್ಯತ್ಯಯದಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ತುಮಕೂರು 1,2 ನೇ ಡಿಪೋದಿಂದ 9 ಬಸ್, ಕುಣಿಗಲ್ -18, ಮಧುಗಿರಿ- 1, ಶಿರಾ-2, ತುರುವೇಕೆರೆ-3 ಬಸ್ ರಸ್ತೆಗಿಳಿದಿವೆ. ತಿಪಟೂರು ಡಿಪೋದಿಂದ ಯಾವುದೇ ಬಸ್ ಸಂಚಾರ ಆರಂಭವಾಗಿಲ್ಲ. ಇನ್ನೂ ನಗರ ಸಾರಿಗೆ ಬಸ್ ಗಳು ಈವರೆಗೆ ಡಿಪೋದಿಂದ ಹೊರಬಂದಿಲ್ಲ.
ಚಿತ್ರದುರ್ಗ ವಿಭಾಗದಲ್ಲೂ ಮುಷ್ಕರದ ಬಿಸಿಚಿತ್ರದುರ್ಗ‌ ವಿಭಾಗೀಯ ಮಟ್ಟದಲ್ಲೂ ಸಾರಿಗೆ ನೌಕರರ ಮುಷ್ಕರದ ಬಿಸಿ ಜನಜೀವನವನ್ನು ತಟ್ಟಿದೆ. ವಿಭಾಗೀಯ ಮಟ್ಟದ ಚಿತ್ರದುರ್ಗ, ಹೊಸದುರ್ಗ ಹಾಗೂ ಚಳ್ಳಕೆರೆ ಡೀಪೊಗಳಿಂದ 200 ಷೆಡ್ಯೂಲ್ ವ್ಯತಯವಾಗಿದೆ. ನಾಲ್ಕು ನೂರಕ್ಕೂ ಹೆಚ್ಚು ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಪಾವಗಡ ಡಿಪೋ ಹೊರತು ಪಡಿಸಿ ಉಳಿದೆಡೆ ತೊಂದರೆ ಆಗಿದೆ ಎಂದು ಡಿವಿಜನಲ್ ಕಂಟ್ರೋಲರ್ ತಿಳಿಸಿದ್ದಾರೆ. ಮುಷ್ಕರ ಕುರಿತ ಸಮರ್ಪಕ ಮಾಹಿತಿ ಇಲ್ಲದ ಕಾರಣ ಪ್ರಯಾಣಿಕರಿಗೆ ಭಾರಿ ತೊಂದರೆ ಆಗಿದೆ.
ಗದಗ ಕೇಂದ್ರ ಬಸ್ ನಿಲ್ದಾಣ ಸ್ತಬ್ದ
ಸಾರಿಗೆ ನೌಕರರ ಮುಷ್ಕರದ ಬಿಸಿ ಗದಗದಲ್ಲೂ ಕಂಡುಬಂದಿದೆ. ಮುಷ್ಕರ ನಿರತ ನೌಕರರು ಫ್ಲಾಟ್​ಫಾರ್ಮ್​ಗೆ ಬಂದ ಬಸ್​ಗಳನ್ನು ವಾಪಸ್ ಕಳುಹಿಸುತ್ತಿದ್ದರು. ಗದಗ ಕೇಂದ್ರ ಬಸ್ ನಿಲ್ದಾಣದಿಂದ ಎಲ್ಲ ಬಸ್ ಸಂಚಾರ ಸ್ಥಗಿತಗೊಂಡಿದೆ. ನೌಕರರನ್ನು ಪ್ರಶ್ನಿಸಿದ ಗದಗ-ಮುಂಬಯಿ ಬಸ್​ನ ನಿರ್ವಾಹಕನಿಗೆ ಕೆಲ ನೌಕರರು ತರಾಟೆಗೆ ತೆಗೆದುಕೊಂಡರು. ಮುಂಬಯಿ, ಬಾಗಲಕೋಟ ಸೇರಿದಂತೆ ವಿವಿಧೆಡೆ ಸಂಚಾರ ಮಾಡುವ ಬಸ್​ಗಳಿಗೆ ತಡೆಯೊಡ್ಡಲಾಗಿದೆ. ಬಸ್ ಇಲ್ಲದೇ ಪ್ರಯಾಣಿಕರ ಪರದಾಟ ಅನುಭವಿಸಿದರು.
ಹುಬ್ಬಳ್ಳಿ ಧಾರವಾಡದಲ್ಲೂ ಪರಿಸ್ಥಿತಿ ಗಂಭೀರಅಕ್ಕಪಕ್ಕದ ಜಿಲ್ಲೆಗಳಲ್ಲಿ ಬಸ್ ಬಂದ್ ಕಾರಣ ಹುಬ್ಬಳ್ಳಿ-ಧಾರವಾಡಗಳಿಗೂ ಅದರ ಬಿಸಿ ತಟ್ಟಿದೆ. ಹೊರಜಿಲ್ಲೆಗಳಿಂದ ಯಾವುದೇ ಬಸ್ ಬಂದಿಲ್ಲ. ಹೊರ ಊರುಗಳಿಗೆ ಹೋಗುವ ಬಸ್ ಸಂಚಾರವೂ ನಿಂತಿದೆ. ಧಾರವಾಡ ನಗರ ಮತ್ತು ಗ್ರಾಮೀಣ ಭಾಗಕ್ಕೆ ಸಂಚರಿಸುವ ಬಸ್ ಮಾತ್ರ ಓಡಾಟ ನಡೆಸುತ್ತಿವೆ.ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಾವೇರುತ್ತಿದ್ದು, ಸಾರಿಗೆ ನೌಕರರು ಬಸ್ ತಡೆದು ಪ್ರತಿಭಟನೆ ನಡೆಸಲಾರಂಭಿಸಿದ್ದಾರೆ. ಹುಬ್ಬಳ್ಳಿಯ ಹೊಸುರು ಕ್ರಾಸ್, ಐಟಿ ಪಾರ್ಕ್ ಮುಂಬಾಗದಲ್ಲಿ ಬಸ್ ತಡೆ ಬಸ್ ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಸಾರಿಗೆ ನೌಕರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಲಕರನ್ನ ತರಾಟಗೆ ತೆಗೆದುಕೊಂಡು, ಬಸ್ ಸಂಚಾರ ಬಂದ್ ಮಾಡಲು ಬಲವಂತ ಮಾಡುತ್ತಿದ್ದಾರೆ.  ಮತ್ತೊಂದೆಡೆ ಬಸ್ ಸಂಚಾರ ಆರಂಭಿಸಿ ಎಂದ ಪೊಲೀಸರು ಹಾಗೂ ಸಾರಿಗೆ ಸಿಬ್ಬಂದಿ ಮಧ್ಯೆ ವಾಗ್ವಾದ‌ ಏರ್ಪಟ್ಟಿದ್ದು, ಬಸ್ ಸಂಚಾರ ಬಂದ್ ಮಾಡಿದ್ರೆ ಅಂಥವರ ವಿರುದ್ದ ಕೇಸ್ ದಾಖಲಿಸೋದಾಗಿ ಪೊಲೀಸರ ಬೆದರಿಕೆ‌ ಒಡ್ಡಿದ ಪ್ರಸಂಗವೂ ನಡೆಯಿತು.
ಕೊಪ್ಪಳದಲ್ಲಿ ಮಿಶ್ರ ಪ್ರತಿಕ್ರಿಯೆಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರ ಕೊಪ್ಪಳ‌ ಹಾಗೂ ಗಂಗಾವತಿ ವಿಭಾಗಗಳಲ್ಲಿ ಬೆಳಗ್ಗೆ ಎಂದಿನಂತೆ ಸಂಚಾರ ಆರಂಭವಾಗಿದೆ. ಆದರೆ, ಕುಷ್ಟಗಿ, ಯಲಬುರ್ಗಾ ಹಾಗೂ ಕುಕನೂರು ವಿಭಾಗಗಳಲ್ಲಿ ಕಾರ್ಮಿಕರು ಹಾಜರಾಗಿಲ್ಲ.‌ಇದರಿಂದ ಸಂಚಾರ ವ್ಯತ್ಯಯ ಉಂಟಾಗಿದೆ. ಕಾರ್ಮಿಕ ಮುಖಂಡರು ಸಹ ಮುಷ್ಕರ ನಡೆಸುವ ಬಗ್ಗೆ ಗೊಂದಲ್ಲಿದ್ದಾರೆ. ಇತರ ಜಿಲ್ಲೆಗಳ ನಾಯಕರು ಹಾಗೂ ಬೇರೆಡೆ ಬೆಳವಣಿಗೆ ಗಮನಿಸಿ ಮುಂದಿನ ನಡೆ ಬಗ್ಗೆ ನಿರ್ಧರಿಸಲು ಮುಂದಾಗಿದ್ದಾರೆ.
ವಿಜಯಪುರದಲ್ಲಿ ಕಂಗೆಟ್ಟ ಪ್ರಯಾಣಿಕರು

ವಿವಿಧ ಬೇಡಿಕೆ ಈಡೇರಿಕೆಗಾಗಿ ಸಾರಿಗೆ ನೌಕರರು ದಿಢೀರ್ ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ವಿಜಯಪುರ ಜಿಲ್ಲೆ ಸೇರಿದಂತೆ ಬೆಂಗಳೂರು, ಸೊಲ್ಲಾಪುರ ಇನ್ನಿತರ ಕಡೆಗಳಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಗಿದೆ.
ರಾಮನಗರದಲ್ಲಿ ಪ್ರಯಾಣಿಕರ ಪರದಾಟ
ಬಸ್​ಗಳಿಲ್ಲದೆ ಪರದಾಡುತ್ತಿರುವ ಪ್ರಯಾಣಿಕರು ಒಂದೆಡೆಯಾದರೆ, ಬಿಕೋ ಎನ್ನುತ್ತಿರುವ ಬಸ್​ನಿಲ್ದಾಣ ಮತ್ತೊಂದೆಡೆ. ಸಾರಿಗೆ ನೌಕರರ ದಿಢೀರ್ ಮುಷ್ಕರದ ಪರಿಣಾಮವಿದು. ರಾಮನಗರ ವಿಭಾಗದಿಂದ ಸಾರಿಗೆ ಬಸ್​ಗಳಾವುದೂ ರಸ್ತೆಗೆ ಇಳಿಯಲಿಲ್ಲ. ಹೊರ ಜಿಲ್ಲೆಯಿಂದ ಬರುತ್ತಿರುವ ಅಲ್ಲೊಂದು ಇಲ್ಲೊಂದು ಬಸ್ ಗಳಿಗೆ ಹತ್ತಲು ಪ್ರಯಾಣಿಕರ ನೂಕು ನುಗ್ಗಲು ಉಂಟಾಗಿದೆ. ರಾಮನಗರ ಬಸ್ ನಿಲ್ದಾಣ ಬಸ್ ಗಳಿಲ್ಲದೆ ಬಿಕೋ ಎನ್ನುತ್ತಿದೆ.
ದಾವಣಗೆರೆಯಲ್ಲಿ ಕರ್ತವ್ಯಕ್ಕೆ ಗೈರಾದ ನೌಕರರು
ಸಾರಿಗೆ ನೌಕರರ ಮುಷ್ಕರ ಹಿನ್ನಲೆ. ದಾವಣಗೆರೆ ವಿಭಾಗದಲ್ಲಿ ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಪ್ರಯಾಣಿಕರು ತೊಂದರೆಗೊಳಗಾದರು. ಬೆಳಗ್ಗೆಯಿಂದಲೂ ಯಾವುದೇ ಬಸ್ ಸಂಚರಿಸುತ್ತಿಲ್ಲ. ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಗೈರು ಹಾಜರಾಗಿ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಆವರಣದಲ್ಲಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು ತಮ್ಮ ಬೇಡಿಕೆಗಳ ಕುರಿತು ಘೋಷಣೆ ಕೂಗುತ್ತಿದ್ದಾರೆ. ಬಸ್ ಗಳು ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತಿವೆ. ಆಸ್ಪತ್ರೆಯಿಂದ ಬಿಡುಗಡೆಯಾಗಿ ಊರಿಗೆ ಹೋಗಬೇಕಿದ್ದ ಹೂವಿನಹಡಗಲಿಯ ಬಾಣಂತಿಗೆ ಬಸ್ ಇಲ್ಲದೇ ತೊಂದರೆಯಾಯಿತು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
‘ಸಾರ್ವಜನಿಕರು ಸಹಕರಿಸಿ’ – ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ !

ಗೋಪೂಜೆ ನೆರವೇರಿಸಿದ ಸಿಎಂ ಬಿಎಸ್​ ಯಡಿಯೂರಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
