ಬೆಂಗಳೂರು:ಹಿಂದು ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡಿರುವ ‘ಶಾಹೀನ್ ಗ್ಯಾಂಗ್’ ರಾಜ್ಯದಲ್ಲಿ ಸದ್ದಿಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದು, ‘ಲವ್ ಜಿಹಾದ್’ ಈ ತಂಡದ ಕಾರ್ಯಸೂಚಿ ಎಂಬ ಅಂಶ ಬೆಳಕಿಗೆ ಬಂದಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಮತ್ತು ಇತರ ಕೆಲ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸುವ ಮುನ್ನ ಹಾಗೂ ನಂತರ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಬಂಧಿತ ಕೆಲವು ಪಿಎಫ್​ಐ ಮುಖಂಡರನ್ನು ವಿಚಾರಣೆಗೆ ಒಳಪಡಿಸಿದಾಗ ಮಹತ್ವದ ಮಾಹಿತಿಗಳು ಹೊರಬಿದ್ದಿವೆ. ಈ ಪೈಕಿ ಕರ್ನಾಟಕದಲ್ಲಿ ‘ಶಾಹೀನ್ ಗ್ಯಾಂಗ್’ ಹೆಜ್ಜೆಗುರುತು ಮೂಡಿಸಿರುವುದನ್ನು ಎನ್​ಐಎ ಪತ್ತೆ ಹಚ್ಚಿದೆ ಎಂದು ಹೇಳಲಾಗುತ್ತಿದೆ.
ಯಾವುದೀ ಶಾಹೀನ್ ಗ್ಯಾಂಗ್?: ಪಿಎಫ್​ಐ ತತ್ವ-ಸಿದ್ಧಾಂತಗಳಿಗೆ ಮಾರು ಹೋದ, ಪ್ರೇರಣೆ ಹಾಗೂ ತರಬೇತಿ ಪಡೆದ ಮುಸ್ಲಿಂ ಯುವತಿ ಯರು ‘ಶಾಹೀನ್ ಗ್ಯಾಂಗ್’ ರಚಿಸಿಕೊಂಡಿದ್ದು, ತಂಡದ ಕೆಲಸಕ್ಕೆ ಕೆಲವು ಮೌಲ್ವಿಗಳು ಹಾಗೂ ಮದರಸಾಗಳು ಒತ್ತಾಸೆಯಾಗಿ ನಿಂತಿರುವ ಅನುಮಾನವಿದೆ. ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ದುರ್ಲಾಭ ಪಡೆದು ಹಿಂದು ಯುವತಿಯರನ್ನು ಮರುಳು ಮಾಡಿ, ಮುಸ್ಲಿಂ ಯುವಕರ ಜತೆಗೆ ಮದುವೆಗೆ ಒಪ್ಪಿಸುವುದು ಗ್ಯಾಂಗ್​ನ ಕೆಲಸ. ಬಲೆಗೆ ಬಿದ್ದ ಹಿಂದು ಯುವತಿಯ ಮನಸ್ಥಿತಿ, ಪರಿಸ್ಥಿತಿ ಹದವಾಗಿದೆ ಎಂದು ಅರಿತುಕೊಂಡ ಮೇಲೆ ‘ಲವ್ ಜಿಹಾದ್’ಗೆ ಕೆಡವುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಗ್ಯಾಂಗ್ ಸಕ್ರಿಯವಾಗಿದೆ ಎಂದು ಗೊತ್ತಾಗಿದೆ.
ಅಭಿಯಾನ:ಮುಂದಿನ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಲವ್ ಜಿಹಾದ್ ನಿಯಂತ್ರಣಕ್ಕೆ ಉತ್ತರಪ್ರದೇಶ ಮಾದರಿ ವಿಶೇಷ ಪೊಲೀಸ್ ದಳ ಜಾರಿಗೆ ತರಬೇಕು ಎಂದು ಒತ್ತಾಯಿಸಿ, ಹಿಂದು ಜನಜಾಗೃತಿ ಸಮಿತಿ ಅಭಿಯಾನ ಹಮ್ಮಿಕೊಂಡಿದೆ. ಡಿ.18ರವರೆಗೆ ನಡೆಯಲಿರುವ ಈ ಅಭಿಯಾನದ ಮೂಲಕ ರಾಜ್ಯದ ಎಲ್ಲ ಶಾಸಕರಿಗೆ ಮನವಿ ಸಲ್ಲಿಸಿ, ಬೇಡಿಕೆಯತ್ತ ಗಮನಸೆಳೆಯಲಿದೆ.
ಮತಾಂತರ ನಿಷೇಧ ಕಾಯ್ದೆ ಪರಿಣಾಮಕಾರಿ ಅನುಷ್ಠಾನವೂ ಅಷ್ಟೇ ಮುಖ್ಯ. ಉತ್ತರಪ್ರದೇಶ ಮಾದರಿಯಲ್ಲಿ ವಿಶೇಷ ದಳ ರಚನೆ ಸೂಕ್ತವಾದ ಮಾರ್ಗ.
|ಮೋಹನ್ ಗೌಡ, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ
ಕಳವಳಕಾರಿ ಸಂಗತಿ:ರಾಜ್ಯದ ಅಪರಾಧ ದಾಖಲೆಗಳ ವರದಿ (ಕ್ರೖೆಮ್ ರೆಕಾರ್ಡ್ಸ್ ರಿಪೋರ್ಟ್) ಪ್ರಕಾರ 2014 ರಿಂದ 2019ರ ಅವಧಿಯಲ್ಲಿ ಒಟ್ಟು 21 ಸಾವಿರ ಹಿಂದು ಮಹಿಳೆ/ಯುವತಿಯರು ನಾಪತ್ತೆಯಾಗಿದ್ದಾರೆ. ಪಿಎಫ್​ಐ ವಿರುದ್ಧ ಕಾರ್ಯಾಚರಣೆಗೆ ಸಂಬಂಧಿತ ಎನ್​ಐಎ ವರದಿ ಉಲ್ಲೇಖಿಸಿರುವಂತೆ ಕಳೆದ ಎಂಟು ತಿಂಗಳಲ್ಲಿ 850 ಯುವತಿಯರು ಕಾಣೆಯಾಗಿದ್ದಾರೆ ಎಂದು ಹಿಂದು ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಬಹುತೇಕ ಕಡೆ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ಕೈತೊಳೆದು ಕೊಳ್ಳುತ್ತಿದ್ದು, ಇನ್ನಷ್ಟು ಕಟ್ಟುನಿಟ್ಟಿನ ಕ್ರಮವಾಗಲು ಉತ್ತರಪ್ರದೇಶ ಮಾದರಿಯೊಂದೇ ಪರಿಹಾರವೆಂದು ಮನವಿಯಲ್ಲಿ ತಿಳಿಸಲಾಗಿದೆ.
ಎಲ್ಲೆಲ್ಲಿ ಕಾರ್ಯ?:ಕೊಡಗು, ಬೆಂಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ‘ಶಾಹೀನ್ ಗ್ಯಾಂಗ್’ ಕಾರ್ಯಸ್ಥಾನವಾಗಿದ್ದು, ಕರಾವಳಿ ಭಾಗದಲ್ಲಿ ‘ಲವ್ ಜಿಹಾದ್’ ಘಟನೆಗಳು ಹೆಚ್ಚೆಚ್ಚು ನಡೆಯಲು ಇದೇ ಗ್ಯಾಂಗ್ ಕಾರಣವೆಂಬ ಸಂದೇಹವಿದೆ. ರಾಯಚೂರು ಮತ್ತು ಬೆಂಗಳೂರಿನ ಯಶವಂತಪುರದಲ್ಲಿ ಇಂತಹ ಪ್ರಕರಣಗಳು ವರದಿಯಾಗಿದ್ದು, ಶಾಹೀನ್ ಗ್ಯಾಂಗ್​ನ ಕೈವಾಡವಿದೆ ಎಂದು ಹೇಳಲಾಗುತ್ತಿದೆ.
ಸಚಿವರ ಗಮನಸೆಳೆದ ಸಂಘಟನೆಗಳು:‘ಶಾಹೀನ್ ಗ್ಯಾಂಗ್’ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಕುರಿತು ಎನ್​ಐಎ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗಮನಕ್ಕೆ ಹಿಂದುಪರ ಸಂಘಟನೆಗಳು ತಂದಿವೆ. ಗೃಹ ಸಚಿವರ ಅಧಿಕೃತ ನಿವಾಸಕ್ಕೆ ಹಿಂದು ಜನಜಾಗೃತಿ ಸಮಿತಿ ನೇತೃತ್ವದ ಸಂಘಟನೆಗಳ ನಿಯೋಗ ತೆರಳಿ, ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ ರಚಿಸುವಂತೆ ಮನವಿ ಸಲ್ಲಿಸಿದೆ. ಎನ್​ಐಎ ವರದಿ ಸೇರಿ ಹಲವು ಆತಂಕಕಾರಿ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಲವ್ ಜಿಹಾದ್ ಘಟನೆಗಳು ನಡೆಯುತ್ತಿದ್ದು, ಉತ್ತರಪ್ರದೇಶ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ ರಚಿಸಬೇಕೆಂದು ಕೋರಿದಾಗ ಪರಿಶೀಲಿಸಿ ಸರ್ಕಾರದಮಟ್ಟದಲ್ಲಿ ರ್ಚಚಿಸುವೆ ಎಂದು ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.
ಪೊಲೀಸರಿಗೆ ತರಬೇತಿ ಚಿಂತನೆ:ಲವ್ ಜಿಹಾದ್​ಗೆ ಲಗಾಮು ಹಾಕುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರೂ ಸಮರ್ಪಕ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ಗೃಹ ಇಲಾಖೆಗೆ ಲಭ್ಯವಾಗಿದೆ. ಈ ಕಾಯ್ದೆ ಮಹತ್ವ, ಅದರಲ್ಲಿರುವ ಅಂಶಗಳು ಮತ್ತು ದೂರುಗಳು ಸಲ್ಲಿಕೆಯಾದ ಸಂದರ್ಭದಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಕೆಳಹಂತದ ಪೊಲೀಸರಿಗೆ ತರಬೇತಿ ನೀಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸಚಿವರ ಸೂಚನೆ ಬಳಿಕ ಕೇಸ್!:ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಲವ್ ಜಿಹಾದ್ ಪ್ರಕರಣವೊಂದು ನಡೆದಿದ್ದು, ಪಾಲಕರು ದೂರು ಸಲ್ಲಿಸಿದರೆ ಪೊಲೀಸರು ನಾಪತ್ತೆ ಕೇಸ್ ದಾಖಲಿಸಿಕೊಂಡಿದ್ದಾರೆ. ನೊಂದವರಿಂದ ಈ ವಿಷಯ ತಿಳಿದ ಸಚಿವರೊಬ್ಬರು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇಕೆ? ಎಂದು ಕೇಳಿ, ಕಾಯ್ದೆ ಬಗ್ಗೆ ತಿಳಿದುಕೊಳ್ಳಲು ಸಲಹೆ ನೀಡಿದ್ದಾರೆ. ಇದಾದ ನಂತರ ಹೊಸ ಕಾಯ್ದೆರೀತ್ಯ ಪ್ರಕರಣ ದಾಖಲಾಯಿತು ಎಂದು ತಿಳಿದು ಬಂದಿದೆ.
ಗುಟ್ಟಾಗಿ ಸೊಸೆಯ ಬೆಡ್​ರೂಮ್​ಗೆ ಹೋಗುತ್ತಿದ್ದ ಅತ್ತೆ; ಪ್ರೆಗ್ನೆನ್ಸಿ ಟೆಸ್ಟ್​ ಪಾಸಿಟಿವ್ ಪತ್ತೆ!; ನಿಜಕ್ಕೂ ಆಗಿದ್ದೇನು?

‘ನನ್ನನ್ನು ಪೊಲೀಸರೇ ಸಾಯಿಸ್ತಾರೆ, ನ್ಯಾಯ ಕೊಡಿಸಿ’ ಎಂದು ಅಲವತ್ತುಕೊಂಡ ಯುವಕ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 4 =
Remember me
