ಬೆಂಗಳೂರು:ರಾತ್ರೋರಾತ್ರಿ ಚಿನ್ನ ಕದಿಯಲು ಫೀಲ್ಡಿಗಿಳಿದಿದ್ದ ದರೋಡೆಕೋರರ ಪ್ಲ್ಯಾನ್‌ ಲಾಸ್ಟ್‌ ಮಿನಿಟ್​ನಲ್ಲಿ ಕೈಕೊಟ್ಟಿದೆ.
ಮಾಗಡಿ ರಸ್ತೆಯ ಬ್ಯಾಡರಹಳ್ಳಿ ಸಮೀಪ ದೊಡ್ಡಗೊಲ್ಲರಹಟ್ಟಿ ಬಳಿಯಿರುವ ಮಣಪುರಂ ಗೋಲ್ಡ್ ಲೋನ್​ ಮಳಿಗೆಯಲ್ಲಿ ಚಿನ್ನ ದರೋಡೆ ಮಾಡಲು ದುಷ್ಕರ್ಮಿಗಳು ಸಂಚು ರೂಪಿಸಿದ್ದರು. ಅದರಂತೆ ಕಳೆದ ಭಾನುವಾರ (ಆ2) ರಾತ್ರಿ ಮಣಪುರಂ ಶಾಪ್​ಗೆ ಕನ್ನ ಹಾಕಲು ಡ್ರಿಲ್ಲಿಂಗ್ ಮಿಷನ್ ಸಮೇತ ಎಂಟ್ರಿ ಕೊಟ್ಟಿದ್ದರು. ಎರಡನೇ ಮಹಡಿಯಲ್ಲಿರುವ ಮಣಪುರಂ ಮಳಿಗೆಗೆ ಹೋಗಲು ಮೂರನೇ ಮಹಡಿಯಲ್ಲಿರುವ ಎಸ್.ಆರ್.ಕಂಪ್ಯೂಟರ್ ತರಬೇತಿ ಕೇಂದ್ರದ ಬಾಗಿಲು ಹೊಡೆದು ಒಳ ನುಗಿದ್ದರು. ಮೂರನೇ ಮಹಡಿ ಮೂಲಕ ಎರಡನೇ ಮಹಡಿಯ ಗೋಲ್ಡ್ ಲೋನ್​ ಶಾಪ್​ಗೆ ನುಗ್ಗಲು ಡ್ರಿಲ್ಲಿಂಗ್ ಮಷಿನ್​ನಿಂದ ನೆಲಕೊರೆಯುತ್ತಿದ್ದರು. ಆದರೆ, ಲಾಸ್ಟ್‌ ಮಿನಿಟ್​ನಲ್ಲಿ ಪ್ಲ್ಯಾನ್‌ ಪ್ಲಾಪ್​ ಆಗಿದೆ.
ಇದನ್ನೂ ಓದಿರಿಬೆಂಗಳೂರಲ್ಲಿ ವಿದೇಶಿಗರಿದ್ದ 35 ಮನೆಗಳ ಮೇಲೆ ರಾತ್ರೋರಾತ್ರಿ ಸಿಸಿಬಿ ರೇಡ್​… ಬೆಚ್ಚಿ ಬೀಳಿಸುತ್ತೆ ಅಲ್ಲಿನ ಅಕ್ರಮ
ದರೋಡೆಕೋರರು ನೆಲ ಕೊರೆಯುತ್ತಿದ್ದ ವೇಳೆ ಡ್ರಿಲ್ಲಿಂಗ್ ಮಷಿನ್​​ ಕೈಕೊಟ್ಟಿದೆ. ಮಿಷನ್​ನ ಮೊಳೆ ಸಿಲುಕಿಕೊಂಡಿದ್ದರಿಂದ ಅದನ್ನು ತೆಗೆಯಲು ಪ್ರಯತ್ನಿಸಿದರೂಸಫಲವಾಗದ ಹಿನ್ನೆಲೆಯಲ್ಲಿ ಗೋಲ್ಡ್ ದರೋಡೆ ಯತ್ನ ವಿಫಲವಾಗಿದೆ. ಅಷ್ಟಕ್ಕೆ ಸುಮ್ಮನಾಗದ ಅವರು ಟ್ರೈನಿಂಗ್ ಸೆಂಟರ್​ನಲ್ಲಿದ್ದ 2 ಸಾವಿರ ನಗದು‌ ದೋಚಿದ್ದಾರೆ.
ಅಲ್ಲಿದ್ದ ಸಿಸಿಟಿವಿ ಡಿವಿಆರ್ ಕಳವು ಮಾಡಿದ್ದಾರೆ. ಈ ಸಂಬಂಧ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ಮಾಲೀಕ ರಮೇಶ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ಳು ನಕಲಿ ಪತ್ರಕರ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 4 =
Remember me
