ಬಾಗಲಕೋಟೆ:ಇದು ಪವನಶಕ್ತಿಯ ಹೊಡೆತಕ್ಕೆ ವಿದ್ಯುಚ್ಛಕ್ತಿ ಕೈಕೊಟ್ಟ ಪ್ರಕರಣ. ಏಕೆಂದರೆ ಗಾಳಿಯ ರಭಸಕ್ಕೆ ಮರವೊಂದು ಉರುಳಿದ್ದಲ್ಲದೆ, ಅದರ ಪರಿಣಾಮವಾಗಿ ಸಾಲಾಗಿ ಒಂದೊಂದೇ ವಿದ್ಯುತ್​ ಕಂಬ ಧರೆಗುರುಳಿ 12 ಕಂಬಗಳು ಬಿದ್ದುಹೋಗಿವೆ.
ಇಂಥದ್ದೊಂದು ಪ್ರಕರಣ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ. ಒಮ್ಮೆಗೇ ಬೀಸಿದ ಭೀಕರ ಗಾಳಿಯ ಪರಿಣಾಮವಾಗಿ ಬೇವಿನ ಮರವೊಂದು ಬಿದ್ದಿದೆ. ಇದು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ಅದರ ಸಂಪರ್ಕ ಹೊಂದಿದ್ದ 12 ವಿದ್ಯುತ್ ಕಂಬಗಳೂ ಬಿದ್ದುಹೋಗಿವೆ.
ಹೀಗೆ ಸಾಲಾಗಿ ವಿದ್ಯುತ್ ಕಂಬಗಳು ನೆಲಕ್ಕುರುಳುತ್ತಿದ್ದಂತೆ ತಕ್ಷಣ ಜಾಗೃತಗೊಂಡ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ಹೆಚ್ಚಿನ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಕರೊನಾ ಲಸಿಕೆ ಹಾಕೊಂಡಿದ್ರೆ ಇಲ್ಲಿ ಬಿಯರ್ ಫ್ರೀ!; ಮಹಿಳೆಯರಿಗೆ ಚಿನ್ನದ ಮೂಗುತಿ​, ಲಸಿಕೆ ಅಭಿಯಾನಕ್ಕೆ ಶುರುವಾದ್ವು ಆಫರ್ಸ್​.

ಕರೊನಾ ಜಾಗೃತಿಗಾಗಿ ವಾಹನ ಸಮೇತ ಬೀದಿಗಿಳಿದ ಯಮರಾಜ; ರಸ್ತೆಯಲ್ಲಿ ನಿಂತು ಯಮ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 4 =
Remember me
