ಶಿವಮೊಗ್ಗ:ರಾಜ್ಯದ ಹಲವೆಡೆ ಭಾರಿ ಗಾಳಿ ಮಳೆ ಬೀಸುತ್ತಿದ್ದು, ಮಳೆ ಸಂಬಂಧಿತ ಅವಾಂತರಗಳು ಕೇಳಿಬರುತ್ತಿವೆ. ಈ ನಡುವೆ ಚಲಿಸುತ್ತಿದ್ದ ಬೈಕ್ ಮೇಲೆಯೇ ಮರವೊಂದು ಬಿದ್ದಿದ್ದಲ್ಲದೆ, ನಡೆದುಕೊಂಡು ಹೋಗುತ್ತಿದ್ದವರೂ ಆ ಮರದಡಿಗೆ ಸಿಲುಕಿದ ಪ್ರಕರಣವೂ ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರದ ಕೊಡಚಾದ್ರಿ ಕಾಲೇಜು ಎದುರು ಇಂದು ಈ ಅವಘಡ ಸಂಭವಿಸಿದೆ. ಬೈಕ್​ವೊಂದು ಸಾಗುತ್ತಿದ್ದಾಗ ಬೀಸುತ್ತಿದ್ದ ಭಾರಿ ಗಾಳಿ ಮಳೆಗೆ ಉರುಳಿದ ಮರ ಅಪಘಾತಕ್ಕೆ ಕಾರಣವಾಗಿದೆ. ಬೈಕ್ ಸವಾರ, ಮಾವಿನಕೊಪ್ಪ ಬಡಾವಣೆಯ ಸಾದಿಕ್​ ಎಂಬವರು ಬೈಕ್ ಸಮೇತ ಮರದಡಿಗೆ ಸಿಲುಕಿ ಗಂಭೀರ ಗಾಯಗಳಾಗಿವೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಸಾದಿಕ್​ ಮಾತ್ರವಲ್ಲದೆ ಮತ್ತೊಬ್ಬ ಬೈಕ್ ಸವಾರ ಪ್ರತೀಕ್​ ಹಾಗೂ ನಡೆದುಕೊಂಡು ಹೋಗುತ್ತಿದ್ದ ಋತ್ವಿಕ್ ಎಂಬವರೂ ಮರದಡಿಗೆ ಸಿಲುಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಹೊಸನಗರ ಹಾಗೂ ಶಿವಮೊಗ್ಗ ನಡುವಿನ ರಸ್ತೆ ಸಂಪರ್ಕ ಕೆಲಕಾಲ ಸ್ಥಗಿತಗೊಂಡಿತ್ತು. ಬಳಿಕ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಬೇಡ ವರಿ, ಕಟ್ಟಿಹಾಕೋಣ ಮಹಾಮಾರಿ: ರಾಜ್ಯದ ಜನತೆಗೆ ಪಂಚ ಸಚಿವರ ಅಭಯ, ಸಂಭಾವ್ಯ ಮೂರನೇ ಅಲೆ ಬಗ್ಗೆ ಬೇಡ ಭಯ..

ಸಾಯುವವನು ಎಲ್ಲಿ ಬೇಕಾದ್ರೂ ಸಾಯಲಿ, ನಾನು ಇಲ್ಲಿ ಕೋವಿಡ್ ಸೆಂಟರ್ ತೆರೆಯಲ್ಲ: ಬಿಜೆಪಿ ಶಾಸಕರ ಖಡಾಖಂಡಿತ ಮಾತು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × four =
Remember me
