ಬೆಂಗಳೂರು:ಸ್ವಾತಂತ್ರ್ಯ ಬಂದು 75 ವರ್ಷವಾದರೂ ಭಾರತದ ಸರಿಯಾದ ಚಿತ್ರಣ ಸಿಗುತ್ತಿಲ್ಲ. ಲಕ್ಷಗಟ್ಟಲೇ ಅನಾಮಧೇಯ ಹೋರಾಟಗಾರರ ಬಗ್ಗೆ ದಾಖಲಾಗಿಲ್ಲ. ಆದರೆ ಒಂದು ವರ್ಗ, ಒಂದು ಪಕ್ಷಕ್ಕೆ ಸೇರಿದವರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಲವಾಗಿ ಆಕ್ಷೇಪಿಸಿದರು.
ಸ್ವಾತಂತ್ರ್ಯ ದಿನದ ನಿಮಿತ್ತ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ದೇಶ ವಿಭಜನೆಯ ಕರಾಳ ಅಧ್ಯಾಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತಿತರರದು ಯಾವ ಪಕ್ಷ? ಕಾಂಗ್ರೆಸ್ ತೊರೆದ ಸುಭಾಷ್ ಚಂದ್ರ ಬೋಸ್ ಸ್ವಂತ ಸೇನೆ ಕಟ್ಟಿ ಹೋರಾಡಿದ್ದರು ಎಂದು ಮೆಲುಕು ಹಾಕಿದರು.
ಕರ್ನಾಟಕದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ,ಸಂಗೊಳ್ಳಿ ರಾಯಣ್ಣ, ವೀರಸಿಂಧೂರ ಲಕ್ಷ್ಮಣ, ಮೈಲಾರ ಮಹದೇವಪ್ಪ, ಬಾಬಾ ಸಾಹೇಬ ,ರಾಣಿ ಅಬ್ಬಕ್ಕ ಹೋರಾಡಿದ್ದಾರೆ, ರಾಜ್ಯದಲ್ಲಿಯೂ ಜಲಿಯನ್ ವಾಲಾಭಾಗ್ ನಂತಹ ಘಟನೆಗಳಿಗೂ ಕಡಿಮೆಯಿಲ್ಲದ ಸಂಗ್ರಾಮಗಳಾಗಿವೆ ಎಂದು ವಿವರಿಸಿದರು.
ಕವಲು ಹಾದಿಯಲ್ಲಿದ್ದ ದೇಶವು ಸಮರ್ಥ ನಾಯಕನಿಗೆ ಅಪೇಕ್ಷಿಸುತ್ತಿದ್ದಾಗ ನರೇಂದ್ರ ಮೋದಿ ಬಂದು ದೇಶಕ್ಕೆ ಬೆಳಕಿನ ಪುಟದ ಇತಿಹಾಸ ಬರೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸಮರ್ಥ ನಾಯಕನ ಅಗತ್ಯವಿದೆ ಎಂದು ಮಿತ್ರ ದೇಶಗಳು ಮಾತ್ರವಲ್ಲ ವೈರಿದೇಶಗಳು ಬಯಸುತ್ತಿವೆ ಎಂದು ಹೇಳಿದರು.
ಅಮೃತ ಕಾಲದಲ್ಲಿ ಬಲಿಷ್ಠ, ಶ್ರೇಷ್ಠ ಭಾರತ ಕಟ್ಟಬೇಕೆಂಬ ಮೋದಿ ಸಂಕಲ್ಪ ಸಿದ್ಧಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಸ್ವಾತಂತ್ರ್ಯಪೂರ್ವ ದೇಶಕ್ಕಾಗಿ ಪ್ರಾಣ ಕೊಡುತ್ತಿದ್ದರು. ಈಗ ದೇಶಕ್ಕಾಗಿ ಬದುಕಬೇಕಾಗಿದೆ ಎಂದು ಬೊಮ್ಮಾಯಿ ಮನವಿ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂಸಾತ್ಮಕ, ಅಹಿಂಸಾತ್ಮಕ ಎಂದು ಎರಡು ರೀತಿಯ ಹೋರಾಟ ನಡೆಯಿತು, ಎರಡರ ಕಾರಣದಿಂದ ಸ್ವಾತಂತ್ರ್ಯ ಬಂದಿದೆ. ಸ್ವಾತಂತ್ರ್ಯ ಬಂದ ನಂತರ ಎಲ್ಲ ಹಿರಿಯರ ಸ್ಮರಣೆ ಮರೆತು, ಒಂದು ಕುಟುಂಬದ ಕೊಡುಗೆ ಮಾತ್ರ ಉಳಿಸಲಾಯಿತು ಎಂದು ಟೀಕಿಸಿದರು.
ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಭಕ್ತಿಯ ಕಾರಣದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ.ಅಂಬೇಡ್ಕರ್‌ರಂತಹ ಮಹನೀಯರ ಸ್ಮರಣೆ ಮಾಡುವಂತಾಗಿದೆ. ಜಗತ್ತಿನಲ್ಲಿ ಭಾರತ ವಿಶಿಷ್ಠವಾದ ಸ್ಥಾನದಲ್ಲಿ ನೆಲೆಸಬೇಕು ಎನ್ನುವುದು ಮೋದಿ ಕಲ್ಪನೆಯಾಗಿದ್ದು, ಇದನ್ನೂ ಟೀಕಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿಮ್ಮ ಕೊಡುಗೆ ಏನು ? ಎಂದು ಕೇಳುತ್ತಾರೆ. ಶಾಮಾ ಪ್ರಸಾದ್ ಮುಖರ್ಜಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಕಾಶ್ಮೀರ ಉಳಿಸುವ ಕೆಲಸ ಮಾಡಿದ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ತಿರುಗೇಟು ನೀಡಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × one =
Remember me
