ಬೆಳಗಾವಿ :ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ನೌಕರರನ್ನು ಸರ್ಕಾರಿ ನೌಕರರೆಂದು ಪರಗಣಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ತವರು ಜಿಲ್ಲೆಯಲ್ಲೂ ಇದೀಗ ಸಾರಿಗೆ ನೌಕರರು ಬಸ್ ಸಂಚಾರ ನಿಲ್ಲಿಸಿ, ದಿಢೀರ್ ಮುಷ್ಕರ ಆರಂಭಿಸಿದ್ದಾರೆ.
ಬೆಳಗಾವಿಯ ನಗರ ಸಾರಿಗೆ,ಮತ್ತು ಕೇಂದ್ರ ಬಸ್ ನಿಲ್ಧಾಣದಲ್ಲಿ ,ಹಾಗೂ ನಗರದ ಎಲ್ಲ ಡಿಪೋಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ನೌಕರರು ಕರ್ತವ್ಯ ನಿಲ್ಲಿಸಿ, ಹೋರಾಟಕ್ಕಿಳಿದಿದ್ದಾರೆ. ನೌಕರರ ಮುಷ್ಕರದಿಂದಾಗಿ ಸಿಟಿ ಬಸ್ ಮತ್ತು,ಬೆಳಗಾವಿಯಿಂದ ಹೊರಗಡೆ ಹೋಗುವ ಎಲ್ಲ ಬಸ್ ಸಂಚಾರ ಸ್ಥಗಿತಗೊಂಡಿದೆ‌.
ಇದನ್ನೂ ಓದಿ:ಸಾರಿಗೆ​ ನೌಕರರ ಮುಷ್ಕರ – ಎಲ್ಲೆಲ್ಲಿ ಏನೇನು ಸ್ಥಿತಿಗತಿ..?
ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದಲ್ಲಿ ಸಾವಿರಾರು ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಸರ್ಕಾರ ಕೂಡಲೇ ಸಾರಿಗೆ ಇಲಾಖೆಯ ನೌಕರರನ್ನು ಸರ್ಕಾರಿ ಇಲಾಖೆಯ ನೌಕರರೆಂದು ಪರಗಣಿಸಿ ಎಲ್ಲ ಸವಲತ್ತುಗಳನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ.
‘ಸಾರ್ವಜನಿಕರು ಸಹಕರಿಸಿ’ – ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ !

ಇಂದು ಸಾರಿಗೆ ನೌಕರರ ಪ್ರತಿಭಟನೆ, ರಾಜ್ಯದ ಹಲವೆಡೆ ಬಸ್ ಸೇವೆಯಲ್ಲಿ ವ್ಯತ್ಯಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
