|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಪ್ರತಿ ಇಲಾಖೆ, ಕಚೇರಿಯ ಹಣಕಾಸು ನಿರ್ವಹಣೆಯನ್ನು ಏಕೀಕೃತ ಚಾವಡಿ ಯಡಿ ತರುವ ತನ್ಮೂಲಕ ಮಾನವ ಹಸ್ತಕ್ಷೇಪ ಕಡಿಮೆ ಮಾಡುವ ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ ‘ಖಜಾನೆ-2’ನಲ್ಲಿನ ಕರ್ಮಕಾಂಡ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಈ ಕಗ್ಗಂಟು ಬಿಡಿಸುವ ಅನಿವಾರ್ಯತೆ ಎದುರಾಗಿದೆ. ಅಂತಿಮವಾಗಿ ಈ ತಂತ್ರಾಂಶದ ನಿಯಂತ್ರಣ ಖಾಸಗಿ ನಿರ್ವಹಣಾ ಸಂಸ್ಥೆ ಕೈಯಲ್ಲಿರುವುದು ಕೂಡ ಅಪಾಯಕಾರಿ ಎಂದೇ ವಿಶ್ಲೇಷಿಸಲಾಗಿದೆ. ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿ ಪ್ರಕಾರ ಸರ್ಕಾರಿ ನೌಕರರು ಸೇವಾ ನಿವೃತ್ತಿ ಬಳಿಕವೂ ಖಜಾನೆ-2 ತಂತ್ರಾಂಶ ಬಳಕೆ ಮಾಡಿದ್ದಾರೆ. ಸೇವಾ ನಿವೃತ್ತಿಯ ನಂತರದ ಪ್ರಯೋಜನಗಳನ್ನು ಎರಡೆರಡು ಬಾರಿ ಪಡೆದಿರುವುದು, ಅಮಾನತುಗೊಂಡಾಗಲೂ ಹಲವು ಸಿಬ್ಬಂದಿ ಈ ವೇದಿಕೆ ಬಳಸಿ ಅನ್ಯರಿಗೆ ಅನುಕೂಲ ಮಾಡಿಕೊಟ್ಟಿರುವುದು, ನಿಧನರಾಗಿರುವವರಿಗೂ ವೇತನ ಪಾವತಿಯಾಗಿರುವಂತಹ ಪ್ರಸಂಗಗಳು ಬೆಳಕಿಗೆ ಬಂದಿವೆ.
ಖಜಾನೆ ಪುರಾಣ:ಖಜಾನೆ-2 ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣಾ ವ್ಯವಸ್ಥೆಯಾಗಿದ್ದು, ಸರ್ಕಾರದ ಆರ್ಥಿಕ ವಹಿವಾಟುಗಳನ್ನು ಸಮಗ್ರವಾಗಿ ನಿರ್ವಹಿಸುವ ಉದ್ದೇಶಕ್ಕಾಗಿ ಅನುಷ್ಠಾನಗೊಂಡಿದೆ. ಯಾವುದೇ ಸ್ಥಳದಿಂದ- ಯಾವುದೇ ಸಮಯದಲ್ಲಿ ಸಂದಾಯ ಮಾಡುವ ಅನುಕೂಲತೆಯೊಂದಿಗೆ ಮತ್ತು ಸರ್ಕಾರಕ್ಕೆ ಸಂದಾಯ ಮಾಡುವ ವಿಧಾನವನ್ನು ಸರಳೀಕೃತಗೊಳಿಸಲು, ವಿವಿಧ ಇಲಾಖೆಗಳು ತಮ್ಮ ಗ್ರಾಹಕರಿಗೆ ಸಂದಾಯ ಮಾಡಲು ಅವಕಾಶ ಮಾಡಿಕೊಡುವ ವ್ಯವಸ್ಥೆ. ಅಲ್ಲದೆ, ಎಲ್ಲ ಮುಖ್ಯ ನಿಯಂತ್ರಣಾಧಿಕಾರಿಗಳು, ನಿಯಂತ್ರಣಾಧಿಕಾರಿಗಳು ಮತ್ತು ಹಣ ಸೆಳೆಯುವ ಹಾಗೂ ಬಟವಾಡೆ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಸರ್ಕಾರದ ಪರವಾಗಿ ಹಣಕಾಸಿನ ಚಟುವಟಿಕೆಗಳನ್ನು ನಿರ್ವಹಿಸಲು ಇದು ಅನುಕೂಲ ಕಲ್ಪಿಸುತ್ತದೆ.
ಸರ್ಕಾರ 2011ರಲ್ಲಿ ರಾಜ್ಯದಲ್ಲಿನ ಖಜಾನೆಗಳನ್ನು ಸ್ವಯಂಚಾಲಿತಗೊಳಿಸಲು ಖಜಾನೆ ಗಣಕೀಕರಣ ಯೋಜನೆ ಖಜಾನೆ ಕೆ-2 ಅನ್ನು ಅನುಷ್ಠಾನಗೊಳಿಸಿತ್ತು. ಇದರಲ್ಲಿ ಮಾನವಚಾಲಿತ ಸಂವಹನಗಳಿಲ್ಲದೆ ನೇರವಾಗಿ ‘ಸಿಸ್ಟಮ್ ಟು ಸಿಸ್ಟಮ್ ಮಾಹಿತಿ ವಿನಿಮಯ ಸಕ್ರಿಯಗೊಳಿಸಲು ಎಲ್ಲ ಇಲಾಖೆಗಳನ್ನು ಸಮಗ್ರ ವ್ಯವಸ್ಥೆಯಲ್ಲಿ ತರಲು ಯೋಜಿಸಿತ್ತು. 2013ರ ವೇಳೆ ಯೋಜನೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಎಲ್ಲ ಪ್ರಕಾರಗಳಲ್ಲಿ ಕಾರ್ಯಾರಂಭ ಮಾಡಲಾಗುವುದು ಎಂಬ ಗುರಿ ಇದ್ದರೂ, 2022ರ ನವೆಂಬರ್​ವರೆಗೂ ಅದು ಪೂರ್ಣಗೊಂಡಿಲ್ಲ ಎಂಬುದು ಗಮನಾರ್ಹ ಸಂಗತಿ.
ಕೆ2 ತನ್ನ ವ್ಯಾಪ್ತಿಯನ್ನು ನಾಗರಿಕರಿಗೆ ವಿಸ್ತರಿಸಲು ಮತ್ತು ಸರ್ಕಾರದ ಜಮೆಗಳ ಪ್ರಕ್ರಿಯೆಗಳನ್ನು ಸರಳಗೊಳಿಸಲು, ವ್ಯವಸ್ಥಿತಗೊಳಿಸಲು ಸಹ ಪ್ರಸ್ತಾಪಿಸಿತ್ತು. ಉನ್ನತೀಕರಣ, ಏಕೀಕರಣ, ವ್ಯವಹಾರ ಪ್ರಕ್ರಿಯೆ ಮರು ಸಂಯೋಜನೆ, ಮಾಹಿತಿ ವ್ಯವಸ್ಥೆ ನಿಯಂತ್ರಣಗಳು, ಸ್ವತ್ತುಗಳನ್ನು ರಕ್ಷಿಸುವುದು, ದತ್ತಾಂಶ ಸಂಗ್ರಹ- ಭದ್ರತೆ, ಸರ್ಕಾರದ ಹಣಕಾಸಿನ ಕಾರ್ಯಾಚರಣೆಗಳ ಪರಿಣಾಮಕಾರಿತ್ವ, ದಕ್ಷತೆ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿತ್ತು.
ಗುತ್ತಿಗೆದಾರನ ಕೈಯಲ್ಲಿ ಸರ್ಕಾರದ ಜುಟ್ಟು:ಕೆ2 ಅಪ್ಲಿಕೇಶನ್ ಆಂತರಿಕ ರಚನಾ ವಿನ್ಯಾಸ ಅರ್ಥಮಾಡಿಕೊಳ್ಳುವಲ್ಲಿ ನಿರ್ಣಾಯಕವಾಗಿರುವ ಅಪ್ಲಿಕೇಶನ್ ಸೋರ್ಸ್ ಕೋಡ್ ಮತ್ತು ವಿವರವಾದ ದತ್ತಾಂಶವನ್ನು ಇಲಾಖೆಯು ತನ್ನ ಸುಪರ್ದಿಗೆ ಪಡೆದಿಲ್ಲ ಎಂಬುದು ಗಮನಾರ್ಹ ಸಂಗತಿ. 2024ರೊಳಗೆ ಅದನ್ನು ಪಡೆದುಕೊಳ್ಳಲಾಗುವುದೆಂಬ ಆಶಾಭಾವನೆ ಆರ್ಥಿಕ ಇಲಾಖೆಯದ್ದಾಗಿದೆ. ರಾಜ್ಯ ಸರ್ಕಾರವು ತನ್ನದೇ ಹೂಡಿಕೆಯಿಂದ ಅಭಿವೃದ್ಧಿಪಡಿಸಿ ಪ್ರಮುಖ ಸ್ವತ್ತಾದ ಕೆ2 ಅಪ್ಲಿಕೇಶನ್ ಮೇಲೆ ನಿಯಂತ್ರಣವನ್ನೇ ಹೊಂದಿಲ್ಲ. ಹೀಗಾಗಿ ತಾಂತ್ರಿಕ ಸಂಯೋಜಕರ ಮೇಲೆ ಅವಲಂಬನೆ ಹೊಂದಬೇಕಾಗಿದೆ. ಅಂದರೆ ಒಟ್ಟಾರೆ ಗುತ್ತಿಗೆ ಪಡೆದ ಖಾಸಗಿಯವರ ಹಿಡಿತದಲ್ಲೇ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + twenty =
Remember me
