ಬಾಗಲಕೋಟೆ:ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ಬುಧವಾರ ಬೆಳ್ಳಂಬೆಳಗ್ಗೆ ಸರಣಿ ಅಪಘಾತ ಸಂಭವಿಸಿದ್ದು, 6 ವಾಹನಗಳು ನ್ಜಜುಗುಜ್ಜಾಗಿ ದಿಕ್ಕಾಪಾಲಾಗಿ ಬಿದ್ದಿದ್ದವು.
ಅಪಘಾತಕ್ಕೀಡಾದ ವಾಹನಗಳ ಪೈಕಿ ಎರಡು ಲಾರಿಯಲ್ಲಿ ಚೆಂಡು ಹೂವು ತುಂಬಿತ್ತು, ಮತ್ತೆ ಇನ್ನೆರಡು ಲಾರಿಯಲ್ಲಿ ಸ್ಲ್ಯಾಗ್ ಲೋಡ್ ಮಾಡಲಾಗಿತ್ತು. ಕ್ಯಾಂಟರ್​ನಲ್ಲಿ ಕಬ್ಬಿಣದ ಸರಳುಗಳು ಇದ್ದವು.
ಇದನ್ನೂ ಓದಿರಿ‘ಪ್ರಶಾಂತ್​ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’
ಈ ಅಪಘಾತ ಸಂಭವಿಸಿದ್ದೇಗೆ?:ಕಮತಗಿ ಕ್ರಾಸ್ ಬಳಿ ರಸ್ತೆಬದಿ ನಿಂತಿದ್ದ ಒಂದು ಲಾರಿಗೆ ಮತ್ತೊಂದು ಲಾರಿ ಡಿಕ್ಕಿಹೊಡೆಯಿತು. ಹಿಂಬದಿಯಿಂದ ಬಂದ ಮತ್ತೆರೆಡು ಲಾರಿ, 2 ಕ್ಯಾಂಟರ್​ಗಳು ಡಿಕ್ಕಿಯಾಗಿದೆ. ಸರಣಿ ಅಪಘಾತದಿಂದ ವಾಹನಗಳು ಅಲ್ಲೊಂದು ಇಲ್ಲೊಂದು ಹೊಲಗತ್ತ ನುಗ್ಗಿವೆ. ಈ ಆರೂ ವಾಹನಗಳು ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಓರ್ವ ಲಾರಿ ಚಾಲಕ ಗಾಯಗೊಂಡಿದ್ದು, ಆತನನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೀನಗಡ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ.
ಸಂಬಳ ಕೇಳಿದ್ದಕ್ಕೆ ಗ್ರಾಮ ಸಹಾಯಕಿಯನ್ನು ಮಂಚಕ್ಕೆ ಕರೆದ ತಹಸೀಲ್ದಾರ್!

‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − three =
Remember me
