ಬೆಂಗಳೂರು:ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ.ಆದಾಯ ತರುವ ಅಬಕಾರಿ ಇಲಾಖೆಯಲ್ಲಿ ಮೂರು ವರ್ಷದಲ್ಲಿ ಉಪ ಅಧೀಕ್ಷಕರು, ನಿರೀಕ್ಷಕರು ಹಾಗೂ ಉಪ ಆಯುಕ್ತರು ಸೇರಿ ಒಟ್ಟು 9 ಅಧಿಕಾರಿಗಳು ಲಂಚ ಪಡೆಯುವ ವೇಳೆ ಟ್ರ್ಯಾಪ್‌ಗೆ ಸಿಕ್ಕಿಬಿದ್ದಿದ್ದಾರೆ.
ಅಬಕಾರಿ ಉಪ ಆಯುಕ್ತರಾದ ಆರ್.ನಾಗಶಯನ, ಸಿ.ಸೆಲೀನಾ, ನಿರೀಕ್ಷಕರಾದ ಚಲುವರಾಜು, ಯಶವಂತಕುಮಾರ್, ಎಸ್.ಮಂಜುನಾಥ್, ವಿ.ರಮೇಶ್, ಬಸವರಾಜು, ಉಪಅಧೀಕ್ಷಕ ಶಿವಹರಳಯ್ಯ ಹಾಗೂ ಉಪ ನಿರೀಕ್ಷಕ ಪ್ರೀತಿ ರಾಠೋಡ ಸಿಕ್ಕಿಬಿದ್ದ ಅಧಿಕಾರಿಗಳು. ಚಿತ್ರದುರ್ಗದಲ್ಲಿ ಅಬಕಾರಿ ಉಪ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಆರ್.ನಾಗಶಯನ, ಸನ್ನದುದಾರರಿಂದ ಲಂಚಕ್ಕೆ ಪಡೆಯುತ್ತಿದ್ದ ವೇಳೆ ಟ್ರ್ಯಾಪ್‌ಗೆ ಒಳಗಾಗಿದ್ದರು. ಇವರನ್ನು ಕೆಲ ದಿನ ಅಮಾನತು ಮಾಡಲಾಗಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ನಾಗಶಯನ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಿಂದ (ಕೆಎಸ್‌ಎಟಿ) ತಡೆಯಾಜ್ಞೆ ತಂದಿದ್ದರು. ಬಳಿಕ, ಕಾರ್ಯನಿರ್ವಾಹಕ ಹುದ್ದೆಯಲ್ಲದ ಬೆಂಗಳೂರಿನ ಕುಂಬಳಗೋಡು ಯುನೈಟೆಡ್ ಸ್ಪಿರಿಟ್ಸ್ ಲಿ.ಗೆ ವರ್ಗಾಯಿಸಲಾಗಿತ್ತು. ಬಳಿಕ, ರಾಜಕೀಯ, ಹಣದ ಪ್ರಭಾವ ಬೀರಿ ಕಾರ್ಯಾನಿವಾರ್ಹಕ ಹುದ್ದೆಯಾದ ಚಾಮರಾಜನಗರ ಅಬಕಾರಿ ಉಪಆಯುಕ್ತ ಹುದ್ದೆಯಲ್ಲಿ ಕುಳಿತು ಈ ಅಧಿಕಾರಿ ಕಾರ್ಯಭಾರ ಮಾಡುತ್ತಿದ್ದಾರೆ.
ಅದೇರೀತಿ, ಕೊಪ್ಪಳ ಜಿಲ್ಲೆಯ ಉಪ ಆಯುಕ್ತೆರಾಗಿ ಕಾರ್ಯನಿರ್ವಹಿಸುತ್ತಿದ್ದ ಸಿ.ಸೆಲೀನಾ ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದರು. ಹೀಗಾಗಿ, ಸ್ವಲ್ಪ ದಿನ ಅಮಾನತು ಪಡಿಸಿ ಬೆಂಗಳೂರಿನ ಮೆ:ಜಾನ್ ಡಿಸ್ಟಿಲರೀಸ್ ಪ್ರೈ.ಲಿ.ಗೆ ವರ್ಗಾಯಿಸಲಾಗಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಸೆಲೀನಾ ಸಹ, ಕೆಎಸ್‌ಎಟಿಯಿಂದ ತಡೆಯಾಜ್ಞೆ ತಂದು ಅಬಕಾರಿ ಉಪ ಆಯುಕ್ತೆರಾಗಿ ಮುಂದುವರಿದಿದ್ದರು. ಇತ್ತೀಚಿಗಷ್ಟೇ ಭ್ರಷ್ಟಾಚಾರ ಪ್ರಕರಣ ಸಂಬಂಧ ಸಿ.ಸೆಲೀನಾನನ್ನು ಮತ್ತೆ ಸೆಸ್ಪೆಂಡ್ ಮಾಡಲಾಗಿದೆ. ಚಿತ್ರದುರ್ಗದ ಉಪ ಅಧೀಕ್ಷಕರ ಶಿವಹರಳಯ್ಯ, ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದರು. 2021ರ ಡಿ.18ರಂದು ಇವರನ್ನು ಸೆಸ್ಪಂಡ್ ಮಾಡಲಾಗಿತ್ತು. ಇವರ ವಿರುದ್ಧ ವಿಚಾರಣೆ ನಡೆಸಿದ್ದ ಇಲಾಖೆ, ಅಮಾನತು ತೆರವುಗೊಳಿಸಿ ಬೆಂಗಳೂರು ನಗರ ಜಿಲ್ಲೆ(ಬಿಯುಡಿ-1) ಮೆ:ಓರಿಯನ್ ಡಿಸ್ಟಲರಿಯಲ್ಲಿ ಖಾಲಿ ಇರುವ ಅಬಕಾರಿ ಉಪ ಆಯುಕ್ತರ ಹುದ್ದೆ ನಿಯುಕ್ತಿಗೊಳಿಸಿತ್ತು.
ಮೈಸೂರು ನಗರ ಜಿಲ್ಲೆಯ ಮೈಸೂರು ವಲಯ-4ರಲ್ಲಿ ಅಬಕಾರಿ ನಿರೀಕ್ಷಕರಾಗಿದ್ದ ಯಶವಂತಕುಮಾರ್, ಕುಮಟ ವಲಯದ ಉಪ ನಿರೀಕ್ಷಕಿ ಪ್ರೀತಿ ರಾಠೋಡ, ಬಿಯುಡಿ-3 ವಲಯದ ಅಬಕಾರಿ ನಿರೀಕ್ಷಕರಾಗಿದ್ದ ಎಸ್.ಮಂಜುನಾಥ್, ರಾಯಚೂರಿನ ಮಾನ್ವಿ ವಲಯದ ನಿರೀಕ್ಷಕ ಬಸವರಾಜು ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಲಯದ ಅಬಕಾರಿ ನಿರೀಕ್ಷಕ ಚಲುವರಾಜು, ಗೌರಿಬಿದನೂರು ವಲಯದ ಅಬಕಾರಿ ನಿರೀಕ್ಷಕ ವಿ.ರಮೇಶ್, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇರೆಗೆ ಲೋಕಾಯುಕ್ತ ದಾಳಿ ನಡೆಸಿ ಕೇಸ್ ದಾಖಲಿಸಿತ್ತು. ಪ್ರಕರಣ ಸಂಬಂಧ ಇವರ ಮೇಲೆ ಇನ್ನೂ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ:2024 ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸುತ್ತಾರಾ ರಾಹುಲ್ ಗಾಂಧಿ?
ಕಡ್ಡಾಯ ನಿವೃತ್ತಿಗೊಳಿಸಿ:ಭ್ರಷ್ಟಾಚಾರ, ಲಂಚ ಬೇಡಿಕೆ ಸಂಬಂಧ ಟ್ರ್ಯಾಪ್‌ಗೆ ಒಳಗಾದ ಅಧಿಕಾರಿಗಳಿಗೆ ಲಾಭದಾಯಕ ಹುದ್ದೆ ನೀಡಬಾರದೆಂದು ಸರ್ಕಾರದ ಆದೇಶವಿದೆ. ಆದರೆ, ಈ ಆದೇಶ ಉಲ್ಲಂಸಿ ಇವೆರಲ್ಲರಿಗೂ ಲಾಭದಾಯಕ ಹುದ್ದೆಗಳಲ್ಲಿ ಕುಳಿತು ಕಾರ್ಯಭಾರ ಮಾಡುತ್ತಿದ್ದಾರೆ.ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಬಗ್ಗೆ ಅಬಕಾರಿ ಇಲಾಖೆಯು ಮೇಲ್ಮನವಿ ಸಲ್ಲಿಸದೆ ಕಾಲಹರಣ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಭ್ರಷ್ಟ್ರಚಾರದಲ್ಲಿ ಸಿಕ್ಕಿಬಿದ್ದಿರುವ ಅಧಿಕಾರಿಗಳಿಗೆ ಮಣಿ ಹಾಕುತ್ತಿರುವ ಬಗ್ಗೆಯೂ ದೂರುಗಳಿವೆ. ಲೋಕಾಯುಕ್ತ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೊಳಿಸಲು ರಾಜ್ಯ ಸರ್ಕಾರ, ಇತ್ತೀಚಿಗಷ್ಟೇ ಸಚಿವ ಸಂಪುಟದಲ್ಲಿ ತೀರ್ಮಾನಿಸಿತ್ತು. ಅದರಂತೆ, ಬೇರೆ ಬೇರೆ ಇಲಾಖೆಯ ಮೂರ‌್ನಾಲ್ಕು ಅಧಿಕಾರಿಗಳನ್ನು ಹುದ್ದೆಯಿಂದ ವಜಾ ಮಾಡಲಾಗಿತ್ತು. ಹೀಗಾಗಿ, ಟ್ರ್ಯಾಪ್‌ಗೆ ಒಳಗಾದ ಅಧಿಕಾರಿಗಳನ್ನು ವಜಾ ಮಾಡುವಂತೆ ಕೂಗು ಕೇಳಿಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fourteen =
Remember me
