ಬೆಂಗಳೂರು:ಬೆಂಗಳೂರಲ್ಲಿ ಕದ್ದ ಈಚರ್ ಲಾರಿ ಮಂಡ್ಯದಲ್ಲಿ ಪತ್ತೆಯಾಗಿತ್ತು, ಲಾರಿ ನೋಡಿದ ಮಾಲೀಕ ಅದರ ಸ್ಥಿತಿ ಕಂಡು ಕ್ಷಣಕಾಲ ಬೆಚ್ಚಿಬಿದ್ದಿದ್ದಾನೆ.
ಮಾರುತಿ ಎಂಬುವರಿಗೆ ಸೇರಿದ ಕೆಎ 16 ಬಿ 0783 ನಂಬರ್ ನ ಈಚರ್ ವಾಹನವನ್ನು ಬೆಂಗಳೂರಿನಲ್ಲಿ ಕಳ್ಳತನ ಮಾಡಲಾಗಿತ್ತು. ಕದ್ದ ಲಾರಿ ಒಂದೇ ಒಂದು ರಾತ್ರೀಲಿ ಪೀಸ್ ಪೀಸ್ ಆಗಿದ್ದು, ಸ್ವತ ಮಾಲೀಕ ಮಾರುತಿ ಶಾಕ್ ಆಗಿದ್ದಾರೆ.
ಪ್ರಕರಣದ ಹಿನ್ನೆಲೆ:
ಮಾರ್ಚ್ 15 ರಂದು ರಾತ್ರಿ 2.45 ರ ಸುಮಾರಿಗೆ ಕೊಟ್ಟಿಗೆಪಾಳ್ಯದಲ್ಲಿ ನಿಲ್ಲಿಸಿದ್ದ ವಾಹನವನ್ನು ಕಳ್ಳತನ ಮಾಡಲಾಗಿತ್ತು. ಲಾರಿಯಲ್ಲಿ ಜಿಪಿಎಸ್ ಇದ್ದಿದ್ದರಿಂದ ಜಾಡು ಹಿಡಿದು ಪೊಲೀಸರು ಹೊರಟಿದ್ದರು. ಆದರೆ ಅಷ್ಟೊತ್ತಿಗಾಗಲೇ ಲಾರಿ ಮಂಡ್ಯ ತಲುಪಿತ್ತು.
ಪ್ರಕರಣ ಬೆನ್ನಟ್ಟಿದ್ದ ಪೊಲೀಸರು, ಮಂಡ್ಯದ ಗ್ಯಾರೇಜ್​ ವೊಂದರಲ್ಲಿ ಲಾರಿಯನ್ನು ಪತ್ತೆ ಹಚ್ಚಿದ್ದಾರೆ. ಆದರೆ ಈಚರ್ ವಾಹನವನ್ನು ಸಂಪೂರ್ಣ ಕಟ್ ಮಾಡಲಾಗಿತ್ತು. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿ ಮಜರ್ ಅಹಮ್ಮದ್ ನನ್ನು ಬಂಧಿಸಿದ್ದಾರೆ.
ಅಪ್ಪು 5ನೇ ತಿಂಗಳ ಪುಣ್ಯತಿಥಿ; ಕುಟುಂಬಸ್ಥರಿಂದ ಪೂಜೆ, ನಿರ್ದೇಶಕ ಆರ್​ಜಿವಿ ಭೇಟಿ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × one =
Remember me
