ಹಳಿಯಾಳ:ಹುಲಿಯ ತಲೆಯ ಸಮೇತ ಚರ್ಮವನ್ನು ಮಾರಲು ಯತ್ನಿಸುತ್ತಿದ್ದ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸ್ ಅರಣ್ಯ ಸಂಚಾರಿ ದಳವು ಬುಧವಾರ ಹಳಿಯಾಳ ಪಟ್ಟಣದಲ್ಲಿ ಬಂಧಿಸಿದೆ. ಹಳಿಯಾಳದ ತಿಳಕ ರಸ್ತೆಯ ನಿವಾಸಿ ಮಹಾದೇವ ನಾರಾಯಣ ತೇರಗಾಂವಕರ (55) ಬಂಧಿತ ಆರೋಪಿಯಾಗಿದ್ದು, ಈತನಿಂದ ತಲೆಸಮೇತ ಹುಲಿಯ ಚರ್ಮ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಹುಲಿಯ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ ಚಿಕ್ಕಮಗಳೂರು ಪೊಲೀಸ್ ಅರಣ್ಯ ಸಂಚಾರಿ ದಳವು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಪಟ್ಟಣದ ಐಬಿ ರಸ್ತೆಯಲ್ಲಿ ನಾಗಜರಿ ಕ್ರಾಸ್ ಬಳಿ ಚರ್ಮ ಮಾರಾಟ ಮಾಡಲು ತಂದಾಗ ಖರೀದಿದಾರರ ಸೋಗಿನಲ್ಲಿ ಬಂದ ಪೊಲೀಸ್ ಅರಣ್ಯ ಸಂಚಾರಿ ದಳದ ತಂಡವು ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಹಳಿಯಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ಮಾರ್ಚ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಚಿಕ್ಕಮಗಳೂರು ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್​ಐ ಆರ್. ಶೋಭಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಎಚ್. ದೇವರಾಜ್, ಸಿ.ಎಚ್. ಕೃಷ್ಣರಾಜ್ ಅರಸ್, ಡಿ.ಎಚ್. ದಿನೇಶ್, ಹೇಮಾವತಿ, ತಿಮ್ಮಶೆಟ್ಟಿ ಹಾಗೂ ವಾಹನ ಚಾಲಕರು ಇದ್ದರು.

ಈ ಪ್ರಕರಣದ ತನಿಖೆಯನ್ನು ಹಳಿಯಾಳ ಅರಣ್ಯ ವಲಯಕ್ಕೆ ವಹಿಸಲಾಗಿದೆ. ಹುಲಿಗಳ ಚರ್ಮ ಹಾಗೂ ಅಂಗಾಂಗಗಳ ಕಳ್ಳಸಾಗಾಣಿಕೆ ಮಾರಾಟ ಜಾಲವು ರಾಜ್ಯದ ತುಂಬ ಹರಡಿದೆ. ಈ ನಿಟ್ಟಿನಲ್ಲಿ ಹಳಿಯಾಳದಲ್ಲಿ ಕಂಡು ಬಂದ ಈ ಪ್ರಕರಣದ ಸಮಗ್ರ ತನಿಖೆ ನಡೆಸಲಾಗುವುದು. ಹುಲಿಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

|ಮಹೇಶ ಹಿರೇಮಠಹಳಿಯಾಳ ವಲಯ ಅರಣ್ಯಾಧಿಕಾರಿ
ಶ್ರೀಶೈಲ ಜಗದ್ಗುರುಗಳಿಂದ ಲಿಂಗದೀಕ್ಷೆ ಪಡೆದ ಮೊಹಮ್ಮದ್ ಮಸ್ತಾನ್; ಶಿವಸಂಸ್ಕೃತಿಗೆ ಮಾರುಹೋದ ಮುಸ್ಲಿಂ ಯುವಕ
‘ನಾನು ಹೊಡೆದೇ ಇಲ್ಲ, ಅವಳೇ ಚಪ್ಪಲಿಯಲ್ಲಿ ಹೊಡೆದಿದ್ದು.. ಹಿಂದಿಯಲ್ಲಿ ಬೈದಿದ್ದು..’ ಕಥೆಯನ್ನು ಬಿಚ್ಚಿಟ್ಟ ಡೆಲಿವರಿ ಬಾಯ್​






ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 4 =
Remember me
