ಬೆಂಗಳೂರು:ಸಾರಿಗೆ ನೌಕರರ ಮುಷ್ಕರ 4ನೇ ದಿನಕ್ಕೆ ಕಾಲಿರಿಸಿದ್ದು, ಸಾರಿಗೆ ಸಂಚಾರ ಬೆಳಗ್ಗೆಯಿಂದಲೇ ಅಸ್ತವ್ಯಸ್ತವಾಗಿದೆ. ಜನಾಕ್ರೋಶ ಸಾರಿಗೆ ನೌಕರರಿಗೆ ಮುಷ್ಕರಕ್ಕೆ ಕುಮ್ಮಕ್ಕು ನೀಡಿದ್ದ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ತಿರುಗಿದೆ. ಈ ಭಾನುವಾರ ರಾತ್ರಿಯೇ ಎಐಟಿಯುಸಿ ಮುಷ್ಕರದಿಂದ ಹಿಂದೆ ಸರಿದಿದ್ದು. ಕೆಲವೆಡೆ ಬಸ್ ಸಂಚಾರ ಆರಂಭವಾಗಿದೆ.
ಜನಾಕ್ರೋಶಕ್ಕೆ ಬೆದರಿದ ಕೋಡಿಹಳ್ಳಿ ಚಂದ್ರಶೇಖರ್ ಸೋಮವಾರ ಬೆಳಗ್ಗೆ 8 ಮುಷ್ಕರದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ. ದಿಢೀರ್ ಯಾಕೆ ಈ ನಿರ್ಧಾರ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕ ಹಿತ ಮುಖ್ಯ ಎಂದು ಪದೇಪದೇ ಹೇಳುತ್ತ ಬೆಳಗ್ಗೆ 11 ಗಂಟೆ ಫ್ರೀಡಂ ಪಾರ್ಕ್​ನಲ್ಲಿ ಅಧಿಕೃತವಾಗಿ ಘೋಷಿಸುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರ, ನಿರ್ಣಾಯಕ ಹಂತಕ್ಕೆ ತಲುಪಿದ ಮಾತುಕತೆ
ಮುಷ್ಕರದಿಂದಾಗಿ ಸಾರಿಗೆ ನೌಕರರಿಗೆ ಏನಾದರೂ ಲಾಭವಾಯಿತಾ? ಅವರಿಗೆ ಸಿಕ್ಕ ಪ್ರತಿಫಲವೇನು ಎಂಬ ಪ್ರಶ್ನೆಗೆ ತಡಬಡಾಯಿಸಿದ ಕೋಡಿಹಳ್ಳಿ ಚಂದ್ರಶೇಖರ್​, ಮುಷ್ಕರ ಮಾಡಿದ ತತ್​ಕ್ಷಣ ಆಸೆಗಳೆಲ್ಲಾ ಈಡೇರುವುದೆಂದು ಹೇಳಲಾಗದು. ಒಂದಷ್ಟು ವಿಷಯಗಳಲ್ಲಿ ಮುನ್ನಡೆಯಾಗಿದೆ. ಕೆಲವು ವಿಷಯಗಳಲ್ಲ ನಿರಾಸೆಯಾಗಿದೆ. ಆಸೆ, ನಿರಾಸೆಗಳೆರಡೂ ಸಾಮಾನ್ಯ ಎಂದು ತೇಪೆಹೆಚ್ಚುವ ಪ್ರಯತ್ನ ಮಾಡಿದರು. (ದಿಗ್ವಿಜಯ ನ್ಯೂಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ತಲಕಾಡು ಪಂಚಲಿಂಗ ದರ್ಶನ: ಪಂಚಲಿಂಗಗಳ ಪರಿಚಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + nineteen =
Remember me
