ವಿಜಯಪುರ:ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರು ತೀವ್ರವಾಗಿ ಪರದಾಡುತ್ತಿದ್ದು ಕೂಲಿ ಕಾರ್ಮಿಕ ಮಹಿಳೆಯೊಬ್ಬಳು ಬಸ್ ನಿಲ್ದಾಣದಲ್ಲಿ ನಿಂತು ಕಣ್ಣಿರು ಹಾಕಿದ್ದು ಕರುಳು ಚುರ್ ಎನ್ನಿಸಿತು. ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಬಂದಿದ್ದ ಮಹಿಳೆ ಹಾಗೂ ಆಕೆಯ ಇಬ್ಬರು ಪುಟ್ಟ ಪುಟ್ಟ ಮಕ್ಕಳು ಮುಂದೆ ಬಸ್ ಸೌಲಭ್ಯ ಇಲ್ಲದ ಕಾರಣ ಸಂಪೂರ್ಣ ಕಂಗಾಲಾದರು.
ಬಾಗಲಕೋಟೆ ಜಿಲ್ಲೆ ಮುಧೋಳ ಬಳಿ ಕಬ್ಬು ಕಾಟಾವಿಗೆ ತೆರಳುತ್ತಿದ್ದ ಮಹಿಳೆ ನಿಲ್ದಾಣದಲ್ಲಿ‌ ನಿಂತು ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡು ಸಾರ್ವಜನಿಕರು ಕನಿಕರ ವ್ಯಕ್ತಪಡಿಸಿದರು.
ಎರಡನೇ ದಿನವೂ ಮುಂದುವರಿದ ಮುಷ್ಕರದ ಬಿಸಿ ವ್ಯಾಪಕವಾಗಿ ತಟ್ಟಿದ್ದು ಬೆಳಗ್ಗೆಯಿಂದಲೇ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಆಟೋ ಚಾಲಕರು ಹಾಗೂ ಖಾಸಗಿ ವಾಹನಗಳು ಮುಷ್ಕರದ ಲಾಭ ಪಡೆದರು. ಆಟೋ ಚಾಲಕನೊಬ್ಬ1200 ಬಾಡಿಗೆ ಕೇಳುತ್ತಿದ್ದ ಸನ್ನಿವೇಶ ಕಂಡು ಬಂತು.
ಸಾರಿಗೆ ನೌಕರರ ಮುಷ್ಕರ: ನಿಗದಿತ ಕಾರ್ಯಕ್ರಮ ರದ್ದುಗೊಳಿಸಿ ಮಾತುಕತೆ ಕಾಯ್ತಿದ್ದಾರೆ ಡಿಸಿಎಂ ಸವದಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen + one =
Remember me
