ಕಲಬುರಗಿ: ಕರೊನಾ ವೈರಸ್​ನಿಂದ ಮೃತಪಟ್ಟ 76 ವರ್ಷದ ವೃದ್ಧನ ಅಧಿಕೃತ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯ ಇಲಾಖೆ ಬಿಚ್ಚಿಟ್ಟಿದೆ. ಫೆಬ್ರವರಿ 29ರಂದು ಮಧ್ಯಾಹ್ನ 12.30ಕ್ಕೆ ಸೌದಿಯಿಂದ ಹೈದರಾಬಾದ್​ಗೆ ಆಗಮಿಸಿದ ಪಟಂಚೇರು ಬಳಿ ಚಹಾ ಸೇವಿಸಿದ್ದ ಈತ, ಬಳಿಕ ಕಾರಿನಲ್ಲಿ ಕಲಬುರಗಿಗೆ ಕಡೆಗೆ ಬರುವಾಗ ಕಮಲಾಪುರ ಬಳಿ ದಾಬಾದಲ್ಲಿ ಮಾಂಸಾಹಾರ ಸೇವಿಸಿದ್ದರು.
ಸಂಜೆ 5ಕ್ಕೆ ಕಲಬುರಗಿಯಲ್ಲಿರು ತನ್ನ ಮನೆ ತಲುಪಿದ್ದ ವೃದ್ಧ, ಫೆಬ್ರವರಿ 29ರಿಂದ ಮಾರ್ಚ್ 6ರವರೆಗೆ ಮನೆಯಲ್ಲಿದ್ದ. ಮಾರ್ಚ್ 6ರಂದು ಜ್ವರ ಕಾಣಿಸಿಕೊಂಡಾಗ ಕುಟುಂಬ ವೈದ್ಯರು ತಪಾಸಣೆ ನಡೆಸಿದ್ದರು. ಜ್ವರ, ಕೆಮ್ಮು, ನೆಗಡಿ ಕಮ್ಮಿಯಾಗದ್ದರಿಂದ 9ರಂದು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಂದು ರಾತ್ರಿ 10ಕ್ಕೆ ವೈದ್ಯರ ಸೂಚನೆ ಕಡೆಗಣಿಸಿ ಡಿಸ್​ಚಾರ್ಜ್ ಮಾಡಿಸಿದ ಕುಟುಂಬದ ಸದಸ್ಯರು ನೇರವಾಗಿ ಹೈದರಾಬಾದ್​ಗೆ ಕೊಂಡೊಯ್ದಿದ್ದರು. 10ರಂದು ಹೈದರಾಬಾದ್ ಕೇರ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದಿದ್ದರಿಂದ ಆಸ್ಪತ್ರೆ ಆಂಬುಲೆನ್ಸ್​ನಲ್ಲಿ ಕಲಬುರಗಿಗೆ ಕರೆತರುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು. ಬಳಿಕ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಆಸ್ಪತ್ರೆ ವೈದ್ಯರು ವೃದ್ಧ ಸಾವನ್ನಪ್ಪಿರುವುದು ಅಧಿಕೃತವಾಗಿ ಘೊಷಿಸಿದರು.
ಮರುದಿನ ಅಂತ್ಯಕ್ರಿಯೆ ನಡೆದಿತ್ತು. 12ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತೆಲಂಗಾಣ ಸರ್ಕಾರಕ್ಕೆ ಕ್ರಾಸ್ ನೋಟಿಫಿಕೇಷನ್ ನೀಡಿದಾಗ ಟ್ರಾವೆಲ್ ಹಿಸ್ಟರಿ ಬೆಳಕಿಗೆ ಬಂದಿತು.
ವೃದ್ಧನ ಜತೆ ಸಂಪರ್ಕ ಹೊಂದಿದ್ದ 71 ಜನ ಸೇರಿ ಕುಟುಂಬ, ಏರಿಯಾ ಜನ, ಅಂತ್ಯಕ್ರಿಯೆಯಲ್ಲಿ ಭಾಗಿಯಾದವರ ಮೇಲೆ ನಿಗಾ ವಹಿಸಲಾಗಿತ್ತು. ಆದರೆ ವೃದ್ಧ ಊಟ ಮಾಡಿದ್ದ ದಾಬಾ ಕೆಲಸಗಾರರ ಸಂಪರ್ಕ ಮಾಡಲಿಲ್ವ? ಜತೆಗೆ ದಾಬಾದಲ್ಲಿ ವೃದ್ಧನಿಗೆ ಊಟ ಸರ್ವ್ ಮಾಡಿದ್ದ ವೇಟರ್, ಬಿಲ್ ಪಡೆದವರನ್ನ ಆರೋಗ್ಯ ಇಲಾಖೆ ಸಂರ್ಪಸಲಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.
ಕರೊನಾ ವೈರಸ್​ಗೆ ಸಂಬಂಧಿಸಿದಂತೆ ಮೃತ ವೃದ್ಧ ಕಮಲಾಪುರ ಬಳಿ ಊಟ ಮಾಡಿದ ದಾಬಾ ಬಂದ್ ಮಾಡಿಸಲಾಗಿದ್ದು, ಕೆಲಸ ಮಾಡುತ್ತಿದ್ದ ಏಳು ಜನರನ್ನು ಹೋಂ ಐಸೋಲೇಶನ್​ನಲ್ಲಿ ಇರಿಸಿ ತೀವ್ರ ನಿಗಾ ವಹಿಸಲಾಗಿದೆ.
| ಶರತ್ ಬಿ. ಜಿಲ್ಲಾಧಿಕಾರಿ
ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಬರೆಯಿರಿ: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಚಿವ ಸುರೇಶ್​ ಕುಮಾರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − one =
Remember me
