ಬೆಂಗಳೂರು:ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮುಂದುವರಿಸಿದ ಪರಿಣಾಮ ಶನಿವಾರವೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡಿದರು. ಭಾನುವಾರವೂ ಪ್ರತಿಭಟನೆ ಮುಂದುವರಿಯುವುದರಿಂದ ಸಾರಿಗೆ ಸಂಕಷ್ಟ ಅನುಭವಿಸುವುದು ತಪ್ಪಲ್ಲ.
ಪೊಲೀಸ್ ಭದ್ರತೆಯೊಂದಿಗೆ ಶನಿವಾರ ಬೆಳಗ್ಗೆ ರಾಜ್ಯದೆಲ್ಲೆಡೆ ಬಸ್​ಗಳನ್ನು ರಸ್ತೆಗಿಳಿಸುವ ಪ್ರಯತ್ನ ವಿಫಲವಾಯಿತು. ಖಾಸಗಿ ಚಾಲಕರು, ಮೆಕಾನಿಕ್​ಗಳು ಹಾಗೂ ತರಬೇತಿನಿರತ ಚಾಲಕರನ್ನು ಕರೆತಂದು ಕೆಲ ಡಿಪೋಗಳಿಂದ ಬಸ್ ಸಂಚಾರ ಪ್ರಾರಂಭಿಸಲಾಯಿತು. ಪ್ರತಿಭಟನೆ ತೀವ್ರವಾದ ಹಿನ್ನೆಲೆ ಮಧ್ಯಾಹ್ನದ ವೇಳೆಗೆ ಬಸ್ ಸಂಚಾರ ಸಂಪೂರ್ಣ ವಾಗಿ ಸ್ಥಗಿತಗೊಳಿಸಲಾಯಿತು. ಮಂಗಳೂರು ಸೇರಿ ಕರಾವಳಿ ಭಾಗಗಳಲ್ಲಿ ಎಂದಿನಂತೆ ಸರ್ಕಾರಿ ಬಸ್​ಗಳ ಓಡಾಟವಿದ್ದರೂ ಪ್ರಯಾಣಿಕರಿರಲಿಲ್ಲ.
37 ಬಸ್​ಗೆ ಹಾನಿ: ಕಳೆದ 2 ದಿನಗಳಲ್ಲಿ ರಾಜ್ಯದಲ್ಲಿ 37 ಬಸ್​ಗಳಿಗೆ ಹಾನಿಯಾಗಿದ್ದು, ಶನಿವಾರ 5 ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಬೆಂಗಳೂರಿನಿಂದ 11, ಮೈಸೂರು ಗ್ರಾಮೀಣ-6, ಮೈಸೂರು ನಗರ-1, ಕೋಲಾರ- 2, ಮಂಡ್ಯ-1, ಶಿವಮೊಗ್ಗ-5, ದಾವಣಗೆರೆ-3, ಮಂಗಳೂರಿ ನಿಂದ 140 ಸೇರಿ ಕೆಎಸ್​ಆರ್​ಟಿಸಿ ಶನಿವಾರ ರಾಜ್ಯಾದ್ಯಂತ 170 ಬಸ್​ಗಳನ್ನು ರಸ್ತೆಗಿಳಿಸಿದೆ.
ವಿವಿಧೆಡೆ ಪ್ರತಿಭಟನೆ:ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಕೈ ಬಿಡಲು ಒಪ್ಪದ ನೌಕರರು ಆಯಾ ಬಸ್ ಡಿಪೋಗಳಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ನೌಕರ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂಬ ಆರೋಪ ಕೇಳಿಬಂದಿದೆ.
ಇಬ್ಬರು ಚಾಲಕರು ಸಾವು:ಪ್ರತಿಭಟನೆ ವೇಳೆ ಇಬ್ಬರು ಚಾಲಕರು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ಡಿಪೋ ಚಾಲಕ ಮಕಬೂಲ್ ಶನಿವಾರ ಬೆಳಗ್ಗೆ ಮಹಾರಾಷ್ಟ್ರದ ನಾಂದೇಡಗೆ ಕೆಲಸಕ್ಕೆ ತೆರಳಿ, ಒತ್ತಡದ ನಡುವೆ ಬಸ್ ಚಾಲನೆ ಮಾಡುತ್ತಿದ್ದಾಗ ದೇಗಲೂರ ಸಮೀಪ ಹೃದಯಘಾತವಾಗಿದೆ. ಬೆಳಗಾವಿಯಲ್ಲಿ ಶುಕ್ರವಾರದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮನೆಗೆ ತೆರಳಿದ್ದ ಬಸ್ ಚಾಲಕ ವಡಗಾಂವಿಯ ನಿವಾಸಿ ದತ್ತಾ ಮಂಡೋಲ್ಕರ್ (58) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸಾರಿಗೆ ನೌಕರರಿಗೆ ಕಾಂಗ್ರೆಸ್ ಬೆಂಬಲ
ಬೆಂಗಳೂರು: ಸಾರಿಗೆ ನೌಕರರು ನಡೆಸಿರುವ ಮುಷ್ಕರದಲ್ಲಿ ಕಾಂಗ್ರೆಸ್ ಮುಖಂಡರು ಭಾಗವಹಿಸುವ ಮೂಲಕ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಹೋರಾಟಕ್ಕೆ ರಾಜಕೀಯ ಬಣ್ಣ ಬಂದಂತಾಗಿದೆ. ಬಾದಾಮಿ ಪ್ರವಾಸದಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಲ್ಲಿನ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ನಡೆದ ಕಾರ್ಯಕರ್ತರ ಸಭೆಯಲ್ಲಿಯೇ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಕರೆ ಮಾಡಿದ ಸಿದ್ದರಾಮಯ್ಯ, ನಮಗೂ ನಿಮ್ಮ ಕಷ್ಟ ಗೊತ್ತಿದೆ. ತಕ್ಷಣವೇ ಸಿಬ್ಬಂದಿ ನಾಯಕರೊಂದಿಗೆ ಚರ್ಚೆ ನಡೆಸಿ ಚಳವಳಿ ಕೈ ಬಿಡುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ಬೆಂಗಳೂರಿನ ಬನಶಂಕರಿಯಲ್ಲಿ ನಡೆಯುತ್ತಿರುವ ನೌಕರರ ಹೋರಾಟದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಇಲಾಖೆಯಲ್ಲೂ ಆಡಳಿತಾತ್ಮಕ ವಿಭಾಗದಲ್ಲಿ ನೌಕರರಿಂದ ಇಬ್ಬಿಬ್ಬರನ್ನು ನೇಮಕ ಮಾಡುತ್ತೇವೆ. ಈ ಹೋರಾಟದಲ್ಲಿ ಕಾಂಗ್ರೆಸ್ ಸಾರಿಗೆ ನೌಕರರ ಜೊತೆಗಿದೆ. ನೀವು ಭಯ ಬೀಳುವ ಅಗತ್ಯ ಇಲ್ಲ ಎಂದು ಭರವಸೆ ನೀಡಿದ್ದಾರೆ. ಶಾಸಕಿ ಸೌಮ್ಯರೆಡ್ಡಿ ಉಪಸ್ಥಿತರಿದ್ದರು.
ಪ್ರಯಾಣಿಕರಿಗೆ ಸಂಕಟ
ಸಾರಿಗೆ ನೌಕರರ ಮುಷ್ಕರ ಮುಂದುವರಿ ದಿದ್ದು, ಈ ಮಾಹಿತಿ ಇಲ್ಲದೆ ಪರ ಊರುಗಳಿಗೆ ತೆರಳಲು ಬಂದ ಜನ ಪರದಾಡು ವಂತಾಯಿತು. ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇತ್ತು. ರೋಗಿಗಳು, ವೃದ್ಧರು ಬಸ್​ಗಳಿಲ್ಲದೆ ಪರದಾಡುವಂತಾಯಿತು. ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ನಾನಾ ಕಡೆಯಿಂದ ಬಂದ ಭಕ್ತರು ವಾಪಸ್ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೆ ಕಷ್ಟಪಟ್ಟರು.
ಬಾಣಸಿಗರಾದ ನೌಕರರು
ಬೆಳ್ತಂಗಡಿ: ಮುಷ್ಕರದ ಹಿನ್ನೆಲೆಯಲ್ಲಿ ಶನಿವಾರ ಧರ್ಮಸ್ಥಳ ಡಿಪೋದಿಂದ ಯಾವುದೇ ಬಸ್ ಓಡಾಟ ನಡೆಸಲಿಲ್ಲ. ಇದರಿಂದ ಮುಷ್ಕರದಿಂದ ನೂರಾರು ಸಾರಿಗೆ ಸಿಬ್ಬಂದಿ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಉಪಾಹಾರ ವ್ಯವಸ್ಥೆ ಮಾಡಿಕೊಂಡರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 16 =
Remember me
